|
ಅನುಚ್ಛೇದ - II
ರಾಷ್ಟ್ರೀಯ ಜ್ಞಾನ ಆಯೋಗಕ್ಕೆ ಜಯತಿ ಘೋಷ್ ಮಂಡಿಸಿರು ಪ್ರಸ್ತಾಪಗಳು
|
[11 ಫೆಬ್ರವರಿ, 2008ರಂದು ನಡೆದ ರಾಷ್ಟ್ರೀಯ ಜ್ಞಾನ ಆಯೋಗದ ಅನುವಾದ ಕಾರ್ಯಗಾರ ಮತ್ತು ತದನಂತರ ಪಾಲುದಾರರಿಗೆ
ನಡೆದ ಚರ್ಚೆ, ಸಂವಾದಗಳ ಆಧಾರದ ಮೇಲೆ]
|
ದೇಶಾದ್ಯಾಂತ ಜ್ಞಾನಸಂಪತ್ತನ್ನು ಪಸರಿಸುವುದಕ್ಕಾಗಿ ವಿವಿಧ ರೀತಿಯ [ಮಾನವೀಯ, ಯಾಂತ್ರಾಧಾರಿತ, ತ್ವರಿತ
ಇತರ] ಮತ್ತು ವಿವಿಧ ಕ್ಷೇತ್ರಗಳ (ಸಾಹಿತ್ಯಕ, ವೈಜ್ಞಾನಿಕ, ತಾಂತ್ರಿಕ, ಔದ್ಯಮಿಕ) ಉತ್ಕೃಷ್ಟ ಗುಣಮಟ್ಟದಲ್ಲಿ
ಅನುವಾದವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತಾರಗೊಳಿಸಬೇಕಾದ ಅನಿವಾರ್ಯತೆ ಈಗ ಬಂದೊದಗಿದೆ. ಇದನ್ನೆಲ್ಲ
ಮಾಡಲು ಅತ್ಯಂತ ಸೂಕ್ತವಾದ ಮಾರ್ಗವೆಂದರೆ ರಾಷ್ಟ್ರೀಯ ಅನುವಾದ ಮಿಷನ್ನ ಸ್ಥಾಪನೆ. ಇದರಿಂದ ಈಗಿರುವ
ಅಂತರವನ್ನು ಗುರುತಿಸಬಹುದು. ಉತ್ಕೃಷ್ಟ ಗುಣಮಟ್ಟದ ಅನುವಾದವನ್ನು ಉತ್ತೇಜಿಸಬಹುದು, ತರಬೇತಿ, ಅನುವಾದಕರು
ಮತ್ತು ಅನುವಾದದ ಕುರಿತ ಮಾಹಿತಿ ಪ್ರಸರಣ ಮತ್ತು ಸದ್ಯ ಸಾರ್ವಜನಿಕ ಹಾಗೂ ಖಾಸಗಿ ವಲಯದ ಸಂಸ್ಧೆಗಳು
ನಡೆಸುತ್ತಿರುವ ಕೆಲಸಗಳನ್ನು ಸಂಯೋಜಿಸಬಹುದಾಗಿದೆ. ಸಾರ್ವಜನಿಕ ವಲಯದ ಅಥವ ಖಾಸಗಿ ಸಂಸ್ಥೆಗಳ ಕೆಲಸಗಳನ್ನು
ನಕಲು ಮಾಡುವುದಾಗಲಿ ಅಥವ ಅವರುಗಳ ಕೆಲಸವನ್ನು over-ride ಮಾಡವುದು ಇದರ ಉದ್ದೇಶವಲ್ಲ. ಆದರೆ, ಅವರುಗಳಿಗೆ
ಅವರ ಆದ್ಯತೆಗಳನ್ನು ಪುನರ್-ಪರಿಶೀಲಿಸಲು ಸಹಾಯ ಮಾಡುವುದು, ಗುಣಮಟ್ಟ ಸಂಸ್ಕರಿಸುವುದು ಮತ್ತು ವಿಸ್ತೃತ
ಜಾಗೃತಿ ಮೂಡಿಸುವುದು ಇದರ ಗುರಿಯಾಗಿದೆ.
ಭಾರತದ ಉಪಖಂಡದಲ್ಲಿ ಒಂದು ಚಟುವಟಿಕೆಯಾಗಿ, ಬಹು ಹಿಂದಿನಿಂದಲೂ, ಅನುವಾದ ಎರಡು ಭಾಷೆಗಳ ನಡುವೆ ನಡೆಯುತ್ತಿದೆ.
