ಅನುವಾದಕರ ಕೈಪಿಡಿ

ಭಾರತೀಯ ಭಾಷೆಗಳಲ್ಲಿ ಜ್ಞಾನಪಠ್ಯಗಳನ್ನು ಅನುವಾದ ಮಾಡಬಯಸುವವರಿಗೆ ಈ ಕೈಪಿಡಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಮಾರ್ಗದರ್ಶನ ಒದಗಿಸುತ್ತದೆ. ಈ ಕೈಪಿಡಿಗೆ ಪೂರಕ ಮಾಹಿತಿಯನ್ನು ಎನ್‌ಟಿಎಮ್ ದೇಶಾದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ನಡೆಸಿದ ಶೈಕ್ಷಣಿಕ ಕಾರ್ಯಕ್ರಮಗಳಿಂದ ಸಂಗ್ರಹಿಸಲಾಗುತ್ತದೆ. ಅನುವಾದಕರ ಅನುವಾದ ಕೌಶಲ್ಯವನ್ನು ಮತ್ತಷ್ಟು ಉತ್ತಮಪಡಿಸಲು ತಜ್ಞರಿಂದ ಪಡೆದ ಸಲಹೆ ಸೂಚನೆಗಳನ್ನು ಈ ಕೈಪಿಡಿಯಲ್ಲಿ ಸೇರಿಸಲಾಗುತ್ತದೆ.