ಜ್ಞಾನಪಠ್ಯಗಳು

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಶೈಕ್ಷಣಿಕ ಸಾಮಗ್ರಿಗಳು ಎನ್.ಟಿ.ಎಂ. ಅಡಿಯಲ್ಲಿ ಜ್ಞಾನಪಠ್ಯಗಳಾಗುತ್ತವೆ. ಈ ಜ್ಞಾನಪಠ್ಯಗಳನ್ನು ಅನುವಾದಿಸಿ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವುದು ರಾಷ್ಟ್ರೀಯ ಅನುವಾದ ಮಿಷನ್ನಿನ ಒಂದು ಮುಖ್ಯ ಉದ್ದೇಶ.

ಕಾಲೇಜು / ವಿಶ್ವವಿದ್ಯಾಲಯ ಶಿಕ್ಷಣದ ಯಾವುದೇ ವಿಷಯದಲ್ಲಿ ಮೂಲಭೂತ ಎಂದು ಪರಿಗಣಿಸಿ ಸೂಚಿಸಲಾಗಿರುವ ಪಠ್ಯಪುಸ್ತಕಗಳು, ಪರಾಮರ್ಶನ ಗ್ರಂಥಗಳು ಮತ್ತು ಲೇಖನಗಳನ್ನು ಅನುವಾದಕ್ಕೆ ಸೇರಿಸಲಾಗಿದೆ. ಸ್ವಾಭಾವಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ವಿಶೇಷ ಗಮನ ನೀಡಲಾಗುವುದು.

ಎನ್.ಟಿ.ಎಂ. ಉನ್ನತ ಶಿಕ್ಷಣದ 69 ಮುಖ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಈ ವಿಷಯಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿವೆ. ವಿಷಯಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.

