ಕೋರ್ಸ್ ಸಾಮಗ್ರಿಗಳು

ಅನುವಾದ ತರಬೇತಿ ಕಾರ್ಯಕ್ರಮಗಳಿಗೆ ಎನ್‌ಟಿಎಮ್ ಸಿದ್ಧಪಡಿಸಿದ ಕೋರ್ಸ್ ಸಾಮಗ್ರಿಗಳು ಸಹಾಯಕವಾಗುತ್ತವೆ. ಅನುವಾದ ಆಸಕ್ತರಿಗೆ ಅಲ್ಪಾವಧಿಯ ತರಬೇತಿಗಾಗಿ ಈ ಕೋರ್ಸ್ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಪ್ರಾರಂಭಿಕ ಹಂತದ ಅನುವಾದಕರಿಗೆ ಅನುವಾಗುವ ಸರಳ ವಿಷಯ/ಪಾಠಗಳನ್ನು ಇದು ಒಳಗೊಂಡಿರುತ್ತದೆ. ಎನ್‌ಟಿಎಮ್ ನಡೆಸಿದ ಕಮ್ಮಟ ಮತ್ತು ವಿಚಾರಸಂಕಿರಣಗಳಲ್ಲಿ ಜ್ಞಾನಪಠ್ಯ ಅನುವಾದಕ್ಕೆ ಸಂಬಂಧಿಸಿದ ತೊಡಕು ಮತ್ತು ಅದರ ಪರಿಹಾರಗಳನ್ನು ಈ ಕೋರ್ಸ್ ಸಾಮಗ್ರಿಗಳಲ್ಲಿ ವಿವರವಾಗಿ ಚಿತ್ರಿಸಲಾಗಿದೆ.