ಸಮೂಹ ಮಾಧ್ಯಮ

ದೃಕ್‌ಶ್ರವಣ ಸಮೂಹ ಮಾಧ್ಯಮವನ್ನು ಶೈಕ್ಷಣಿಕ ರೂಪದಲ್ಲಿ ಬಳಸುವುದರ ಮೂಲಕ ಅನುವಾದಕರ ಶಿಕ್ಷಣ ಕಾರ್ಯಕ್ರಮಕ್ಕೆ ಪೂರಕ ಸಾಮಗ್ರಿಯಾಗಿದೆ. ಅನುವಾದ ಮತ್ತು ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ದೃಕ್‌ಶ್ರವಣ ಪ್ರಸ್ತುತಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಸಿದ್ಧಪಡಿಸುವುದರ ಮೂಲಕ ದೃಕ್‌ಶ್ರವಣ ಮಾಧ್ಯಮ ವಿಭಾಗವು ಹೊಸ ಮಾಧ್ಯಮ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಿವಿಧ ಹಂತಗಳಲ್ಲಿ ಅತ್ಯಂತ ಸಮಗ್ರವಾಗಿ ಮಾಹಿತಿ ಪ್ರಸಾರ ಮಾಡಲು ಮಾಧ್ಯಮ ವಿಭಾಗ ಪ್ರೊಮೋ ಮತ್ತು ಕಿರುಚಿತ್ರಗಳನ್ನು ತಯಾರಿಸುತ್ತದೆ ಹಾಗೂ ಪ್ರಸ್ತುತಿ ಮತ್ತು ಉಪನ್ಯಾಸಗಳನ್ನು ದಾಖಲಿಸುತ್ತದೆ.