ಪ್ರಕಟಣೆಗಳು

ಅನುವಾದ ಪ್ರಕ್ರಿಯೆಯನ್ನು ಹೆಚ್ಚು ವ್ಯವಸ್ಥಿತವಾಗಿಸಲು ಎನ್‌ಟಿಎಮ್ ಕೆಲವು ನಿರ್ದಿಷ್ಟ ಹಂತಗಳನ್ನು ಪಾಲಿಸುತ್ತದೆ. ಅವುಗಳೆಂದರೆ: ಅನುವಾದ ಮಾಡಬೇಕಾದ ಪಠ್ಯಗಳನ್ನು ಗುರುತಿಸುವುದು; ಗುರುತಿಸಲಾದ ಪಠ್ಯಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆದುಕೊಳ್ಳುವುದು; ಭಾರತೀಯ ಭಾಷೆಗಳ ಪ್ರಕಾಶಕರನ್ನು ಸಂಪರ್ಕಿಸುವುದು ಮತ್ತು ಸಂಪಾದಕೀಯ ಸಲಹಾ ತಂಡದ ಮಾರ್ಗದರ್ಶನದಲ್ಲಿ ಅನುವಾದಿತ ಪಠ್ಯವನ್ನು ಪರಿಶೀಲಿಸುವುದು. ಅನುವಾದಿತ ಪಠ್ಯದ ಪರಿಶೀಲನಾ ಕಾರ್ಯ ಎರಡು ಭಿನ್ನ ಹಂತಗಳಲ್ಲಿ ನಡೆಯುತ್ತದೆ. ಮೊದಲಿಗೆ ಅನುವಾದಕರು ಅನುವಾದಿಸಿದ ಪಠ್ಯದ ಮೊದಲ ಹತ್ತು ಪುಟಗಳನ್ನು ಪ್ರಾಥಮಿಕ ಪರಿಶೀಲನೆ ಮತ್ತು ಅನುಮೋದನೆಗಾಗಿ ಎನ್‌ಟಿಎಮ್ಗೆ ಸಲ್ಲಿಸಬೇಕು. ಅನುವಾದಿತ ಪಠ್ಯದ ಸಂಪೂರ್ಣ ಹಸ್ತಪ್ರತಿಯನ್ನು ಸಲ್ಲಿಸಿದಾಗ ಅಂತಿಮ ಹಂತದ ಪರಿಶೀಲನೆ ನಡೆಯುತ್ತದೆ. ಈ ರೀತಿಯ ಹಂತ-ಹಂತದ ಪರಿಶೀಲನಾ ವ್ಯವಸ್ಥೆ ಅನುವಾದದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ.