|
ದತ್ತನಿಧಿಗಳು
ಎನ್ಟಿಎಮ್ ಆರು ಮಾಹಿತಿ ಕಣಜ/ ದತ್ತನಿಧಿಗಳನ್ನು ರಚಿಸಿದೆ, ಅವುಗಳೆಂದರೆ ಅನುವಾದಕರ ರಾಷ್ಟ್ರೀಯ ನೋಂದಣಿ,
ಭಾರತೀಯ ವಿಶ್ವವಿದ್ಯಾನಿಯಗಳ ದತ್ತನಿಧಿ, ಬೋಧಕ ವರ್ಗದ ದತ್ತನಿಧಿ/ತಜ್ಞರ ಕಣಜ, ಪ್ರಕಾಶಕರ ದತ್ತನಿಧಿ,
ಅನುವಾದಿತ ಕೃತಿಗಳ ಗ್ರಂಥಸೂಚಿಯ ದತ್ತನಿಧಿ, ನಿಘಂಟು ಮತ್ತು ಪದಕೋಶಗಳ ದತ್ತನಿಧಿ. ಇವು ಎನ್ಟಿಎಮ್ನ
ಚಟುವಟಿಕೆಗಳನ್ನು ಬೆಂಬಲಿಸುವುದರ ಜೊತೆಗೆ ವಿದ್ವಾಂಸರಿಗೆ, ಪ್ರಕಾಶಕರಿಗೆ, ವಿದ್ಯಾರ್ಥಿಗಳಿಗೆ ಮತ್ತು
ಅನುವಾದಕರಿಗೆ ಪರಿಕರಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ದತ್ತನಿಧಿಗಳು ಭಾರತೀಯ ಭಾಷೆಗಳ ಅನುವಾದಕರು,
ಪ್ರಮುಖ ವಿಶ್ವವಿದ್ಯಾನಿಲಯಗಳು ಮತ್ತು ಅವುಗಳ ಪಠ್ಯ ಸಾಮಗ್ರಿಗಳು; ಬೊಧಕವರ್ಗ ಮತ್ತು ವಿವಿಧ ವಿಷಯಗಳ
ತಜ್ಞರು; ಎಲ್ಲಾ ಭಾರತೀಯ ಭಾಷೆಗಳಲ್ಲಿ ಪ್ರಮುಖ ಪ್ರಕಾಶನ ಸಂಸ್ಥೆಗಳು; ವಿವಿಧ ಭಾರತೀಯ ಭಾಷೆಗಳ
ಅನುವಾದ ಗ್ರಂಥಗಳು; ನಿಘಂಟು, ಪದಕೋಶ ಮತ್ತು ತೆಸಾರಸ್‌ಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. ಈ ದತ್ತನಿಧಿಗಳು
ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರಿಗೆ ಅತ್ಯಂತ ಉಪಯುಕ್ತವಾಗಬಹುದು.
|
|
|