|
ಜ್ಞಾನಪಠ್ಯಗಳನ್ನು ಗುರುತಿಸುವುದು
ಎನ್‌ಟಿಎಮ್‌ನ ಪ್ರಸ್ತುತ ಅನುವಾದಕ್ಕೆ ಜ್ಞಾನಪಠ್ಯಗಳನ್ನು ಗುರುತಿಸಲು ಮತ್ತು ಆಯ್ಕೆಪಟ್ಟಿಯನ್ನು
ಸಿದ್ಧಪಡಿಸಲು ಭಾರತೀಯ ವಿಶ್ವವಿದ್ಯಾನಿಲಯಗಳ ದತ್ತನಿಧಿಯಿಂದ ಅತ್ಯಂತ ಹೆಚ್ಚು ಬಾರಿ ಸೂಚಿಸಲಾದ ಪಠ್ಯಗಳ
ಪಟ್ಟಿಯನ್ನು ತೆಗೆದುಕೊಳ್ಳಲಾಗುವುದು. ಈ ಪಠ್ಯಗಳ ಪಟ್ಟಿಯನ್ನು ತಜ್ಞರು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ.
ಹೀಗೆ ಆಯ್ಕೆಮಾಡಲಾದ ಪಠ್ಯಗಳ ಬೇಡಿಕೆಯ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟ ವಿಷಯ ಮತ್ತು ಭಾಷೆಯ ಶಿಕ್ಷಕರು,
ವಿದ್ಯಾರ್ಥಿಗಳು ಮತ್ತು ತಜ್ಞರನ್ನು ಸಂಪರ್ಕಿಸಲಾಗುತ್ತದೆ. ಈ ಪಟ್ಟಿಯನ್ನು ಮತ್ತೊಂದು ಹಂತದಲ್ಲಿ
ಪರೀಕ್ಷಿಸಿ ಅತ್ಯಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ವರ್ಗದವರಿಗೆ ಉಪಯುಕ್ತವಾಗುವಂತೆ
ಮರುಸಿದ್ಧಪಡಿಸಲಾಗುವುದು. ಅಂತಿಮವಾಗಿ ಜ್ಞಾನಪಠ್ಯಗಳ ಉಪಸಮಿತಿ ಮತ್ತು ಎನ್‌ಟಿಎಮ್‌ನ ಯೋಜನಾ ಸಲಹಾ
ಸಮಿತಿ ಈ ಶೀರ್ಷಿಕೆಗಳನ್ನು ಅನುಮೋದಿಸುತ್ತದೆ.
ಆರಂಭಿಕ ಹಂತದಲ್ಲಿ ಎನ್‌ಟಿಎಮ್ 21 ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರು ಸೂಚಿಸಿರುವ ಪಠ್ಯಗಳ ಪಟ್ಟಿಗಳನ್ನು
ಸಂಗ್ರಹಿಸಿದೆ. ಈ ಪಟ್ಟಿಯಲ್ಲಿರುವ 105 ಶೀರ್ಷಿಕೆಗಳ ಅನುವಾದವನ್ನು ಪ್ರಕಟಿಸುವ ನಿಟ್ಟಿನಲ್ಲಿ ಎನ್‌ಟಿಎಮ್
ಕಾರ್ಯೋನ್ಮುಖವಾಗಿದೆ.
|
|
|