ಸೈನ್ಇನ್
|
ನಮ್ಮನ್ನು ಸಂಪರ್ಕಿಸಿ
ಭಾಷೆಗಳು
Select Language
Assamese | অসমীয়া
Bengali | বাংলা
Bodo | बर’
Dogri | डोगरी
English
Gujarati | ગુજરાતી
Hindi | हिंदी
Kannada | ಕನ್ನಡ
Kashmiri | کٲشُر
Konkani | कोंकणी
Maithili | मैथिली
Malayalam | മലയാളം
Manipuri | মণিপুরী
Marathi | मराठी
Nepali | नेपाली
Odia | ଓଡ଼ିଆ
Punjabi | ਪੰਜਾਬੀ
Sanskrit | संस्कृत
Santali | संताली
Sindhi | سنڌي
Tamil | தமிழ்
Telugu | తెలుగు
Urdu | اُردو
ನಮ್ಮ ಬಗ್ಗೆ
ಉಗಮ
ಗುರಿ ಮತ್ತು ಉದ್ದೇಶಗಳು
ಭಾಗಿಯಾಗಿರುವವರು ಯಾರು?
ಯಾರು ಯಾರು?
ಡಿಪಿಆರ್
ಭಾಗಿಯಾಗಿರುವವರು ಯಾರು? ಕಾರ್ಯನಿರ್ವಾಹಕ ಅಂಗಗಳು
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ
ಪ್ರಸ್ತುತ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಎನ್ಟಿಎಮ್ನ ನೋಡಲ್ ನಿಯೋಗ ಮತ್ತು ಮುಖ್ಯ ಆಯೋಜಕ ಸಂಸ್ಥೆಯಾಗಿದ್ದು ಮಿಶನ್ ಸಿಐಐಎಲ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಐಐಎಲ್ ನಿರ್ದೇಶಕರು ಮಿಶನ್ನಿನ ನೋಡಲ್ ಆಧಿಕಾರಿಯಾಗಿದ್ದಾರೆ. ಎನ್ಟಿಎಮ್ ಅಂತಿಮವಾಗಿ ಸೂಕ್ತ ಪ್ರಾಧಿಕಾರದ ಅಗತ್ಯ ಅನುಮೋದನೆ ಪಡೆದ ನಂತರ ಒಂದು ಪ್ರತ್ಯೇಕ ಸ್ವಾಯತ್ತ ಸಂಸ್ಥೆಯಾಗುತ್ತದೆಂದು ಊಹಿಸಲಾಗಿದೆ. ಎನ್ಟಿಎಮ್ ರಾಷ್ಟ್ರೀಯ ಸಂಘ ಸಂಸ್ಥೆಗಳಾದಂತಹ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ (ಎನ್ಬಿಟಿ), ಸೆಂಟರ್ ಫಾರ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಟರ್ಮಿನಾಲಜೀಸ್ (ಸಿಎಸ್ಟಿಟಿ) ಮತ್ತು ಸಿ-ಡಾಕ್ ಮುಂತಾದವುಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಎನ್ಟಿಎಮ್ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವ ಒಂದು ಪ್ರಮುಖ ಅಂಗವಾಗಿ ಪ್ರಾಜೆಕ್ಟ್ ಆಡ್ವೈಸರಿ ಕಮಿಟಿ (ಪಿಎಸಿ) ಅಥವಾ ಯೋಜನಾ ಸಲಹಾ ಸಮಿತಿಯನ್ನು ಎನ್ಟಿಎಮ್ ಹೊಂದಿದೆ. ಅನುವಾದದಲ್ಲಿ ತೊಡಗಿಸಿಕೊಂಡಿರುವ ಮತ್ತು ಬೋಧನೆ ಮಾಡುತ್ತಿರುವ ತಜ್ಞರು ಮತ್ತು ವಿದ್ವಾಂಸರು; ಲೇಖಕರು; ಸಾಹಿತಿಗಳು; ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರು; ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು; ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಸದಸ್ಯರು; ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರತಿನಿಧಿಗಳು ಮತ್ತು ಐಐಟಿಗಳಂತಹ ಸಂಸ್ಥೆಗಳ ಪ್ರಾಧ್ಯಾಪಕರಾದಿಯಾಗಿ ಒಟ್ಟು 25 ತಜ್ಞರನ್ನು ಪಿಎಸಿ ಒಳಗೊಂಡಿದೆ.
ಪಿಎಸಿಯ ಹೊರತಾಗಿ ಮಿಶನ್ನ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು, ಮಾರ್ಗದರ್ಶನ ಮತ್ತು ಸಲಹೆ ನೀಡಲು ಎನ್ಟಿಎಮ್ ಈ ಕೆಳಗಿನ ನಾಲ್ಕು ಉಪಸಮಿತಿಗಳನ್ನು ಹೊಂದಿದೆ:
i.
ದರಗಳ ಉಪಸಮಿತಿ
ii.
ಕೃತಿಸ್ವಾಮ್ಯ ಮತ್ತು ಕಾನೂನು ಸಂಬಂಧಿ ವಿಷಯಗಳ ಉಪಸಮಿತಿ
iii.
ಅನುವಾದಿಸಬೇಕಾದ ಜ್ಞಾನಪಠ್ಯಗಳ ಉಪಸಮಿತಿ
iv.
ಸಹಾಯಾನುದಾನ ಉಪಸಮಿತಿ
ಯೋಜನಾ ಸಲಹಾ ಸಮಿತಿ (ಎನ್ಟಿಎಮ್ - ಪಿಎಸಿ)
ನೋಡಲ್ ಅಧಿಕಾರಿ: ನಿರ್ದೇಶಕರು, ಸಿಐಐಎಲ್
ಯೋಜನಾ ನಿರ್ದೇಶಕರು
ಎನ್‌ಟಿಎಮ್ಗೆ ಮಂಜೂರಾದ ಹುದ್ದೆಗಳು: 65
ಸಹಾಯಕ ಸಿಬ್ಬಂದಿ