ದೃಕ್‌ಶ್ರವಣ ಪಾಠಗಳು

ಎನ್‌.ಟಿ.ಎಂ. ಸಮೂಹ ಮಾಧ್ಯಮ ಅನುವಾದಕರ ಶಿಕ್ಷಣ ಕಾರ್ಯಕ್ರಮಕಾಗಿ ದೃಕ್‌ಶ್ರವಣ ಪ್ರಸ್ತುತಿ ಸಾಮಗ್ರಿಗಳನ್ನು ಸಿದ್ದಪಡಿಸುತ್ತದೆ. ಇದರ ಉದ್ದೇಶ ಅನುವಾದ ಅಧ್ಯಯನದ ಇತಿಹಾಸ ಹಾಗೂ ಅನುವಾದ ಅಧ್ಯಯನದ ಸಿದ್ಧಾಂತ ಮತ್ತು ಮಾದರಿಗಳ ಎಲ್ಲಾ ಅನುವಾದಗಳ ವಿವಿಧ ಅಂಶಗಳನ್ನು ಒಳಗೊಳ್ಳುವುದಾಗಿದೆ. ಇದಲ್ಲದೆ, ಅನುವಾದ ಅಧ್ಯಯನದ ಭಾರತೀಯ ಸಿದ್ಧಾಂತಗಳು, ಗದ್ಯ ಪ್ರಕಾರ, ಕೋಡ್ ಸ್ವಿಚಿಂಗ್ ಮತ್ತು ಕೋಡ್ ಮಿಕ್ಸಿಂಗ್ ಹಾಗೂ ಅಂತರ್ ಸಂಕೇತಶಾಸ್ತ್ರದ ಅನುವಾದಕ್ಕೆ ಸಂಬಂಧಿಸಿದ ಹಲವು ಕಂತುಗಳನ್ನು ಎನ್‌.ಟಿ.ಎಂ. ಸಮೂಹ ಮಾಧ್ಯಮ ಸಿದ್ದಪಡಿಸುತ್ತದೆ. ಈ ಪರಿಕಲ್ಪನೆಗಳನ್ನು ಕಂತುಗಳಲ್ಲಿ ಪ್ರಸ್ತುತಪಡಿಸಿ ಚಿತ್ರಣ ಮತ್ತು ಘಟನೆಗಳಿಗೆ ಸಂಬಂಧ ಕಲ್ಪಿಸುವ ಮೂಲಕ ವಿವರಗಳನ್ನು ಹೆಚ್ಚು ಆಸಕ್ತಿಕರ ರೀತಿಯಲ್ಲಿ ವ್ಯಕ್ತಪಡಿಸಲಾಗಿದೆ.