|
ಅನುವಾದಕರ ಶಿಕ್ಷಣ ಕಾರ್ಯಕ್ರಮ
ಎನ್‌ಟಿಎಮ್‌ನ ಅನುವಾದಕರ ಶಿಕ್ಷಣ ಕಾರ್ಯಕ್ರಮದ ಮುಖ್ಯ ಉದ್ದೇಶ ಅನುವಾದಕರಿಗೆ ಜ್ಞಾನಪಠ್ಯಗಳ ಅನುವಾದದಲ್ಲಿ
ಶಿಕ್ಷಣ ನೀಡುವುದಾಗಿದೆ. ಅನುವಾದವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಬಯಸುವವರಿಗೆ ಈ ಕಾರ್ಯಕ್ರಮ ಶೈಕ್ಷಣಿಕ
ನೆರವು ನೀಡುತ್ತದೆ. ಭಾರತದಲ್ಲಿ ಅನುವಾದದ ಇತಿಹಾಸ ಮತ್ತು ಪರಂಪರೆ, ಜ್ಞಾನಪಠ್ಯಗಳ ಅನುವಾದದಲ್ಲಿ
ಎದುರಾಗುವ ಸಮಸ್ಯೆ ಮತ್ತು ಪರಿಹಾರಗಳು ಹಾಗೂ ಅನುವಾದದ ಪರಿಕರಗಳಾದ ನಿಘಂಟು, ಪದಕೋಶ ಮತ್ತು ತೆಸಾರಸ್ಗಳ
ಬಳಕೆಯ ಬಗ್ಗೆ ತರಬೇತಿ ನೀಡಲಾಗುವುದು. ಬಹುಮುಖ ಪ್ರತಿಭೆಯ ಮತ್ತು ದಕ್ಷ ವೃತ್ತಿಪರ ಅನುವಾದಕರನ್ನು
ತಯಾರುಮಾಡುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ. ಈ ಉದ್ದೇಶಕ್ಕಾಗಿ ಎನ್‌ಟಿಎಮ್ ಅನೇಕ ಕಮ್ಮಟ,
ವಿಚಾರಗೋಷ್ಠಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಟ್ರಾನ್ಸ್‌ಲೇಷನ್
ಟುಡೆ (ಎನ್‌ಟಿಎಮ್‌ನ ಅರ್ಧವಾರ್ಷಿಕ ನಿಯತಕಾಲಿಕೆ), ಎನ್‌ಟಿಎಮ್ ತಯಾರಿಸಿದ ದೃಕ್‌ಶ್ರವಣ ಮತ್ತು ಇತರೆ
ಕಲಿಕಾ ಸಾಮಗ್ರಿಗಳು ಅನುವಾದಕರಿಗೆ ತರಬೇತಿ ನೀಡುವಲ್ಲಿ ಮುಖ್ಯ ಸಾಧನಗಳಾಗುತ್ತವೆ.
|
|
|