ಅನುವಾದವು ಭಾರತದಲ್ಲಿ ಹಾಗು ಇತರೆಡೆಗಳಲ್ಲಿ ಒಂದು ಆವೇಗವಾಗಿ ವಿವಿಧ ಭಾಷಾ ಗುಂಪುಗಳ ಬಹು ದೊಡ್ಡ
ತಜ್ಞರನ್ನು ಒಳಗೊಂಡಿದೆ. ವೃತ್ತಿಯಾಗಿ ಅನುವಾದವು ಇತ್ತೀಚಿನ ದಶಕಗಳಲ್ಲಿ, ಸವಾಲಾಗಿ ಮತ್ತು ಲಾಭಕರವಾಗಿ
ಪರಿಣಮಿಸಿದೆ. ತತ್ವಶಾಸ್ತ್ರ, ಸಾಹಿತ್ಯ ಅಧ್ಯಯನ, semiotics, ಭಾಷಾ ಶಬ್ದಶಾಸ್ತ್ರ, ಮಾನವಶಾಸ್ತ್ರ,
ಗಣಕ ವಿಜ್ಞಾನ ಮತ್ತು ಇನ್ನಿತರೆ ಕ್ಷೇತ್ರಗಳ ಪ್ರತಿರೂಪವಾಗಿ ಹೊರಹೊಮ್ಮಿದೆ. ಆದರೆ, ಇನ್ನು ವಿಸ್ತೃತ
ಭಾಷೆಗಳಲ್ಲಿ, ಸಂಸ್ಕೃತಿಗಳಲ್ಲಿ ಮತ್ತು ರಾಷ್ಟ್ರಗಳಲ್ಲಿ ಅದರ ಪಸರುವಿಕೆಯನ್ನು ಗಮನಿಸಿದರೆ ಅನುವಾದ
ಕ್ಷೇತ್ರವು ಸಂಯೋಜನಾ ಚಟುವಟಿಕೆಗಳಲ್ಲಿ ಬಹಳ ಹಿಂದೆ ಬಿದ್ದಿದೆ.
ಭಾರತವು ಒಂದು ಬಹುಭಾಷಾ ಹಾಗೂ ಬಹುಸಂಸ್ಕೃತಿಯುತ ರಾಷ್ಟ್ರವಾಗಿ ಅತಿ ಪುರಾತನ ಜ್ಞಾನ ಸಂಪತ್ತಾಗಿ,
ಶತಕಗಳಿಂದಲೂ ಅನುವಾದ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸಿದೆ. ಬಹುಭಾಷಾ ಮತ್ತು ಸಂಸ್ಕೃತಿಗಳಿಂದಾಗಿ
ದೇಶವು ಎಲ್ಲ ಪ್ರಮುಖ ತಾತ್ವಿಕ ಉಪಕ್ರಮಗಳ ಸಾಹಿತ್ಯಿಕ ಮತ್ತು ಯಾಂತ್ರಿಕಾಧಾರಿತ ಅನುವಾದಗಳೆರಡಕ್ಕೂ
ಒಂದು ಪರೀಕ್ಷಾ ಕ್ಷೇತ್ರವಾಗಿದೆ. ಇದೀಗ ಪ್ರಸ್ತಾಪಿಸಿರುವ ರಾಷ್ಟ್ರೀಯ ಅನುವಾದ ಮಿಷನ್ (NTM) ಬಹು
ಕಾಲದಿಂದಲೂ ಬೇಡಿಕೆಯಲ್ಲಿರುವ ವಿವಿಧ ಭಾಗಗಳಲ್ಲಿನ ಅವಶ್ಯಕತೆಗಳನ್ನು ಪೂರೈಸುವ ಭರವಸೆ ಹೊಂದಿದೆ.
ಅವು ಯಾವುವೆಂದರೆ: ಶಿಕ್ಷಕರು, ಕಲಿಯುವವರು, ಭಾಷಾ ತಂತ್ರಜ್ಞರು, ವ್ಯಾವಹಾರಿಕ ಗುಂಪುಗಳು, ಪತ್ರಿಕಾ
ಸಮುಚ್ಛಯಗಳು ಮತ್ತು ಇತರ ಮಾದ್ಯಮ ಗುಂಪುಗಳು, ಸೃಜನಾತ್ಮಕ ಬರಹಗಾರರು, ಪ್ರಾಚಾರ್ಯರು, ಮತ್ತು ತೌಲನಿಕ
ಸಾಹಿತ್ಯ ಮತ್ತು ಅನುವಾದ ಜ್ಞಾನಿಗಳು.
NTM ಕೆಳಕಂಡ ಉದ್ದೇಶಗಳನ್ನು ಹೊಂದಿದೆ:
|
1.
|
‘ರಾಷ್ಟ್ರೀಯ ಅನುವಾದಕರು ನೋಂದಣಿ’ಯ ಸೌಲಭ್ಯ ಮತ್ತು ಅನುವಾದ ಪರಿಕರಗಳು ಹಾಗು ಸಲಕರಣೆಗಳ ಲಭ್ಯತೆ
ಮತ್ತು ನವೀನ ಉಪಕ್ರಮಗಳ ಮೂಲಕ ತರಬೇತಿ ಶಿಬಿರಗಳು, ಅನುವಾದ ಪ್ರಕಾಶನಗಳ ಮತ್ತು ಮಾಹಿತಿಯ ಸತತ ನವೀಕರಣ
ಮತ್ತು ಅದರ ನಿರ್ವಹಣೆಗಳಿಂದ ಭಾರತೀಯ ಭಾಷೆಗಳನ್ನು ಒಳಗೊಂಡಂತೆ ಅನುವಾದ ಮಾಹಿತಿಯ ದಾಸ್ತಾನಾಗಿ ಪ್ರವೃತ್ತಿಸುವುದು
ಮತ್ತು ಅನುವಾದ ಕುರಿತಾದ ಎಲ್ಲಾ ಮಾಹಿತಿಯನ್ನು ಲಭ್ಯಗೊಳಿಸುವುದು.
|
2.
