|
ನಿಘಂಟು ಮತ್ತು ಪದಕೋಶಗಳ ದತ್ತನಿಧಿ
ನಿಘಂಟು ಮತ್ತು ಪದಕೋಶಗಳ ದತ್ತನಿಧಿಯು ಬಳಕೆದಾರರಿಗೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಏಕಭಾಷೀಯ,
ದ್ವಿಭಾಷೀಯ ಮತ್ತು ಬಹುಭಾಷಿಯ ನಿಘಂಟುಗಳ ಸಮಗ್ರ ಮಾಹಿತಿಯನ್ನು ಪಡೆಯಲು ಅನುವುಮಾಡುತ್ತದೆ. ಅಲ್ಲದೆ
ವಿವಿಧ ವಿಷಯಗಳ ಪಾರಿಭಾಷಿಕ ಪದಕೋಶ ಮತ್ತು ಭಾರತೀಯ ಭಾಷೆಗಳ ತೆಸಾರಸ್ಗಳ ಮಾಹಿತಿಯನ್ನು ಒದಗಿಸುತ್ತದೆ.
ಎನ್‌ಟಿಎಮ್‌ನ ನಿಯೋಜಿತ ಕಾರ್ಯವನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಲು ಜ್ಞಾನಪಠ್ಯಗಳನ್ನು ಅನುವಾದ
ಮಾಡುವವರಿಗೆ ಉತ್ತಮ ದ್ವಿಭಾಷಾ ನಿಘಂಟುಗಳು ಮತ್ತು ವಿಷಯ-ನಿರ್ದಿಷ್ಟ/ಪಠ್ಯ-ನಿರ್ದಿಷ್ಟ ಪದಕೋಶಗಳನ್ನು
ಬಳಸಬೇಕು. ಈ ಪಠ್ಯ-ನಿರ್ದಿಷ್ಟ ಪದಕೋಶಗಳು ಅನುವಾದಕರು ಗುಣಮಟ್ಟದ ಪದಗಳನ್ನು ಬಳಸಲು ಸಹಾಯಮಾಡುತ್ತವೆ.
|
|
|
|