ಗೌಪ್ಯತಾ ನೀತಿ

ರಾಷ್ಟ್ರೀಯ ಅನುವಾದ ಮಿಶನ್ ("ಮಿಶನ್") ನಿಮ್ಮ ಗೌಪ್ಯತೆಯನ್ನು ಸಂರಕ್ಷಿಸಲು ಬದ್ಧವಾಗಿದೆ. ಮಿಶನ್ನಿನ www.ntm.org.in ವೆಬ್ಸೈಟಿಗೆ ಭೇಟಿನೀಡುವ ಬಳಕೆದಾರರ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಹಾಗೂ ರಕ್ಷಿಸುತ್ತೇವೆ ಎಂಬದನ್ನು ತಿಳಿಯಲು ದಯವಿಟ್ಟು ಈ ಕೆಳಗಿನ ಗೌಪ್ಯತಾ ನೀತಿಯನ್ನು ಓದಿರಿ.

ಈ ವೆಬ್ಸೈಟ್ ಬಳಕೆಯಿಂದ ನಿಮ್ಮ ವೈಯಕ್ತಿಕ ಮಾಹಿತಿಯ ಸಂಗ್ರಹಣೆ/ಉಳಿಸಿಕೊಳ್ಳುವಿಕೆ ಮತ್ತು ಬಳಕೆಗೆ ಈ ನೀತಿಯ ಪ್ರಕಾರ ಸಮ್ಮತಿಸುವಿರಿ.
 

ನಾವು ನಿಮ್ಮಿಂದ ಸಂಗ್ರಹಿಸುವ ಮಾಹಿತಿ

ನಾವು ನಿಮ್ಮ ಬಗ್ಗೆ ಈ ಕೆಳಗಿನ ಸಂದರ್ಭಗಳಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತೇವೆ:
  » ನೀವು ವೆಬ್ಸೈಟ್ ಮೂಲಕ ನೋಂದಾವಣೆ ಮಾಡುವ ಅಥವಾ ಯಾವುದೇ ಸಂದೇಹವನ್ನು ಬಗೆಹರಿಸಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು (ನಿಮ್ಮ ಹೆಸರು, ಸಂಪರ್ಕ ವಿವರಗಳು, ಇಮೇಲ್ ವಿಳಾಸ ಇತ್ಯಾದಿ) ನಮಗೆ ಒದಗಿಸುವಾಗ.
  » ಸಂಶೋಧನಾ ಉದ್ದೇಶವನ್ನು ಪೂರ್ಣಗೊಳಿಸಲು ನಾವು ಕೇಳುವ ಸಮೀಕ್ಷೆಗಳಿಗೆ ನೀವು ಪ್ರತಿಕ್ರಿಯಿಸುವ ಸಂದರ್ಭದಲ್ಲಿ
  » ಭಾರತೀಯ ವಿಶ್ವವಿದ್ಯಾಲಯಗಳ ದತ್ತನಿಧಿ, ಅನುವಾದಕರ ರಾಷ್ಟ್ರೀಯ ನೋಂದಣಿ, ಪ್ರಕಾಶಕರ ದತ್ತನಿಧಿ, ಬೋಧಕ ಮತ್ತು ತಜ್ಞರ ದತ್ತನಿಧಿ ಹಾಗೂ ನಿಘಂಟು ಮತ್ತು ಪಾರಿಭಾಷಿಕ ಪದಕೋಶಗಳ ದತ್ತನಿಧಿ-ಈ ಐದು ದತ್ತನಿಧಿಗಳನ್ನು ರೂಪಿಸಿ ಅವುಗಳನ್ನು ನಿರ್ವಹಿಸುವ ಸಂದರ್ಭದಲ್ಲಿ.
 

ನಿಮ್ಮ ಮಾಹಿತಿಯ ಉಪಯೋಗ

ನಾವು ನಿಮ್ಮ ಮಾಹಿತಿಯನ್ನು ಈ ಕೆಳಗಿನ ಸಂದರ್ಭದಲ್ಲಿ ಬಳಸುತ್ತೇವೆ,
  » ನೀವು ಕೋರಿದ ಸರಕು, ಸೇವೆ ಮತ್ತು ಮಾಹಿತಿಯನ್ನು ನಿಮಗೆ ಪೂರೈಸುವಂತೆ ಶಕ್ತಗೊಳಿಸಲು.
  » ನಿಮಗೆ ಮತ್ತು ನಿಮ್ಮ ಕಂಪ್ಯೂಟರಿಗೆ ನಮ್ಮ ವೆಬ್ಸೈಟಿನ ವಿಷಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿರುವುದನ್ನು ಖಚಿತಪಡಿಸಿಕೊಳ್ಳಲು.
  » ನಾವು ಸಂಗ್ರಹಿಸುವ ಮಾಹಿತಿಯನ್ನು ವಿಶ್ಲೇಷಿಸಿ ಇದರಿಂದ ನಾವು ವೆಬ್ಸೈಟನ್ನು ಸುಧಾರಿಸಲು, ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಬೆಂಬಲ ಪಡೆಯಲು.
  » ಮಾಹಿತಿ, ಉತ್ಪನ್ನ ಅಥವಾ ಸೇವೆಗಳನ್ನು ನೀವು ನಮ್ಮಿಂದ ಕೇಳಿಕೊಂಡಾಗ ಅಥವಾ ನಾವು ನಿಮಗೆ ಆಸಕ್ತಿ ಇರಬಹುದೆಂದು ಭಾವಿಸಿ ಅವುಗಳ ಬಗ್ಗೆ ನಿಮಗೆ ಮಾಹಿತಿಯನ್ನು ಒದಗಿಸುವ, ಈ ರೀತಿಯ ಉದ್ದೇಶಗಳಿಗಾಗಿ ಸಂಪರ್ಕಿಸಲು ಒಪ್ಪಿರುವ ಸಂದರ್ಭಗಳಲ್ಲಿ.
  » ನಮ್ಮ ಸೇವೆಯ ಬದಲಾವಣೆಗಳ ಬಗ್ಗೆ ನಿಮಗೆ ಸೂಚಿಸಲು.
 
ನಾವು ನಿಮ್ಮನ್ನು ಅಂಚೆ, ದೂರವಾಣಿ ಅಥವಾ ಫ್ಯಾಕ್ಸ್, ಹಾಗೆಯೇ ಇಮೇಲ್ ಮತ್ತು ಎಸ್.ಎಮ್.ಎಸ್ ಮೂಲಕ ಸಂಪರ್ಕಿಸಬಹುದು. ಭವಿಷ್ಯದಲ್ಲಿ ಈ ಯಾವುದೇ ವಿಧಾನಗಳಿಂದ ನಿಮ್ಮನ್ನು ಸಂಪರ್ಕಿಸುವುದರ ಬಗ್ಗೆ ನಿಮ್ಮ ಆಲೋಚನೆ ಬದಲಾಗಿದ್ದರೆ ಅದರ ಬಗ್ಗೆ ನಮಗೆ ತಿಳಿಸಿ.
 
ನಿಮ್ಮ ಮಾಹಿತಿಯ ಸಂಗ್ರಹ
ವೆಬ್ಸೈಟಿನ ಕೆಲವು ಭಾಗಗಳಿಗೆ ಪ್ರವೇಶಿಸಲು ಶಕ್ತಗೊಳಿಸುವ ಸಲುವಾಗಿ ನಿಮಗೆ ಒಂದು ಪಾಸ್ವರ್ಡನ್ನು ನಾವು ನೀಡಿರುತ್ತೇವೆ, ಈ ಪಾಸ್ವರ್ಡನ್ನು ರಹಸ್ಯವಾಗಿಡುವುದು ನಿಮ್ಮ ಹೊಣೆಯಾಗಿದ್ದು ಇದನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ದುರದೃಷ್ಟವಶಾತ್, ಅಂತರ್ಜಾಲದ ಮೂಲಕ ಮಾಹಿತಿ ರವಾನೆಮಾಡುವುದು ಸಂಪೂರ್ಣವಾಗಿ ಸುರಕ್ಷಿತವಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಅತ್ಯುತ್ತಮವಾಗಿ ರಕ್ಷಣೆ ಮಾಡುತ್ತೇವೆಯಾದರೂ ವೆಬ್ಸೈಟಿಗೆ ರವಾನಿಸಲಾದ ನಿಮ್ಮ ಮಾಹಿತಿಯ ಭದ್ರತೆಯ ಬಗ್ಗೆ ನಾವು ಭರವಸೆ ನೀಡುವುದಿಲ್ಲ. ಯಾವುದೇ ರವಾನೆ ನಿಮ್ಮ ಸ್ವಂತ ಜವಾಬ್ದಾರಿಯಾಗಿರುತ್ತದೆ. ಒಮ್ಮೆ ನಾವು ನಿಮ್ಮ ಮಾಹಿತಿಯನ್ನು ಸ್ವೀಕರಿಸಿದಲ್ಲಿ, ಅನಧಿಕೃತ ಪ್ರವೇಶ ತಡೆಯಲು ಕಟ್ಟುನಿಟ್ಟಾದ ಮತ್ತು ಭದ್ರತಾ ವಿಧಾನಗಳನ್ನು ಪಾಲಿಸಲು ಯತ್ನಿಸುತ್ತೇವೆ.
 
ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸುವಿಕೆ
ನೀವು ನಮಗೆ ಒದಗಿಸುವ ಮಾಹಿತಿಗೆ ಪ್ರವೇಶ ಪಡೆಯಲು ನಮ್ಮ ಮಿಶನ್ನಿನಲ್ಲಿರುವ ಅಧಿಕೃತ ಸಿಬ್ಬಂದಿಗೆ ಸಾಧ್ಯವಿರುತ್ತದೆ. ನಮ್ಮ ಮಿಶನ್ನಿನಲ್ಲಿ ನಿಗದಿಪಡಿಸಲಾದ ನಿಯಮಗಳಿಗನುಗುಣವಾಗಿ ಕೆಲಸ ಮಾಡುತ್ತಿರುವ ಇತರ ಮೂರನೆ ವ್ಯಕ್ತಿಗಳೊಂದಿಗೆ ಮತ್ತು ನೀವು ಮಾನ್ಯ ಮಾಡಿರುವ ಉದ್ದೇಶಗಳಿಗಾಗಿ ನಿಮ್ಮ ಮಾಹಿತಿಯನ್ನು ನಾವು ಬಹಿರಂಗಗೊಳಿಸಬಹುದು.

ಈ ಗೌಪ್ಯತಾ ನೀತಿಯ ಷರತ್ತುಗಳ ಅನುಸಾರವಾಗಿ ಮೂರನೆ ವ್ಯಕ್ತಿಗಳು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳುವಂತೆ ಖಾತ್ರಿಪಡಿಸಲು ಸದಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಕಾನೂನಿನ ಅಗತ್ಯ ಅಥವಾ ಅನುಮತಿಯನ್ನು ಹೊರತುಪಡಿಸಿ, ನಾವು ನಿಮ್ಮ ಒಪ್ಪಿಗೆಯಿಲ್ಲದೇ ನಿಮ್ಮ ಯಾವುದೇ ಮಾಹಿತಿಯನ್ನು ಮಾರಾಟ ಮಾಡುವುದು, ಹಂಚಿಕೊಳ್ಳುವುದು ಅಥವಾ ವಿತರಣೆ ಮಾಡುವುದಿಲ್ಲ.
 
IP ವಿಳಾಸಗಳು ಮತ್ತು ಕುಕೀಗಳು
ನಾವು ನಿಮ್ಮ ಕಂಪ್ಯೂಟರಿನ ಐಪಿ ವಿಳಾಸ, ಆಪರೇಟಿಂಗ್ ಸಿಸ್ಟಮ್ ಮತ್ತು ಬ್ರೌಸರ್ ಪ್ರಕಾರಗಳೊಂದಿಗೆ ಕಂಪ್ಯೂಟರಿನ ಮಾಹಿತಿಯನ್ನೂ ಸಂಗ್ರಹಿಸಬಹುದು. ಈ ಮಾಹಿತಿ ಬಳಕೆದಾರರ ಬ್ರೌಸಿಂಗ್ ಕ್ರಮ ಮತ್ತು ಮಾದರಿಗಳ ಬಗ್ಗೆ ಅಂಕಿಅಂಶಗಳನ್ನು ಹೊಂದಿದ್ದು ಇದು ಯಾವುದೇ ವ್ಯಕ್ತಿಯನ್ನು ಗುರುತಿಸುವುದಿಲ್ಲ. ವೆಬ್‌ಸೈಟ್ನ ಮಾಹಿತಿಯನ್ನು ಕಂಪ್ಯೂಟರಿನ ನಿರ್ವಾಹಕರಿಗೆ ತಿಳಿಸಲು ಮತ್ತು ಅದರ ಒಟ್ಟಾರೆ ಮಾಹಿತಿಯ ವರದಿಯನ್ನು ಮೂರನೆ ವ್ಯಕ್ತಿಗಳಿಗೆ ತಿಳಿಸಲು ಬಳಸಲಾಗುತ್ತದೆ.

ಇದೇ ಕಾರಣಗಳಿಗಾಗಿ, ನಾವು ನಿಮ್ಮ ಸಾಮಾನ್ಯ ಅಂತರ್ಜಾಲ ಬಳಕೆಯ ಬಗೆಗಿನ ಮಾಹಿತಿಯನ್ನು ನಿಮ್ಮ ಕಂಪ್ಯೂಟರಿನ ಹಾರ್ಡ್ಡ್ರೈವಿನಲ್ಲಿ ಸಂಗ್ರಹಿಸಿದ ಒಂದು ಕುಕೀ ಕಡತವನ್ನು ಬಳಸಿಕೊಂಡು ಪಡೆಯಬಹುದು. ವೆಬ್‌ಸೈಟನ್ನು ಹೇಗೆ ಬಳಸಲಾಗುತ್ತಿದೆ ಎಂಬುದಲ್ಲದೆ ಅದರ ಉಪಯೋಗವನ್ನು ಮೌಲ್ಯಮಾಪನ ಮಾಡಲು ವೆಬ್‌ಸೈಟ್ ಮೂಲಕ ನಿಮ್ಮ ಚಲನೆಯನ್ನು ಪತ್ತೆಹಚ್ಚಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ. ಹೀಗೆ ಪತ್ತೆಹಚ್ಚುವ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ.
 
ಭದ್ರತೆ
ನಾವು ನಿಮ್ಮ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳ ಪ್ರವೇಶ, ಕಾನೂನು ಬಾಹಿರ ಪ್ರಕ್ರಿಯೆ, ಆಕಸ್ಮಿಕ ನಷ್ಟ, ನಾಶ ಅಥವಾ ಹಾನಿಯಿಂದ ರಕ್ಷಿಸಲು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ನಿಮ್ಮ ಇಮೇಲ್ ವಿಳಾಸ ಮತ್ತು ಇತರ ಸಂಪರ್ಕ ವಿವರಗಳ ಯಾವುದೇ ಬದಲಾವಣೆಗಳನ್ನು ನಮಗೆ ತಿಳಿಸುವ ಮೂಲಕ ನಮ್ಮ ದಾಖಲೆಗಳನ್ನು ನವೀಕರಿಸಲು ಸಹಾಯ ಮಾಡಿ.
 
ನಮ್ಮ ಗೌಪ್ಯತಾ ನೀತಿಯ ಬದಲಾವಣೆಗಳು
ನಾವು ಕಾಲಕಾಲಕ್ಕೆ ಈ ನೀತಿಯನ್ನು ತಿದ್ದುಪಡಿ ಮಾಡಬಹುದು. ನಾವು ಯಾವುದೇ ಗಣನೀಯವಾದ ಬದಲಾವಣೆಗಳನ್ನು ಮಾಡಿದಲ್ಲಿ ನಮ್ಮ ವೆಬ್ಸೈಟಿನಲ್ಲಿ ಪ್ರಮುಖ ಸೂಚನೆಯ ಮೂಲಕ ನಿಮಗೆ ತಿಳಿಸುತ್ತೇವೆ.
 
ನಿಮ್ಮ ಹಕ್ಕುಗಳು
ನಮ್ಮಲ್ಲಿ ಲಭ್ಯವಿರುವ ಮಾಹಿತಿಯ ದಾಖಲೆಗಳ ಒಂದು ಪ್ರತಿಯನ್ನು ಕೇಳಲು ನಿಮಗೆ ಹಕ್ಕಿದೆ. ಇದನ್ನು ಪಡೆಯಲು ನೀವು ಸಣ್ಣ ಪ್ರಮಾಣದ ಶುಲ್ಕವನ್ನು ಪಾವತಿಸಬೇಕು.

ಈ ವೆಬ್ಸೈಟ್ ಕಾಲದಿಂದ ಕಾಲಕ್ಕೆ ಮೂರನೆ ವ್ಯಕ್ತಿಗಳ ವೆಬ್ಸೈಟುಗಳೊಂದಿಗೆ ಪರಸ್ಪರ ಸಂಪರ್ಕಗಳನ್ನು ಒಳಗೊಂಡಿರಬಹುದು. ಈ ವೆಬ್ಸೈಟ್ ಯಾವುದೇ ಸಂಪರ್ಕವನ್ನು ಅನುಸರಿಸಿದರೆ, ಈ ವೆಬ್ಸೈಟುಗಳು ತಮ್ಮದೇ ಆದ ಗೌಪ್ಯತಾ ನೀತಿಗಳನ್ನು ಹೊಂದಿರುತ್ತವೆ ಮತ್ತು ಈ ನೀತಿಗಳಿಗೆ ಸಂಬಂಧಿಸಿದಂತೆ ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಯನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ನೀವು ದಯವಿಟ್ಟು ಗಮನಿಸಿ. ನೀವು ಈ ವೆಬ್ಸೈಟಿಗೆ ಯಾವುದೇ ವೈಯಕ್ತಿಕ ವಿವರನ್ನು ಸಲ್ಲಿಸುವ ಮುನ್ನ ಈ ನೀತಿಗಳನ್ನು ದಯವಿಟ್ಟು ಪರಿಶೀಲಿಸಿ.