|
ತಾತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ, ಎಷ್ಟು ಸಾಧ್ಯವೋ ಅಷ್ಟು ಭಾರತೀಯ ಭಾಷೆಗಳಲ್ಲಿ ಎಲ್ಲಾ ಅನುವಾದ
ಕಾರ್ಯಚಟುವಟಿಕೆಗಳ ವಿಲೇವಾರಿ ಘಟಕ (clearing house)ವಾಗಿ ಕಾರ್ಯನಿರ್ವಹಿಸುವುದು.
|
3.
|
ಭಾರತೀಯ ಭಾಷೆಗಳನ್ನು ಒಳಗೊಂಡಂತೆ ಅನುವಾದ ಮತ್ತು ಅನುವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇತರ
agency ಮತ್ತು ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವುದು.
|
4.
|
ಉತ್ಕೃಷ್ಟ ಗುಣಮಟ್ಟದ ಅನುವಾದದ ಮೂಲಕ ಭಾರತೀಯ ಭಾಷೆಗಳನ್ನು ಮತ್ತು ಸಾಹಿತ್ಯವನ್ನು ಈ ಪ್ರದೇಶಗಳಲ್ಲಿ
ಮತ್ತು ವಿದೇಶಗಳಲ್ಲಿ ಬಿಂಬಿಸುವುದು.
|
5.
|
ವಿವಿಧ ಅನುವಾದ ಪರಿಕರಗಳನ್ನು ಸೃಷ್ಟಿಸುವುದು ಮತ್ತು ನಿರ್ವಹಿಸುವುದು, ಹಾಗೂ ಪ್ರಮುಖವಾಗಿ ದ್ವಿಭಾಷಾ
ಮತ್ತು ಬಹುಭಾಷಾ ದ್ವಿ-ದಿಕ್ಕುಗಳ ಸಾಮಾನ್ಯ ಹಾಗೂ ಅನುವಾದಕೀಯ ನಿಘಂಟುಗಳನ್ನು, ಪದ-ಹುಡುಕುವಿಕೆ (word-finders)
ಮತ್ತು ತೆಸಾರಸ್ ಗಳನ್ನು ಸೃಷ್ಟಿಸುವುದು; ಮತ್ತು
|
6.
|
ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ಎಲ್ಲಾ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳೊಂದಿಗೆ ಸ್ವತಂತ್ರವಾಗಿ
ಅಥವ ಸಹಭಾಗಿತ್ವದಲ್ಲಿ ಅನುವಾದ ಅಧ್ಯಯನದ ಬಗೆಗಿನ ಎಲ್ಲಾ ಪುಸ್ತಕಗಳ ಸಾತ್ವಿಕ ಪ್ರಕಾಶನದಲ್ಲಿ ತೊಡಗಿಸಿಕೊಳ್ಳುವುದು
ಅಥವ ಅದನ್ನು ಉತ್ತೇಜಿಸುವುದು.
|
7.
|
ಜನತೆಯ ಪ್ರಶ್ನೋತ್ತರಗಳಿಗಾಗಿ ಒಂದು ಪ್ರಕಟಣಾ ಫಲಕದ ಮೂಲಕ ಒಂದು ಚರ್ಚಾವೇದಿಕೆಯನ್ನು ಸೃಷ್ಟಿಸುವುದು.
|
8.
|
ಅನುವಾದ ಪರಿವಿಡಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮತ್ತು ಅನುವಾದ ಅಧ್ಯಯನದಲ್ಲಿ ಶೈಕ್ಷಣಿಕ ಹಾಗೂ
ತರಬೇತಿ ಕಾರ್ಯಚಟುವಟಿಕೆಗಳನ್ನು ಉತ್ತೇಜಿಸುವುದು.
|
ರಾಷ್ಟ್ರೀಯ ಅನುವಾದ ಮಿಷನ್ನಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಚಟುವಟಿಕೆಗಳು:
ಅನುವಾದಕರ ಶಿಕ್ಷಣ
ಅನುವಾದವು ದ್ವಿ-ಭಾಷತ್ವವನ್ನು ಅಗತ್ಯ ಷರತ್ತಾಗಿ ಪ್ರತಿಬಿಂಬಿಸುವುದರಿಂದ, ಅದೊಂದು ವಿಶೇಷ ಕಾರ್ಯಕ್ರಮವಾಗಿದೆ
ಹಾಗು ಅದರಿಂದ ಸಾಕಷ್ಟು ಕಲಿಯಬೇಕಾಗಿದೆ. ಹಾಗೆಯೇ, ವಿವಿಧ ರೀತಿಯ ಅನುವಾದ ಕೆಲಸವು ವಿವಿಧ ರೀತಿಯ
ಕೌಶಲ್ಯತೆಯನ್ನು ಬಯಸುತ್ತದೆ. ಉದಾಹರಣೆಗೆ, ವೈಜ್ಞಾನಿಕ ಹಾಗೂ ತಾಂತ್ರಿಕ ಅನುವಾದವು ಸಾಹಿತ್ಯಕ ಅನುವಾದಕ್ಕಿಂತ
ವಿಭಿನ್ನ ರೀತಿಯ ಕೌಶಲ್ಯವನ್ನು ಕೇಳುತ್ತದೆ. ಅಂತೆಯೇ, ಸೂಕ್ತ ಮಾಧ್ಯಮಗಳಲ್ಲಿ (ಉದಾ: ರೇಡಿಯೋ ಅಥವಾ
ಟಿ.ವಿ.) ಮತ್ತು ಪ್ರಕರಣಗಳಲ್ಲಿ ವ್ಯಾಖ್ಯಾನ ಕೌಶಲ್ಯವು ಇನ್ನೂ ಪ್ರಗತಿ ಹೊಂದಿಲ್ಲದಿರುವುದರಿಂದ ವಿಶೇಷ
ತರಬೇತಿಯ ಅಗತ್ಯತೆಯಿದೆ.
