|
ಭಾರತೀಯ ವಿಶ್ವವಿದ್ಯಾನಿಲಯಗಳ ದತ್ತನಿಧಿ
ಭಾರತೀಯ ವಿಶ್ವವಿದ್ಯಾನಿಲಯಗಳ ದತ್ತನಿಧಿ ಎನ್‌ಟಿಎಮ್‌ನ ಒಂದು ಆರಂಭಿಕ ಕಾರ್ಯವಾಗಿದ್ದು ಭಾರತದ ಎಲ್ಲಾ
ವಿಶ್ವವಿದ್ಯಾನಿಲಯ ಮತ್ತು ಶಿಕ್ಷಣ ಸಂಸ್ಥೆಗಳ ಮಾಹಿತಿಯನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ದತ್ತನಿಧಿ
ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸುತ್ತಿರುವ ಕೋರ್ಸುಗಳು, ಅದರ ಪಠ್ಯಕ್ರಮ ಮತ್ತು ಓದುವಪಟ್ಟಿ ಕುರಿತ
ಮಾಹಿತಿಯನ್ನು ನೀಡುತ್ತದೆ. ಇಲ್ಲಿ ಪಟ್ಟಿಮಾಡಲಾದ ಶಿಕ್ಷಣ ಸಂಸ್ಥೆಗಳ ವೆಬ್-ವಿಳಾಸವನ್ನು ಸಹ ಕಾಣಬಹುದು.
ಪ್ರಸ್ತುತ ಈ ದತ್ತನಿಧಿಯು ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ದಿಂದ ಅಂಗೀಕೃತಗೊಂಡ 155 ಭಾರತೀಯ
ವಿಶ್ವವಿದ್ಯಾನಿಲಯಗಳ ವಿವರಗಳನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯಗಳ ದತ್ತನಿಧಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ
ಬೋಧಿಸುತ್ತಿರುವ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಪಠ್ಯಗಳು ಮತ್ತು ಪಠ್ಯಕ್ರಮಗಳನ್ನು ಕುರಿತ ಮಾಹಿತಿ
ದೊರೆಯುತ್ತದೆ. ಈ ಸಮಗ್ರ ಮಾಹಿತಿ ಭಂಡಾರವು ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದಲ್ಲಿ ಸೂಚಿಸಲಾದ ಪುಸ್ತಕದ
ಶೀರ್ಷಿಕೆಗಳ ಡಿಜಿಟೈಸ್ ಮಾಡಿದ ಪಟ್ಟಿಯನ್ನು ಮತ್ತು ಅವುಗಳ ಲೇಖಕರು, ಪ್ರಕಾಶಕರು ಇತ್ಯಾದಿ ವಿವರಗಳನ್ನೂ
ಒಳಗೊಂಡಿದೆ.
ದತ್ತನಿಧಿಯ ಈ ಶೋಧನಾ ಕಾರ್ಯವ್ಯವಸ್ಥೆಯು ಸಂಶೋಧಕರು ಹಾಗೂ ವಿದ್ವಾಂಸರುಗಳಿಗೆ ದೇಶದ ಯಾವುದೇ ಶಿಕ್ಷಣ
ಸಂಸ್ಥೆಯಲ್ಲಿ ಲಭ್ಯವಿರುವ ಕೋರ್ಸುಗಳ ಹಾಗೂ ಅದರ ಪಠ್ಯಕ್ರಮದ ಇತ್ತೀಚಿನ ಮಾಹಿತಿ ದೊರಕುವಂತೆ ಮಾಡುತ್ತದೆ.
ವಿಶ್ವವಿದ್ಯಾನಿಲಯದ ಮಂಡಳಿಗಳು ತಮ್ಮ ಅಧ್ಯಯನ ಕ್ರಮವನ್ನು ಪರಿಷ್ಕರಿಸುವ ಮೊದಲು ಇತರೆ ವಿಶ್ವವಿದ್ಯಾಲಯಗಳಲ್ಲಿ
ಜಾರಿಯಲ್ಲಿರುವ ಕೋರ್ಸು ಮತ್ತು ಪಠ್ಯಕ್ರಮ ರಚನಾ ವಿಧಾನದ ವಿವರಗಳನ್ನು ಪರಿಶೀಲಿಸಬಹುದು. ಇದು ಗ್ರಾಮೀಣ
ಮತ್ತು ನಗರ ಪ್ರದೇಶದ ವಿಶ್ವವಿದ್ಯಾನಿಲಯಗಳ ನಡುವೆ ಸಮಾನತೆಯನ್ನು ಉಂಟುಮಾಡುವಲ್ಲಿ ಸಹಾಯವಾಗಬಹುದು.
ಮುಂದಿನ ದಿನಗಳಲ್ಲಿ ಎನ್‌ಟಿಎಮ್ ಈ ದತ್ತನಿಧಿಯನ್ನು ಎಲ್ಲಾ ಆಸಕ್ತರಿಗೂ ದೊರಕುವಂತೆ ಮಾಡಲು ಮುದ್ರಿತ
ರೂಪವೂ ಸೇರಿದಂತೆ ಸಿಡಿ ಮತ್ತು ಇತರೆ ಅತ್ಯಂತ ಸುಲಭ ಮಾಧ್ಯಮದಲ್ಲಿ ಲಭ್ಯವಾಗುವಂತೆ ಮಾಡುತ್ತದೆ.
|
|
|