ಅನುವಾದಕರ ದೃಢೀಕರಣ ಮತ್ತು ತರಬೇತಿ

ಎನ್‌.ಟಿ.ಎಂ.ನ ವಿಸ್ತೃತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ರಾಷ್ಟ್ರದಲ್ಲಿ ಅನುವಾದವನ್ನು ಉದ್ಯಮವನ್ನಾಗಿ ಸ್ಥಾಪಿಸುವಲ್ಲಿ ಅನುವಾದಕರ ದೃಢೀಕರಣ ಎನ್‌.ಟಿ.ಎಂ.ನ ಒಂದು ಪ್ರಮುಖ ಕಾರ್ಯನೀತಿಯಾಗಿದೆ. ಹೀಗೆ ಮಾಡುವುದರಿಂದ ಅನುವಾದಕರಿಗೆ ಅದ್ಭುತ ವ್ಯಾಪ್ತಿಯನ್ನು ಸೃಷ್ಠಿಸಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಎನ್‌.ಟಿ.ಎಂ. ನಂಬಿಕೆ ಹೊಂದಿದೆ.

ಎನ್‌.ಟಿ.ಎಂ. ಅನುವಾದಕರ ರಾಷ್ಟ್ರೀಯ ನೋಂದಣಿಯನ್ನು ನಿರ್ವಹಿಸುತ್ತಿದ್ದು ಇದುವರೆಗೂ 5000ಕ್ಕೂ ಹೆಚ್ಚು ಅನುವಾದಕರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಎನ್‌.ಟಿ.ಎಂ. ಬೇರೆ ಬೇರೆ ಭಾಷೆ ಮತ್ತು ಕ್ಷೇತ್ರಗಳ ತಜ್ಞರನ್ನು ತೊಡಗಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಅನುವಾದಕರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ ಮತ್ತು ಅವರಿಂದ ಸಲಹೆಗಳನ್ನೂ ಪಡೆದುಕೊಂಡಿದೆ.

ಪ್ರಸ್ತುತ, ಅನುವಾದಕರ ದೃಢೀಕರಣ ಮತ್ತು ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯ ಅನುವಾದ ಅಧ್ಯಯನ ಮತ್ತು ತರಬೇತಿ ಶಾಲೆ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯ ಮುಂತಾದ ಏಜೆನ್ಸಿ ಮತ್ತು ವ್ಯಕ್ತಿಗಳೊಡನೆ ಎನ್‌.ಟಿ.ಎಂ. ಸಲಹೆಸೂಚನೆ ಪಡೆಯುತ್ತಿದೆ. ಎನ್‌.ಟಿ.ಎಂ. ಈ ದೃಢೀಕರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಸಂಸ್ಥೆ ಮತ್ತು ಏಜೆನ್ಸಿಗಳನ್ನು ಪ್ರತಿನಿಧಿಸುವ ತಜ್ಞರ ತಂಡವನ್ನು ತೊಡಗಿಸಿಕೊಂಡು ಕೆಲವು ವಿಚಾರಪೂರ್ಣ ಗೋಷ್ಠಿಗಳನ್ನು ಆಯೋಜಿಸಿದೆ. ದೃಢೀಕರಣದ ವಿಧಾನ ಮತ್ತು ಮಾರ್ಗಗಳನ್ನು ವೆಬ್ಸೈಟ್ನಲ್ಲಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.

ಎನ್‌.ಟಿ.ಎಂ. ಅನುವಾದಕರ ತರಬೇತಿ ಕಾರ್ಯಕ್ರಮವನ್ನು ಅಭಿವೃದ್ದಿಪಡಿಸಲು ಆಲೋಚಿಸುತ್ತಿದೆ. ಭಾರತ ಹಾಗೂ ವಿದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ಅನುವಾದಕರ ತರಬೇತಿ ಕೋರ್ಸುಗಳ ಪಠ್ಯಕ್ರಮ ಮತ್ತು ಕಲಿಕಾ ಸಾಮಗ್ರಿಗಳ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ. ಎನ್‌.ಟಿ.ಎಂ. ತರಬೇತಿ ಕಾರ್ಯಕ್ರಮ ರೂಪಿಸಲು ತಜ್ಞರು ಮತ್ತು ವಿವಿಧ ಸಂಸ್ಥೆಗಳೊಂದಿಗೂ ಕೆಲಸಮಾಡುತ್ತಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