ಈ ನಿಟ್ಟಿನಲ್ಲಿ NTMನ ಕಾರ್ಯಚಟುವಟಿಕೆಗಳು ಕೆಳಗಿನವುಗಳನ್ನು ಒಳಗೊಂಡಿದೆ
|
|
»
|
ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು
|
|
»
|
ದೇಶಾದ್ಯಂತ ಭಾಷಾ ಕಲಿತ ಕಾರ್ಯಕ್ರಮಗಳಲ್ಲಿ ಅನುವಾದಕರಿಗೆ ಕೋರ್ಸ್ ಪ್ಯಾಕೇಜ್ ಗಳನ್ನು ಸೃಷ್ಟಿಸುವುದು
|
|
»
|
ಸಂಸ್ಥೆಗಳ ನಡುವೆ ವಿದ್ವಾಂಸರ ವಿನಿಮಯಕ್ಕಾಗಿ ಫೆಲೋಶಿಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಇಲ್ಲಿ, ಕೇವಲ ಆಂಗ್ಲ ಭಾಷೆಗೆ/ಭಾಷೆಯಿಂದ ಅನುವಾದಕ್ಕಿಂತ ಭಾರತೀಯ ಭಾಷೆಗಳಲ್ಲಿನ ಅನುವಾದಕ್ಕಾಗಿ ಹೆಚ್ಚಿನ
ಮಹತ್ವ ಕೊಡುವುದು
|
|
»
|
ಸಂಶೋಧನಾ ಯೋಜನೆಗಳನ್ನು ಉತ್ತೇಜಿಸುವುದು, ವಿದ್ಯಾರ್ಥಿ ಸಂಶೋಧನೆಯನ್ನು ಒಳಗೊಂಡಂತೆ, ವಿಶೇಷವಾಗಿ
ಉತ್ತಮ ಅನುವಾದಗಳನ್ನು ಲಭ್ಯಗೊಳಿಸುವುದು ಮತ್ತು ಶೈಕ್ಷಣಿಕ ಗುರಿಗಳನ್ನು ಮುಟ್ಟುವಂತಹ ಸಂಪನ್ಮೂಲಗಳನ್ನು
ಸೃಷ್ಟಿಸುವುದು
|
ಮಾಹಿತಿ ಪ್ರಸರಣ:
ಅನುವಾದವು ಇನ್ನು ಅತ್ಯಂತ ಪ್ರಮುಖ ಅಥವ ಅತಿ ಹೆಚ್ಚು ಸಂಭಾವನೆ ನೀಡುವ ಕಾರ್ಯ ಚಟುವಟಿಕೆಯಾಗಿಲ್ಲದೇಯಿರುವುದರಿಂದ,
ಅದನ್ನು ಉಪಯೋಗಿಸುವವರಲ್ಲಿ ಅನುವಾದ ಸಾಮರ್ಥ್ಯದ ಬಗ್ಗೆ ಸಮರ್ಪಕ ಜ್ಞಾನ ಸಂಪತ್ತಿಲ್ಲದಂತಾಗಿದೆ. ಉದಾಹರಣೆಗೆ:
ವಿವಿಧ ಪ್ರಾಂತೀಯ ಭಾಷೆಗಳಲ್ಲಿ ಉತ್ತಮ ಅನುವಾದಕರಿದ್ದು, ಅವರುಗಳೆಲ್ಲ ಪ್ರಕಾಶಕರಿಗೆ ಅಥವ ಅವರ ಸೇವೆಯನ್ನು
ಬಳಸಿಕೊಳ್ಳುವ ಇತರರಿಗೆ ತಿಳಿದಿರುವುದಿಲ್ಲ. ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನವು ಪ್ರತಿ
ವರ್ಷವು 7 ನಗರದಲ್ಲಿರುವ ತನ್ನ ಪ್ರಾಂತೀಯ ಭಾಷಾ ಕೇಂದ್ರಗಳ ಮೂಲಕ 20 ಭಾರತೀಯ ಭಾಷೆಗಳಲ್ಲಿ, ಸುಮಾರು
400 ಶಿಕ್ಷಕರಿಗೆ ಒಂದು ಭಾರತೀಯ ಭಾಷೆಯಲ್ಲಿ ತರಬೇತಿ ನೀಡುತ್ತಿದೆ. ಇದು ಅತ್ಯಾವಶ್ಯಕವಾದ ಅಪರೂಪದ
ಕೌಶಲ್ಯವೆಂದು ಗುರಿತಿಸಲ್ಪಟ್ಟಿದ್ದರೂ ಈ ರೀತಿ ತರಬೇತಿ ಪಡೆದ (ಸರಿ ಸುಮಾರು 11,000 ಇಂದಿಗೆ) ಜನರು
ಎಲ್ಲಾ ಸಂಭಾವನೀಯ ಉಪಯೋಗಕರಿಗೆ ತಿಳಿದಿರುವುದಿಲ್ಲ. ಸುಮಾರು ಭಾರತೀಯ ಭಾಷೆಗಳಲ್ಲಿ ಅನುವಾದವು ಸಣ್ಣ
ಪ್ರಕಾಶನಗಳಲ್ಲಿ ಸೃಷ್ಟಿಸಿ, ಮುದ್ರಿತವಾಗುತ್ತಿದೆ, ಆದರೆ ಇದರ ವ್ಯಾಪ್ತಿ ವಿಸ್ತಾರಗೊಂಡಿಲ್ಲ.
