|
ಉಗಮ
ರಾಷ್ಟ್ರೀಯ ಅನುವಾದ ಮಿಶನ್ ಯೋಜನೆಯ ಆಲೋಚನೆಯು ಮೂಲತಃ ಭಾರತದ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್
ಅವರಿಂದ ಬಂದದ್ದಾಗಿದೆ. ರಾಷ್ಟ್ರೀಯ ಜ್ಞಾನ ಆಯೋಗದ ಮೊದಲ ಸಭೆಯಲ್ಲಿ ಅವರು ಪ್ರಸ್ತಾಪಿಸಿದ್ದೇನೆಂದರೆ
ಅನುವಾದಗೊಂಡ ಸಂಕೀರ್ಣ ವಿಮರ್ಶಾತ್ಮಕ ಜ್ಞಾನ ಕ್ಷೇತ್ರಗಳಲ್ಲಿ ಇರುವ ವಿಷಯ /ಸಾಮಗ್ರಿಗಳು ಅನುವಾದಗೊಳ್ಳುವುದರಿಂದ
ಜನರ ಜ್ಞಾನ ಭಂಡಾರ ವಿಶಾಲಗೊಳಿಸುವಲ್ಲಿ ಅತ್ಯಂತ ಸಹಕಾರಿ ಮತ್ತು ಶಿಕ್ಷಣದ ನಿರಂತರ ಕಲಿಕೆಯಲ್ಲಿ ಭಾಗವಹಿಸುವುದಕ್ಕೆ
ಸಹಾಯವಾಗುತ್ತದೆ. ಶ್ರೀ ಸ್ಯಾಮ್ ಪಿತ್ರೋಡ ಅವರು ತಾವೇ ಅಧ್ಯಕ್ಷತೆ ವಹಿಸಿದ ಸಮಿತಿಯ ಸಲಹೆ ಸೂಚನೆಗಳನ್ನು
ಗಮನಿಸಿ ಭಾರತದಲ್ಲಿ ಶಿಕ್ಷಣಕ್ಕಾಗಿ ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಒಂದು ಪ್ರತ್ಯೇಕ ಸಂಸ್ಥೆ
ಅಥವಾ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟರು.
ನಿಜವಾಗಿ ಹೇಳಬೇಕೆಂದರೆ ಭಾರತದಲ್ಲಿ ಅನುವಾದವು ನಿತ್ಯ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು ಈ ಪ್ರಮುಖ
ಕ್ಷೇತ್ರದಲ್ಲಿ ಉತ್ಪಾದಕ ಸಾರ್ವಜನಿಕರ ಮಧ್ಯಸ್ಥಿಕೆಯ ಅಗತ್ಯವಿದೆ. ದೇಶದಲ್ಲಿ ಅಸಮಾನತೆ ಹೋಗಲಾಡಿಸಲು
ಆಯಾ ಕ್ಷೇತ್ರಗಳಲ್ಲಿ ಮತ್ತು ಆಯಾ ಭಾಷೆಗಳಲ್ಲಿ ಅನುವಾದದ ಗುಣಮಟ್ಟದ ಹಂಚಿಕೆಯು ಸರಿಸಮಾನವಾದ ರೀತಿಯಲ್ಲಿ
ತಲುಪುವಂತೆ ಮಾಡಬೇಕಾಗಿದೆ. ಅನುವಾದ ಕ್ರಿಯೆಯು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನೂ ಸೃಷ್ಠಿಸುತ್ತದೆ,
ಹೀಗೆ ವಿದ್ಯಾವಂತ ನಿರುದ್ಯೋಗಿಗಳು ಉತ್ತಮ ಸಂಭಾವನೆ ಗಿಟ್ಟಿಸುವ ವೃತ್ತಿಯನ್ನು ತಾವೇ ಹುಡುಕಿಕೊಂಡು
ಜನರ ಸೇವೆ ಮಾಡವಂತೆ ಪ್ರೋತ್ಸಾಹಿಸುತ್ತದೆ.
|
|
ಅನುವಾದ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಯ ಮೂಲಕ ಜ್ಞಾನ ಸಮಾಜವನ್ನು ಸೃಷ್ಟಿಸುವ ಜಾಗೃತಿ ರಾಷ್ಟ್ರೀಯ
ಜ್ಞಾನ ಆಯೋಗವು ಡಾ. ಜಯತಿ ಘೋಷ್ ಅವರ ನೇತೃತ್ವದಲ್ಲಿ ಒಂದು ಕಾರ್ಯಚಟುವಟಿಕೆ ಗುಂಪನ್ನು ರಚಿಸುವಂತೆ
ಪ್ರೇರೇಪಿಸಿತು. ಈ ಗುಂಪು ಅನುವಾದ ಚಟುವಟಿಕೆ, ಇದರ ಪ್ರೋತ್ಸಾಹ, ಪ್ರಕಟಣೆ ಮತ್ತು ಪ್ರಸರಣದಲ್ಲಿ
ತೊಡಗಿಸಿಕೊಂಡಿರುವ ಬೇರೆ ಬೇರೆ ಏಜೆನ್ಸಿ ಮತ್ತು ಜನರನ್ನು ಒಟ್ಟುಗೂಡಿಸಿತು. ಈ ಕಾರ್ಯಚಟುವಟಿಕೆ ಗುಂಪನ್ನು
ಸಂಬಂಧಪಟ್ಟ ಸರ್ಕಾರಿ, ಅರೆ ಸರ್ಕಾರಿ ಸಂಘ ಸಂಸ್ಥೆಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು,
ಭಾಷಾವಿಜ್ಞಾನಿಗಳು, ಅನುವಾದಕರು, ಶಿಕ್ಷಣ ತಜ್ಞರು, ಸಂಪಾದಕರು ಮತ್ತು ಅನುವಾದ ಕಾರ್ಯಚಟುವಟಿಕೆಯಲ್ಲಿ
ತೊಡಗಿಸಿಕೊಂಡಿರುವಂತಹ ಸಂಘ ಸಂಸ್ಥೆಗಳು ಪ್ರತಿನಿಧಿಸುತ್ತವೆ. 2006 ಫೆಬ್ರವರಿಯಲ್ಲಿ ಈ ಗುಂಪು ದೆಹಲಿಯಲ್ಲಿ
ಸಭೆ ನಡೆಸಿ ಅನುವಾದ ಕ್ಷೇತ್ರದ ವಿಸ್ತೃತ ರೂಪುರೇಖೆಯನ್ನು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಅಂದಿನ
ನಿರ್ದೇಶಕರಾದ ಡಾ. ಉದಯ ನಾರಾಯಣ ಸಿಂಹ ರೂಪಿಸಿದರು.
|
|
|
|