ಗ್ರಂಥಸೂಚಿ ದತ್ತನಿಧಿ

ಉದ್ದೇಶ
ಭಾರತದಲ್ಲಿ ಅನುವಾದಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳ ತೀರುವೆ ಮನೆಯಾಗುವುದು.
ತಾವು ಸಂಗ್ರಹಿಸಿದ ದತ್ತಾಂಶದೊಂದಿಗೆ ದತ್ತನಿಧಿಯನ್ನು ವಿನ್ಯಾಸಗೊಳಿಸಲು ಸಲಹೆಗಳನ್ನು ನೀಡಿರುವ ವಡೊದರಾದ ಭಾಷಾ ಸಂಶೋಧನಾ ಕೇಂದ್ರದ ಪ್ರೊ. ಜಿ.ಎನ್. ದೇವಿಯವರಿಗೆ ವಿಶೇಷ ಕೃತಜ್ಞತೆಗಳು.

ಗ್ರಂಥಸೂಚಿ ಯಾಕೆ?
ಗ್ರಂಥಸೂಚಿ ಪುಸ್ತಕಗಳ ವಿವರಣೆಯಾಗಿದೆ. ಇದು ಒಂದು ವಿಷಯ, ಭಾಷೆ, ಅವಧಿ ಮುಂತಾದ ಯಾವುದಾದರು ಸಾಮಾನ್ಯ ಅಂಶವನ್ನು ಒಳಗೊಂಡಿರುವ ಶೀರ್ಷಿಕೆಗಳ ಪಟ್ಟಿಯಾಗಿದ್ದು ಇದು ಸಮಗ್ರ ಮತ್ತು ಆಯ್ಕೆಯ ಸ್ವಭಾವದ್ದಾಗಿರಬಹುದು.

ಕೊಟ್ಟಿರುವ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಈ ಗ್ರಂಥಸೂಚಿಯ ಉದ್ದೇಶವಾಗಿದೆ. ಇದರಿಂದ ವಿಷಯದಲ್ಲಿ ಜ್ಞಾನವನ್ನು ಅರಸುವವರಿಗೆ ಪ್ರವೇಶ ಸುಲಭವಾಗುತ್ತದೆ. ಈ ಮಾಹಿತಿ ಒಂದು ಪುಸ್ತಕ ಅಥವಾ ಆ ಚಟುವಟಿಕೆಗಳಿಗೆ ಸಂಬಂಧಿಸಿದ ಉತ್ಪನ್ನವಾಗಿರುತ್ತದೆ. ಆದ್ದರಿಂದ ಒಂದು ರೀತಿಯಲ್ಲಿ ಗ್ರಂಥಸೂಚಿ ಪುಸ್ತಕದ ಇತಿಹಾಸವನ್ನು ನಮಗೆ ತಿಳಿಸುತ್ತದೆ.

ಅನುವಾದ ದತ್ತನಿಧಿ ಗ್ರಂಥಸೂಚಿಯ ಅಭಿವೃದ್ಧಿಯ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
  ಆಕರಗಳು:
  » ಅನುಕೃತಿ (ಸಿ.ಐ.ಐ.ಎಲ್.- ಸಾಹಿತ್ಯ ಅಕಾಡೆಮಿ ಮತ್ತು ಎನ್.ಬಿ.ಟಿ.)
  » ಭಾಷಾ ಸಂಶೋಧನಾ ಕೇಂದ್ರ, ವಡೋದರಾ
  » ಬ್ರಿಟಿಷ್ ಗ್ರಂಥಾಲಯದ ಪೌರಸ್ತ್ಯ ಮತ್ತು ಭಾರತ ಕಚೇರಿ ಸಂಗ್ರಹ
  » ವಿವಿಧ ಪ್ರಕಾಶಕರ ವಿಷಯ ಪಟ್ಟಿಗಳು
  » ಕೇಂದ್ರೀಯ ಪರಾಮರ್ಶನ ಗ್ರಂಥಾಲಯ, ಕೋಲ್ಕತಾ
  » ಭಾರತೀಯ ಸಾಹಿತ್ಯದ ರಾಷ್ಟ್ರೀಯ ಗ್ರಂಥಸೂಚಿ (ಎನ್.ಬಿ.ಐ.ಎಲ್.)
  » ದಕ್ಷಿಣ ಏಷ್ಯಾ ಒಕ್ಕೂಟದ ಕ್ಯಾಟಲಾಗ್, (ಚಿಕಾಗೋ ವಿಶ್ವವಿದ್ಯಾಲಯ ಗ್ರಂಥಾಲಯದ ದಕ್ಷಿಣ ಏಷ್ಯಾ ವಿಭಾಗ)
  » ಯುನೆಸ್ಕೋ
  » ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್, ಅರ್ಬನ್ ಷಾಂಪೇನ್. ಪ್ರಸ್ತುತ, ಎನ್.ಟಿ.ಎಂ. ಹಲವಾರು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಮತ್ತು ಅದನ್ನು ಡಿಜಿಟೈಸ್ ಮಾಡಿ ಶೀರ್ಘದಲ್ಲೇ ದತ್ತನಿಧಿಗೆ ಸೇರಿಸುತ್ತದೆ.