ಆದ್ದರಿಂದ, ಈ ನಿಟ್ಟಿನಲ್ಲಿ NTMನ ಪ್ರಮುಖ ಚಟುವಟಿಕೆಗಳೆಂದರೆ:
|
|
»
|
ವಿವಿಧ ಕುಶಲತೆಯನ್ನು ಮತ್ತು ವಿದ್ಯಾಭ್ಯಾಸ ಹೊಂದಿರುವ ವಿವಿಧ ಕ್ಷೇತ್ರಗಳಲ್ಲಿರುವ ಅನುವಾದಕರ ಕುರಿತಾದ
ಒಂದು ದತ್ತ ಭಂಡಾರ (data repository)ವನ್ನು ಸೃಷ್ಟಿಸುವುದು. ಈ ಪಟ್ಟಿಯು ಆನ್ಲೈನ್ನಲ್ಲಿ ಲಭ್ಯವಿರಬೇಕು
ಹಾಗೂ ವಿಶೇಷ ಅವಶ್ಯಕತೆಗಳೊಂದಿಗೆ NTMನಲ್ಲಿಯೂ ಸಂಪರ್ಕವಿರಬೇಕು.
|
|
»
|
ಚಾಲ್ತಿಯಲ್ಲಿರುವ ವಿವಿಧ ಕೃತಿಗಳ ಅನುವಾದಗಳ ಕುರಿತಾದ ಒಂದು ಮಾಹಿತಿ ಪಟ್ಟಿಯನ್ನು ಮತ್ತು ವಿಷಯ ಪಟ್ಟಿಯನ್ನು
ಕ್ಷೇತ್ರ ವಿಂಗಡನೆಯ ಪ್ರಕಾರ ಸೃಷ್ಟಿಸುವುದು ಮತ್ತು ಗ್ರಂಥಾಲಯಗಳ ಜಾಲಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ
ಹೊಸ ಪಟ್ಟಿಗಳನ್ನು ತಪ್ಪದೆ ಕಳುಹಿಸತಕ್ಕದ್ದು.
|
ಉತ್ತಮ ಗುಣಮಟ್ಟದ ಅನುವಾದ ಸಾಮಗ್ರಿಗಳ ಪ್ರಸರಣ ಮತ್ತು ಪ್ರೋತ್ಸಾಹ :
ಅತಿ ಹೆಚ್ಚು ಅನುವಾದ ಸಾಮಗ್ರಿಗಳ ಅವಶ್ಯಕತೆ ಇದ್ದಲ್ಲಿ, ಮಾರುಕಟ್ಟೆ ಅದನ್ನು ಈಗಾಗಲೇ ವಿಲೇವಾರಿ
ಮಾಡುವುದೆಂಬುದು ನಿಚ್ಚಳವಾಗಿದೆ. ಆದಾಗ್ಯೂ, ಜ್ಞಾನಸಂಪತ್ತಿನ ಕೊರತೆಯಿಂದಾಗಿ ಬೇಡಿಕೆಗೆ ತಡೆಯಾದಂತಿದೆ.
ಇತರ ಜ್ಞಾನ ಸಂಪತ್ತಿನ ವಿಚಾರದಿಂದಾಗಿ, ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅದನ್ನು ಕಳೆದುಕೊಳ್ಳುವವರೆಗೂ
ನಮಗೆ ತಿಳಿಯುವುದಿಲ್ಲ. ಸಾಹಿತ್ಯಕ ಅನುವಾದದಲ್ಲಿ ತೊಡಗಿಸಿಕೊಂಡಿರುವವರು (ರಾಷ್ಟ್ರೀಯ ಪುಸ್ತರ ಪ್ರಾಧಿಕಾರ
ಮತ್ತು ಗ್ರಂಥ ಸಂಸ್ಥೆಗಳು) ಪ್ರಾಂತೀಯ ಭಾಷೆಗಳಲ್ಲಿ ಪುಸ್ತಕಗಳು ಹೊರಬಂದ ನಂತರ ಅವುಗಳ ಹೆಚ್ಚಿನ ಬೇಡಿಕೆಯ
ಪರೀಕ್ಷೆಗೆ ಒಳಪಡುತ್ತಾರೆ.
ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೇನೆಂದರೆ, ಅನುವಾದವು ಕೇವಲ ಏಕಮುಖವಾಗಿರಬಾರದು; ಆಂಗ್ಲಭಾಷೆಯಿಂದ
ಭಾರತೀಯ ಭಾಷೆಗಳಿಗೆ; ಬದಲಾಗಿ, ಭಾರತೀಯ ಭಾಷೆಗಳಲ್ಲಿ ಸಾಕಷ್ಟು ಸಾಮಗ್ರಿಗಳಿರುವುದರಿಂದ ಅವುಗಳ ಹೆಚ್ಚಿನ
ಪ್ರಸರಣವು ಭಾರತೀಯ ಹಾಗು ಆಂಗ್ಲ ಭಾಷೆ ಎರಡರಲ್ಲೂ ಆಗುವಂತೆ ನೋಡಿಕೊಳ್ಳುವುದು. ನಿರ್ದಿಷ್ಟವಾಗಿ ಹೇಳುವುದಾದರೆ,
ಅನುವಾದವನ್ನು ಸೃಜನಾತ್ಮಕತೆಗೆ ಸಮಾನವಾದ ಕ್ಷೇತ್ರವನ್ನಾಗಿಸುವ ಸಂಪ್ರದಾಯವನ್ನು ಉತ್ತೇಜಿಸಬೇಕು.
