2-ವಾರಗಳ ಅನುವಾದ ತರಬೇತಿ ಕಾರ್ಯಕ್ರಮ

ಅರ್ಜಿ (ಡೌನ್‌ಲೋಡ್ ಮಾಡಿ ಭರ್ತಿ ಮಾಡಿ)
 
ಅನುವಾದಕರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವುದು ರಾಷ್ಟ್ರೀಯ ಅನುವಾದ ಮಿಷನ್ನಿನ (ಎನ್ಟಿಎಮ್) ಕೆಲಸಗಳಲ್ಲಿ ಮುಖ್ಯವಾದುದು. ಸಂಸ್ಥೆಯು ತರಬೇತಿ ಕಾರ್ಯಕ್ರಮ ಹಾಗೂ ಓರಿಯಂಟೇಶನ್ ಕಾರ್ಯಕ್ರಮಗಳ ಮೂಲಕ ಅನುವಾದಕರಿಗೆ ತರಬೇತಿ ನೀಡುತ್ತದೆ. ಅನುವಾದದಲ್ಲಿ ಸರ್ಟಿಫಿಕೆಟ್ ಮತ್ತು ಡಿಪ್ಲಮೋ ಕೋರ್ಸುಗಳನ್ನು ನೀಡುವ ಪ್ರಯತ್ನಗಳು ನಡೆಯುತ್ತಿವೆ.

2-ವಾರಗಳ ಅನುವಾದ ತರಬೇತಿ ಕಾರ್ಯಕ್ರಮ

ಯಾರು ಭಾಗವಹಿಸಬಹುದು? ಹವ್ಯಾಸಕ್ಕಾಗಿ ಅನುವಾದ ಮಾಡುವಂತವರು ಅಥವಾ ಅನುವಾದ ಕ್ಷೇತ್ರವನ್ನು ವೃತ್ತಿಯನ್ನಾಗಿ ಅಯ್ಕೆ ಮಾಡಿಕೊಳ್ಳಲು ಬಯಸುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ಕೌಶಲಗಳನ್ನು ಸುಧಾರಿಸಲು ಬಯಸುವ ವೃತ್ತಿಪರ ಅನುವಾದಕರು ಮತ್ತು ಅನುವಾದ ಅಧ್ಯಯನ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಬಹುದು. ಈ ಕಾರ್ಯಕ್ರಮವು ಸಾಮಾನ್ಯವಾಗಿ (ಎ) ವಿವಿಧ ವಿಶ್ವವಿದ್ಯಾಲಯಗಳು / ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿರುವ ವೃತ್ತಿಜೀವನದ ಆರಂಭಿಕ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು, (ಬಿ) ವಿವಿಧ ಸರ್ಕಾರಿ ಮತ್ತು ಅರೆ-ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಭಾಷಾ ಅಧಿಕಾರಿಗಳು, (ಸಿ) ಸಿಎಸ್‌ಟಿಟಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು, ಇತರರನ್ನು ಒಳಗೊಂಡಿರುತ್ತದೆ.

ಎಲ್ಲಿ? ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆವರಣದಲ್ಲಿರುವ ರಾಷ್ಟ್ರೀಯ ಅನುವಾದ ಮಿಷನ್‌ನಲ್ಲಿ ಅನುವಾದಕರಿಗೆ ತರಬೇತಿ ಮತ್ತು ಓರಿಯಂಟೇಶನ್ ಕಾರ್ಯಕ್ರಮಗಳು ನಡೆಯುತ್ತವೆ. ವಿವಿಧ ಸಂಸ್ಥೆಗಳ ಸಹಯೋಗ ಇದ್ದಾಗ ಇತರ ಸ್ಥಳಗಳಲ್ಲಿಯು ಕೂಡ ಈ ಕಾರ್ಯಕ್ರಮಗಳು ಸಹಾ ನಡೆಯುತ್ತವೆ.

 
ಶುಲ್ಕ: ಈ ಕಾರ್ಯಕ್ರಮಕ್ಕೆ ಯಾವುದದೇ ಶುಲ್ಕವಿರುವುದಿಲ್ಲ. ಆದರೂ ಆಭ್ಯರ್ಥಿಯು ಕಾರ್ಯಕ್ರಮದ ಆರಂಭದಲ್ಲಿ ರೂ. 500/- ಮೊತ್ತವನ್ನು ಜಮಾ ಮಾಡಬೇಕಾಗುತ್ತದೆ. ಈ ಹಣವನ್ನು ಮಿಷನ್ನಿನ ‘ಟ್ರಾನ್ಸ್‌ಲೇಷನ್ ಟುಡೆ’ ಜರ್ನಲ್‌ನ ಒಂದು ವರ್ಷದ ಅವಧಿಯ ಚಂದಾದಾರಿಕೆಗೆ ಸರಿದೂಗಿಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ www.ciil.org / www.ntm.org.in ನ ‘Announcements’ ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಸಂಬಂಧಿಸಿದ ಪ್ರಮಾಣಪತ್ರಗಳು ಮತ್ತು ಪ್ರಶಂಸಾಪತ್ರಗಳ ಪ್ರತಿಗಳೊಂದಿಗೆ, ಸಹಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
  ಯೋಜನಾ ನಿರ್ದೇಶಕರು,
ರಾಷ್ಟ್ರೀಯ ಅನುವಾದ ಮಿಷನ್
ಭಾರತೀಯ ಭಾಷಾ ಸಂಸ್ಥಾನ,
ಮಾನಸಗಂಗೋತ್ರಿ, ಹುಣಸೂರು ರಸ್ತೆ,
ಮೈಸೂರು- 570006 ಕರ್ನಾಟಕ

ತರಬೇತುದಾರರು ಯಾರು? ಅನುವಾದ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರ ತಂಡವನ್ನು ಎನ್‌ಟಿಎಮ್ ಹೊಂದಿದೆ. ಕೆಲವು ತರಬೇತುದಾರರು ಎನ್‌ಟಿಎಮ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಹಾಗೆಯೇ ವಿವಿಧ ಸಂಸ್ಥೆಗಳ ತಜ್ಞರು ಸಹ ತರಬೇತಿ ನೀಡುತ್ತಾರೆ. ಗಮನಿಸಿ: ಇಲ್ಲಿ ವರ್ಷವಿಡೀ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅರ್ಜಿಯನ್ನು ಕಳುಹಿಸುವ ಲಕೋಟೆಯ ಮೇಲ್ಭಾಗದ ಎಡಮೂಲೆಯಲ್ಲಿ 'Application for NTM Translation Training Programme’ ಎಂದು ಬರೆಯಬೇಕು. ಸೇವೆಯಲ್ಲಿರುವವರು ಅಥವಾ ನಿಯಮಿತ ನಿಯೋಜನೆಯಲ್ಲಿರುವವರು ತಮ್ಮ ಉದ್ಯೋಗದಾತರು ಅಥವಾ ಸಂಸ್ಥೆಯ ಮುಖ್ಯಸ್ಥರ ಮೂಲಕ ತಮ್ಮ ಅರ್ಜಿಗಳನ್ನು ಕಳುಹಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಸಿಐಐಎಲ್ ಮತ್ತು ಎನ್‌ಟಿಎಮ್ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ.৷

ನಮ್ಮನ್ನು ಸಂಪರ್ಕಿಸಿ: ದಯವಿಟ್ಟು ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಇಲ್ಲಿ ಕೇಳಿರಿ: ntmtrainingprog2016[at]gmail[dot]com