ಗ್ರಂಥಸೂಚಿ ಶೈಲಿಗಳು

ಗ್ರಂಥಸೂಚಿಯ ಶೈಲಿಗಳಿಗೆ ಸಂಬಂಧಿಸಿದಂತೆ ಒಂದು ಗ್ರಂಥಸೂಚಿಯಲ್ಲಿ ಬೇರೆ ಬೇರೆ ಮೂಲಗಳ ವಿವಿಧ ರೀತಿಯ ಮಾದರಿಗಳನ್ನು ಹೊಂದಿವೆ.

ಈ ಫಾರ್ಮ್ಯಾಟಿಗೆ ಸಾಮಾನ್ಯವಾಗಿ ಬಳಸಲಾಗುತ್ತಿರುವ ಎರಡು ಮಾರ್ಗದರ್ಶನ ಸೂತ್ರಗಳೆಂದರೆ, ಎಂ.ಎಲ್.ಎ. (ಮಾಡರ್ನ್ ಲಾಂಗ್ವೇಜ್ ಅಸೋಸಿಯೇಷನ್) ಮತ್ತು ಎ.ಪಿ.ಎ. (ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಷನ್) ವಿಧಾನಗಳು. ವಿವಿಧ ವಿಷಯಗಳ ಗ್ರಂಥಸೂಚಿ ತಯಾರಿಸುತ್ತಿರುವ ಅಥವಾ ಸಂಶೋಧನಾ ಮೂಲಗಳಲ್ಲಿ ಮಾಡರ್ನ್ ಲಾಂಗ್ವೇಜ್ ಅಸೋಸಿಯೇಷನ್ ಶೈಲಿಯ ವ್ಯಾಪಕ ಬಳಕೆಯನ್ನು ಕಾಣಬಹುದು. ರಾಷ್ಟ್ರೀಯ ಅನುವಾದ ಮಿಶನ್ ಸಹ ಈ ಶೈಲಿಯನ್ನು ಅನುಸರಿಸುತ್ತಿದ್ದು, ಇದರಲ್ಲಿ ಅನನ್ಯ ಸಾಂಖ್ಯಿಕ ಗುರುತಿನ ವ್ಯವಸ್ಥೆಯೂ ಸೇರಿದೆ.

ಎನ್.ಟಿ.ಎಂ. ಅಭಿವೃದ್ಧಿಪಡಿಸಿರುವ ಗ್ರಂಥಸೂಚಿಯ ವಿಶಿಷ್ಟ ಲಕ್ಷಣಗಳು

ಎನ್.ಟಿ.ಎಂ. ಅಭಿವೃದ್ಧಿಪಡಿಸಿರುವ ಈ ಗ್ರಂಥಸೂಚಿ ಸಾಹಿತ್ಯ ಮತ್ತು ಸಾಹಿತ್ಯೇತರ ಪ್ರಕಾರಗಳೆರಡಕ್ಕೂ ಸೇರಿದ ಅನುವಾದ ಶೀರ್ಷಿಕೆಗಳತ್ತ ಗಮನಹರಿಸುತ್ತದೆ. ಇದಲ್ಲದೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇರುವ ಅಥವಾ ಇಲ್ಲದಿರುವ ಭಾಷೆಯನ್ನು ಗಣನೆಗೆ ತೆಗೆದುಕೊಳ್ಳದೆ ಭಾರತದ ಎಲ್ಲಾ ಭಾಷೆಗಳಲ್ಲಿ ಪ್ರಕಟಗೊಂಡಿರುವ ಅನುವಾದದ ಶೀರ್ಷಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲು ಇದು ಪ್ರಯತ್ನಿಸುತ್ತಿದೆ.

ವಿದೇಶಿ ಭಾಷೆಗಳಿಂದ ಭಾರತೀಯ ಭಾಷೆಗಳಿಗೆ ಅದೇ ರೀತಿ ಭಾರತೀಯ ಭಾಷೆಗಳಿಂದ ವಿದೇಶಿ ಭಾಷೆಗಳಿಗೆ ಅನುವಾದಗೊಂಡ ಶೀರ್ಷಿಕೆಗಳ ಮಾಹಿತಿಯನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯೂ ಈ ಕಾರ್ಯಕ್ರಮದ ಒಂದು ಭಾಗವಾಗಿದೆ.

ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಪುಸ್ತಕಗಳಿಗೆ ಈ ಗ್ರಂಥಸೂಚಿಯ ಮೂಲಕ ಒಂದು ಅನನ್ಯ ಗುರುತಿನ ಸಂಖ್ಯೆ ಸೂಚಿಸುವುದನ್ನು ಎನ್.ಟಿ.ಎಂ. ಪ್ರಸ್ತಾಪಿಸುತ್ತದೆ. ಇದನ್ನು ISTN (ಇಂಡಿಯನ್ ಸ್ಟ್ಯಾಂಡರ್ಡ್ ಟ್ರಾನ್ಸ್ಲೇಶನ್ ನಂಬರ್) ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಪ್ರಕಟಗೊಂಡಿರುವ ಅನುವಾದ ಶೀರ್ಷಿಕೆಗಳ ಲೆಕ್ಕವನ್ನು ಇಟ್ಟುಕೊಳ್ಳುವ ಉದ್ದೇಶದಿಂದ ISTN ರಚಿಸಲಾಗಿದೆ. ಕೊಟ್ಟಿರುವ ಭಾಷೆಯಲ್ಲಿ ಪ್ರಕಟಿಸಿದ ಪುಸ್ತಕದ ಸಂಖ್ಯೆಯ ಬಗ್ಗೆ ಯೋಚಿಸಲು ಹಾಗೂ ನಿರ್ಧಿಷ್ಟ ವಿಭಾಗದಲ್ಲಿ, ನಿರ್ಧಿಷ್ಟ ವರ್ಷ ಮುಂತಾದ ವಿವರ ಪಡೆಯಲು ಇದು ಖಂಡಿತವಾಗಿಯೂ ಸಂಶೋಧಕರಿಗೆ, ವಿದ್ವಾಂಸರಿಗೆ, ಜ್ಞಾನವನ್ನು ಅರಸುವವರಿಗೆ ಸಹಾಯಕವಾಗುತ್ತದೆ.

ಎನ್.ಟಿ.ಎಂ. ಈ ಮಾಹಿತಿಯನ್ನು ವೆಬ್ ಆಧಾರಿತ ದತ್ತನಿಧಿಯನ್ನಾಗಿಸುವ ಮೂಲಕ ಇದಕ್ಕೆ ಪ್ರವೇಶವನ್ನು ಸುಗಮಗೊಳಿಸಲು ನಿರ್ಧರಿಸುತ್ತದೆ. ಹೊಸ ಮಾಹಿತಿಯೊಂದಿಗೆ ದತ್ತನಿಧಿಯನ್ನು ಉತ್ತಮಗೊಳಿಸಲು ಸಹ ಇದು ಅವಕಾಶವನ್ನು ಒದಗಿಸುತ್ತದೆ.

ಅನುವಾದದದ ದತ್ತನಿಧಿಯಲ್ಲಿ ಇಲ್ಲದ ಮಾಹಿತಿ ನಿಮ್ಮಲ್ಲಿದ್ದರೆ ಆ ಮಾಹಿತಿಯನ್ನು ದತ್ತನಿಧಿಗೆ ಸೇರಿಸುವುದರ ಮೂಲಕ ಎನ್.ಟಿ.ಎಂ.ಗೆ ಸಹಾಯ ಮಾಡಿ ಎಂದು ಆಹ್ವಾನಿಸುತ್ತದೆ. ನೀವು ಬಳಕೆದಾರರ ಖಾತೆಯನ್ನು ತೆರೆದು ನಿಮಗೆ ತಿಳಿದಿರುವ ಅನುವಾದಗಳ ಕುರಿತ ದಾಖಲೆಯನ್ನು ಸೃಷ್ಟಿಸಬಹುದು. ನೀವು ಮಾಹಿತಿಯನ್ನು ntmciil@gmail.comಗೆ ಕೂಡ ಕಳುಹಿಸಬಹುದು. ಎನ್.ಟಿ.ಎಂ. ಅದನ್ನು ದತ್ತನಿಧಿಗೆ ಸೇರಿಸುತ್ತದೆ. ನೀವು ಪ್ರಕಾಶಕರಾಗಿದ್ದರೆ, ನಿಮ್ಮ ಇತ್ತೀಚಿನ ಅನುವಾದಗಳ ಮಾಹಿತಿಯನ್ನು ಬಳಕೆದಾರ ಇನ್ಪುಟ್ ಸೌಲಭ್ಯದ ಮೂಲಕ ನೇರವಾಗಿ ದತ್ತನಿಧಿಗೆ ಸೇರಿಸಬಹುದು. ನೀವು ಮಾಹಿತಿಯನ್ನು ntmciil@gmail.comಗೆ ಕೂಡ ಕಳುಹಿಸಬಹುದು. ಇದನ್ನು ಎನ್.ಟಿ.ಎಂ. ತನ್ನ ದತ್ತನಿಧಿಯಲ್ಲಿ ಸೇರಿಸಿಕೊಳ್ಳುತ್ತದೆ.

ಗ್ರಂಥಸೂಚಿ ಹುಡುಕು

ಭಾರತೀಯ ಭಾಷೆಗಳಲ್ಲಿರುವ ಯಾವುದೇ ಅನುವಾದ ಶೀರ್ಷಿಕೆಗಳ ಮಾಹಿತಿಗಾಗಿ ಇಲ್ಲಿ ಹುಡುಕಿ.