ಬಹುಭಾಷಿತ್ವವನ್ನು ಮತ್ತು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವಂತಹ ಮತ್ತು ಕೊಡುವ
ಹಾಗೂ ಪಡೆಯುವ ಭಾಷೆಗಳ ನಡುವೆ ಕೇವಲ ಶೃಂಗೀಯ ವ್ಯತ್ಯಾಸವನ್ನು ಸೃಷ್ಟಿಸದೆ ಇರುವಂತಹ ಸಮತಲ ನಿದರ್ಶನಗಳನ್ನು
ಒದಗಿಸುವ ಅಗತ್ಯತೆ ಈಗಿದೆ. ಹೊಸದಾಗಿ ಸಾಹಿತ್ಯಕ ಗುಂಪುಗಳಲ್ಲಿರುವವರಿಗೆ ಮತ್ತು ಇತರ ಕ್ಷೇತ್ರಗಳಲ್ಲಿ
ಸಾಮಾಜಿಕ ಮಂಥನ ಕಾರ್ಯ ನಡೆಸುತ್ತಿರುವವರ ಅವಶ್ಯಕತೆಗಳಿಗೆ ಮತ್ತು ಆದ್ಯತೆಗಳಿಗನುಗುಣವಾಗಿರುವಂತಹ
ಕೆಲವು ಅನುವಾದಗಳ ಉತ್ಪತ್ತಿ ಈಗಾಗಲೇ ನಡೆದಿದೆ ( ಡಾ|| ಅಂಬೇಡ್ಕರ್ರವರ ಕೃತಿಗಳು ಬಹಳಷ್ಟು ಭಾಷೆಗೆ
ಅನುವಾದವಾಗಿರುವಂತೆ ).
ಬೇರೆ ಭಾಷೆಗಳಲ್ಲಿ ಸುಲಭವಾಗಿ ಚಲಿಸುವಂತಾಗಲು ಮತ್ತು ಉತ್ತಮ ಗ್ರಹಿಕೆಯಂಟಾಗಲು, ಸಾಹಿತ್ಯಕ ಅನುವಾದಗಳಲ್ಲಿ
ಇಲ್ಲದಿರುವ ಪದಗಳ ಮತ್ತು ಕಲ್ಪನೆಗಳ ಹೆಚ್ಚಿನ ಶಿಷ್ಠೀಕರಣ ತಾಂತ್ರಿಕ ಹಾಗೂ ವೈಜ್ಞಾನಿಕ ಅನುವಾದಗಳಲ್ಲಿ
ಆಗಬೇಕಿದೆ. ಹಾಗೆಯೇ, ಅನುವಾದವು ಇಂದಿನ ದಿನಗಳಲ್ಲಿ ಕಡಿಮೆ ಸಂಭಾವನೆಯ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಯಾಗಿದ್ದು,
ಇದು ಬದಲಾಗಬೇಕಾಗಿದೆ. ಹಾಗೆಯೇ, ಅನುವಾದವು ಕೇವಲ ಒಬ್ಬ ವ್ಯಕ್ತಿಯ ಚಟುವಟಿಕೆಯಾಗಿಲ್ಲದೆ, ಅದೊಂದು
ಸಾಮಾಜಿಕ ಉದ್ಯಮವಾಗಿದೆ. ಅದೊಂದು ವಿವಿಧ ಸ್ತರಗಳ ವಿಶಿಷ್ಟ ಜನಗಳ ಸಮೂಹ ಕಾರ್ಯವೆಂಬುದು ಮನದಟ್ಟಾಗಬೇಕಿದೆ.
ಈ ನಿಟ್ಟಿನಲ್ಲಿ ಕೆಳಕಂಡ ವಿಶಿಷ್ಟ ಚಟುವಟಿಕೆಗಳು NTMನ ಗಮನದಲ್ಲಿವೆ:
|
|
»
|
ಪುಸ್ತಕ ಬಿಡುಗಡೆ ಹಬ್ಬಗಳ, ಫೆಲೋಶಿಪ್ ಮತ್ತು ಬಹುಮಾನಗಳ ಮೂಲಕ ಉತ್ತಮ ಗುಣಮಟ್ಟದ ಅನುವಾದಗಳನ್ನು
ಉತ್ತೇಜಿಸುವುದು
|
|
»
|
ದೀರ್ಘಾವಧಿ ಅನುವಾದ ಯೋಜನೆಗಳನ್ನು ಮತ್ತು ಸಹಯೋಗ ಅನುವಾದ ಕಾರ್ಯವನ್ನು ಪ್ರೋತ್ಸಾಹಿಸುವುದು ಹಾಗು
ತಮ್ಮ ನಿಲುವುಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅನುವಾದಕರಿಗೆ ಕಾರ್ಯಗಾರಗಳನ್ನು ಸಂಘಟಿಸುವುದು.