1. ವಯಸ್ಕರ ಶಿಕ್ಷಣ/ಮುಂದುವರೆದ ಶಿಕ್ಷಣ (ಆಂಡ್ರಾಲಜಿ /ವಯಸ್ಕರ ಶಿಕ್ಷಣ) 36. ಗೃಹ ವಿಜ್ಞಾನ
2. ಮಾನವಶಾಸ್ತ್ರ (ಭೌತಿಕ) 37. ಸಾರ್ವಜನಿಕ ಹಕ್ಕುಗಳು ಮತ್ತು ಕರ್ತವ್ಯಗಳು
3. ಮಾನವಶಾಸ್ತ್ರ (ಸಾಮಾಜಿಕ) 38. ಇನ್ಫೋರ್ಮಾಟಿಕ್ಸ್ (ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸೇರಿ)
4. ಅರಬ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಅಧ್ಯಯನಗಳು 39. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಕ್ಷೇತ್ರ ಅಧ್ಯಯನಗಳು
5. ಪುರಾತತ್ವಶಾಸ್ತ್ರ (ನಾಣ್ಯಶಾಸ್ತ್ರವನ್ನು ಸೇರಿ) 40. ಪತ್ರಿಕೋದ್ಯಮ/ ಮಾಧ್ಯಮ ಅಧ್ಯಯನ/ ಸಮೂಹ ಮಾಧ್ಯಮ
6. ವಾಸ್ತುಶಾಸ್ತ್ರ 41. ಕಾರ್ಮಿಕ ಕಲ್ಯಾಣ/ ಸಿಬ್ಬಂದಿ (HRD) ನಿರ್ವಹಣೆ/ ಕೈಗಾರಿಕಾ ಸಂಬಂಧಗಳು
7. ನಕ್ಷತ್ರಭೌತಶಾಸ್ತ್ರ / ಗಗನ ಭೌತಶಾಸ್ತ್ರ 42. ಕಾನೂನು
8. ಜೀವಭೌತಶಾಸ್ತ್ರ 43. ಭಾಷಾಶಾಸ್ತ್ರ
9. ಜೀವರಸಾಯನಶಾಸ್ತ್ರ 44. ನಿರ್ವಹಣೆ
10. ಜೈವಿಕ ತಂತ್ರ ಜ್ಞಾನ 45. ಹಸ್ತಪ್ರತಿಶಾಸ್ತ್ರ
11. ಸಸ್ಯಶಾಸ್ತ್ರ (ಸಾಮಾನ್ಯ) 46. ಗಣಿತಶಾಸ್ತ್ರ
12. ರಸಾಯನಶಾಸ್ತ್ರ (ಸಾಮಾನ್ಯ) 47. ವೈದ್ಯಶಾಸ್ತ್ರ (MBBS ಹಂತದಲ್ಲಿ)
13. ವಾಣಿಜ್ಯಶಾಸ್ತ್ರ 48. ಸೂಕ್ಷ್ಮಜೀವ ವಿಜ್ಞಾನ
14. ತೌಲನಿಕ ಸಾಹಿತ್ಯ 49. ವಸ್ತುಸಂಗ್ರಹಾಲಯಶಾಸ್ತ್ರ
15. ಗಣಕವಿಜ್ಞಾನ ಮತ್ತು ಅನ್ವಯಿಕಗಳು (ಕೃತಕ ಜ್ಞಾನ ಮತ್ತು ರೊಬೋಟಿಕ್ಸ್ ಸೇರಿ) 50. ಸಂಗೀತಶಾಸ್ತ್ರ
16. ಅಪರಾಧಶಾಸ್ತ್ರ ಮತ್ತು ವೈಜ್ಞಾನಿಕ ನ್ಯಾಯಶಾಸ್ತ್ರ 51. ಶಾಂತಿ/ ಗಾಂಧಿ ಅಧ್ಯಯನ
17. ಸಂಸ್ಕೃತಿ ಅಧ್ಯಯನ (ಭಾರತೀಯ ಸಂಸ್ಕೃತಿಯು ಸೇರಿ) 52. ಪ್ರದರ್ಶನ ಕಲೆಗಳು (ನೃತ್ಯ , ನಾಟಕ, ರಂಗಭೂಮಿ ಅಧ್ಯಯನ ಸೇರಿ)
18. ಸೈಬರ್ನೇಟಿಕ್ಸ್ 53. ತತ್ವಶಾಸ್ತ್ರ
19. ರಕ್ಷಣೆ ಮತ್ತು ಯುದ್ದಕೌಶಲ್ಯ ಅಧ್ಯಯನ 54. ದೈಹಿಕ ಶಿಕ್ಷಣ
20. ಅರ್ಥಶಾಸ್ತ್ರ 55. ಭೌತಶಾಸ್ತ್ರ (ಸಾಮಾನ್ಯ)
21. ಶಿಕ್ಷಣಶಾಸ್ತ್ರ 56. ಕಾವ್ಯಶಾಸ್ತ್ರ
22. ಇಂಜಿನಿಯರಿಂಗ್ - ವೈಮಾನಿಕ (ಅವಿಯಾನಿಕ್ಸ್ ಸೇರಿ) 57. ರಾಜ್ಯಶಾಸ್ತ್ರ
23. ಇಂಜಿನಿಯರಿಂಗ್ - ರಾಸಾಯನಿಕ (ಸೆರಾಮಿಕ್ ಮತ್ತು ಪಾಲಿಮರ್ ತಂತ್ರ ಜ್ಞಾನ ಸೇರಿ) 58. ಜನಸಂಖ್ಯಾ ಅಧ್ಯಯನ
24. ಇಂಜಿನಿಯರಿಂಗ್ - ಸಿವಿಲ್ 59. ಮನೋವಿಜ್ಞಾನ
25. ಇಂಜಿನಿಯರಿಂಗ್ - ಎಲೆಕ್ಟ್ರಾನಿಕ್ಸ್ 60. ಸಾರ್ವಜನಿಕ ಆಡಳಿತ
26. ಇಂಜಿನಿಯರಿಂಗ್ - ಎಲೆಕ್ಟ್ರಿಕಲ್ (ಟೆಲಿಕಮ್ಯೂನಿಕೇಷನ್ ಸೇರಿ) 61. ಧಾರ್ಮಿಕ ಅಧ್ಯಯನ/ ಧರ್ಮಗಳ ತೌಲನಿಕ ಅಧ್ಯಯನ
27. ಇಂಜಿನಿಯರಿಂಗ್ - ಮೆಕ್ಯಾನಿಕಲ್ (ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಮತ್ತು ಆಟೊಮೊಬೈಲ್ ಇಂಜಿನಿಯರಿಂಗ್ ಸೇರಿ ) 62. ಸಾಮಾಜಿಕ ವೈದ್ಯಶಾಸ್ತ್ರ ಮತ್ತು ಸಮುದಾಯ ಆರೋಗ್ಯ
28. ಪರಿಸರ ವಿಜ್ಞಾನ (ಪರಿಸರ ಇಂಜಿನಿಯರಿಂಗ್ ಸೇರಿ) 63. ಸಮಾಜ ಕಾರ್ಯ
29. ಮಾನವ ವಂಶಶಾಸ್ತ್ರ 64. ಸಮಾಜಶಾಸ್ತ್ರ
30. ಸಿನಿಮಾ ಅಧ್ಯಯನ 65. ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ
31. ಜಾನಪದ ಶಾಸ್ತ್ರ (ಜಾನಪದ ಸಾಹಿತ್ಯ ಮತ್ತು ಬುಡಕಟ್ಟು ಸಾಹಿತ್ಯ ಸೇರಿ) 66. ಅನುವಾದ ಅಧ್ಯಯನ
32. ತಳಿಶಾಸ್ತ್ರ, ಜನಾಂಗ ಶಾಸ್ತ್ರ, ಜೆನೆಟಿಕ್ ಇಂಜಿನಿಯರಿಂಗ್ 67. ದೃಶ್ಯ ಕಲೆಗಳು (ಚಿತ್ರಕಲೆ ಮತ್ತು ವರ್ಣಕಲೆ/ ಶಿಲ್ಪ ಕಲೆ/ ಗ್ರಾಫಿಕ್ ಕಲೆ/ ಅನ್ವಯಿಕ ಕಲೆ/ ಕಲೆಯ ಇತಿಹಾಸ)
33. ಭೂಗೋಳಶಾಸ್ತ್ರ 68. ಮಹಿಳಾ ಅಧ್ಯಯನ
34. ಭೂಗರ್ಭಶಾಸ್ತ್ರ 69. ಪ್ರಾಣಿಶಾಸ್ತ್ರ (ಸಾಮಾನ್ಯ)
35. ಇತಿಹಾಸ (ಸಾಮಾನ್ಯ)