|
|
»
|
ಪ್ರಕಾಶಕರೊಂದಿಗೆ ಪುನರ್ ಖರೀದಿ ವ್ಯವಸ್ಥೆ ಮತ್ತು ಉತ್ತಮ ಗುಣಮಟ್ಟದ ಅನುವಾದ ದೃಢಪಡಿಸುವ ಪ್ರಾರಂಭಿಕ
ಮಾರುಕಟ್ಟೆಗಾಗಿ ಗ್ರಂಥಾಲಯ ಜಾಲಗಳನ್ನು ಸಂಪರ್ಕಿಸುವುದು.
|
|
»
|
ಸಾರ್ವಜನಿಕ ಹಾಗು ಖಾಸಗಿ ಸಂಸ್ಥೆಗಳನ್ನೊಳಗೊಂಡಂತೆ, ಪ್ರಕಾಶಕರು ಅಥವ ಖರೀದಿಸುವವರ ಮತ್ತು ಅನುವಾದವಾಗಿರುವ
ಸಾಮಗ್ರಿಯ ನಡುವೆ ಅಂತರಮುಖಿ ಸಂಬಂಧಗಳನ್ನು ಸೃಷ್ಟಿಸುವುದು.
|
|
»
|
ಪ್ರಾಂತೀಯ ಭಾಷೆಗಳಲ್ಲಿ ವ್ಯಾಪಕ ಪ್ರಸರಣಕ್ಕಾಗಿ ಪ್ರಚಲಿತ ವಿದ್ಯಮಾನಗಳ ನಿಯತಕಾಲಿಕೆಗಳನ್ನು ಮತ್ತು
ಇತರೆ ಉಪಯೋಗವಾಗುವ ಸಾಮಗ್ರಿಗಳ (ನ್ಯೂ ಸೈಂಟಿಸ್ಟ್, ಇಕಾನಾಮಿಕ್ ಅಂಡ್ ಪೋಲಿಟಿಕಲ್ ವೀಕ್ಲಿ, ಇತರೆ)
ಆರಂಭಿಕ ಅನುವಾದಕ್ಕಾಗಿ ಸಹಾಯಧನ ಒದಗಿಸಿವುದು
|
|
»
|
ಅನುವಾದಿತ ಸಾಮಗ್ರಿಗಳನ್ನು ಶಾಲಾ-ಕಾಲೇಜುಗಳ, ವಿಶ್ವವಿದ್ಯಾನಿಲಯಗಳ ಪಠ್ಯದೊಳಗೆ ಸಂಯೋಜಿಸುವುದು ಹಾಗೂ
ಅದರಲ್ಲಿಯೂ ಇತರೆ ಭಾರತೀಯ ಭಾಷೆಗಳಿಂದ ಅನುವಾದಿತ ಕೃತಿಗಳನ್ನು ಎಲ್ಲಾ ಸ್ತರಗಳ ಸಾಹಿತ್ಯಾಧ್ಯಯನದಲ್ಲಿ
ಏಕೀಕರಣಗೊಳಿಸಲು ಸಲಹೆ ನೀಡುವುದು
|
|
»
|
ಎಲ್ಲಾ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ವಿಶೇಷ ಪುಸ್ತಕ ಅಂಗಡಿಗಳಲ್ಲಿ (ಅನುವಾದಿತ ಸಾಮಗ್ರಿಗಳೊಂದಿಗೆ
ವ್ಯವಹರಿಸುವ) ‘ಭಾಷಾ ಸಂಪನ್ಮೂಲ ಕೇಂದ್ರ’ಗಳನ್ನು ತೆರೆಯಲು ಸಲಹೆ ನೀಡುವುದು.
|
|
»
|
ದ್ವಿ-ಭಾಷಾ ಕುಶಲತೆಯ ಪ್ರಾಮುಖ್ಯತೆಯನ್ನು ತಿಳಿಸುತ್ತಿರುವ ಸದ್ಯ ಚಾಲ್ತಿಯಲ್ಲಿರುವ ಚಟುವಟಿಕೆಗಳನ್ನು
ಉತ್ತೇಜಿಸುವುದು ಮತ್ತು ಪಸರಿಸುವುದು (ಉದಾ: ಕರ್ನಾಟಕ ಪೊಲೀಸ್ ಆಫೀಸರ್ಸ್ ಪರೀಕ್ಷೆಯಲ್ಲಿ ಕಡ್ಡಾಯ
ಅನುವಾದ ವಿಭಾಗವಿರುವಂತೆ)
|
|
»
|
ಚಿಕ್ಕ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಅನುವಾದಿತ ಕೃತಿಗಳಿಗೆ, ಸಾರ್ವಜನಿಕ ಮತ್ತು ನಾಗರೀಕ ಸೇವಾ
ಸಂಸ್ಥೆಗಳ (ರಾಷ್ಟ್ರೀಯ ಸಾಕ್ಷರತಾ ಮಿಷನ್ ಮತ್ತು ಭಾರತ ಜ್ಞಾನ-ವಿಜ್ಞಾನ ಸಮಿತಿಯಂತಹ) ಸಹಯೋಗದೊಂದಿಗೆ
ಹೆಚ್ಚಿನ ಎಟುಕುವಿಕೆಯನ್ನು ದೃಢಪಡಿಸುವುದು
|
ಯಂತ್ರಾನುವಾದವನ್ನು ಉತ್ತೇಜಿಸುವುದು:
ತಾಂತ್ರಿಕ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲಗಳ ವಿಷಯಗಳಿದ್ದರೂ ಸಹ, ಈ ಪ್ರಕರಣದಲ್ಲಿ, ನವೀನ ತಂತ್ರಜ್ಞಾನಗಳು
ಅತಿ ಕಡಿಮೆ ವೆಚ್ಚದಲ್ಲಿ ತ್ವರಿತ ಮತ್ತು ವಿಸ್ತೃತ ಅವಕಾಶಗಳನ್ನು ಒದಗಿಸಿಕೊಡುತ್ತಿವೆ. ಕೆಳಗಿನವುಗಳನ್ನು
ಉಪಯೋಗಿಸಿಕೊಂಡು NTM ತಂತ್ರಜ್ಞಾನವನ್ನು ಸೃಷ್ಟಿಸಿ ಹಾಗೂ ಬಳಸಿಕೊಂಡು ಯಂತ್ರಾನುವಾದ ತಾಂತ್ರಿಕ ಪ್ರಗತಿಯನ್ನು
ಸಾಧಿಸಬಹುದಾಗಿದೆ.
|
|
»
|
ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸುವುದನ್ನು ದೃಢಪಡಿಸುವುದು, ವಿಶೇಷವಾಗಿ ಡಿಜಿಟಲ್ (digital) ಪರಿಕರಗಳಾದ
ಅರ್ಥಕೋಶಗಳು, ದ್ವಿ-ಭಾಷಾ ನಿಘಂಟುಗಳು, ಅನುವಾದ ಸ್ಮೃತಿಗಾಗಿ ಗಣಕಯಂತ್ರ, ಇವುಗಳಿಂದ ತ್ವರಿತ ಪರಿಣಾಮಕಾರಿ
ಮತ್ತು ಸಮರ್ಥ ಅನುವಾದ ಸುಲಭವಾಗುತ್ತದೆ.
|
|
»
|
ಭಾಷಾಶಬ್ದ ಸಂಪನ್ಮೂಲಗಳಾದ ಈ-ನಿಘಂಟುಗಳು, ಪದಜಾಲಗಳು, ಭಾಷಾ ವಿಶ್ಲೇಷಣೆ ಮತ್ತು ಸಂಶ್ಲೇಷಣೆಯ ಪರಿಕರಗಳು,
ವಿಷಯಗಳ ಅನುಕ್ರಮಣಿಕೆ (concordances), ಆವರ್ತನ ವಿಶ್ಲೇಷಕರು ಇತ್ಯಾದಿಗಳು ಯಂತ್ರಾನುವಾದಕ್ಕೆ
ಬೇಕಾಗಿರುವ ಪ್ರಮುಖ ಭಾಗ ಆಗಿವೆ. ಇವುಗಳನ್ನು ಕೇವಲ ಒಂದು ಸಂಸ್ಥೆ ಸೃಷ್ಟಿಸಿ ನಿರ್ವಹಿಸಲಾಗುವುದಿಲ್ಲ
ಆದ್ದರಿಂದ, ಇದಕ್ಕೆ ವಿವಿಧ ಸಂಸ್ಥೆಗಳಿಂದ ದೀರ್ಘಾವಧಿಯ ಸಹಯೋಗ ಬೇಕಾಗಿದೆ. ಆನ್ಲೈನ್ ಚರ್ಚೆಗಳ ಮತ್ತು
ಸಭೆಗಳ ಸಂವಹನೆಗಳ ಮೂಲಕ NTM ಸಮೂಹಕಾರ್ಯಕ್ಕೆ ಒಂದು ವೇದಿಕೆ ನಿರ್ಮಾಣ ಮಾಡಬಹುದಾಗಿದೆ.
|
|
»
|
ಮೂಲ ಕೃತಿಗಳು ಮತ್ತು ಅನುವಾದಗಳು ಸಾಧ್ಯವಾದಷ್ಟು ಡಿಜಿಟಲ್ ರೂಪದಲ್ಲಿರುವುದು ಹಾಗೂ NTM ಅಗತ್ಯ ಕೃತಿಸ್ವಾಮ್ಯ
ವಿಚಾರಗಳನ್ನು ಹೊಂದಿರುವುದು ಸೂಕ್ತ. ಈ ಡಿಜಿಟಲ್ ಸಂಪತ್ತಿನ ಸಾಮಗ್ರಿಯು ಶಿಷ್ಠೀಕರಣಗೊಂಡ XML ಟ್ಯಾಗ್
ಮತ್ತು DTD ಗಳೊಂದಿಗೆ ನಿರ್ವಹಿಸುವುದೆಂದು NTM ದೃಢಪಡಿಸಬೇಕು.
|
|
»
|
ಉತ್ತಮ ಗುಣಮಟ್ಟದ ಸಮಾನ ವಿಶೇಷ ರಚನೆಯನ್ನು ವಿವರಣಾತ್ಮಕಗಳೊಂದಿಗೆ ಮತ್ತು ಸಾಲುಗೂಡಿಕೆಗಳೊಂದಿಗೆ
ಅಭಿವೃದ್ಧಿ ಪಡಿಸುವುದು ಇತ್ತೀಚಿನ ಅಂತರ್ರಾಷ್ಟ್ರೀಯ ಸಂಪ್ರದಾಯವಾಗಿದೆ. ಇಂತಹ ವಿವರಣಾತ್ಮಕ (annotated)
ವಿಶೇಷ ರಚನೆಗಳನ್ನು ಯಂತ್ರ ಕಲಿಕಾ ತಂತ್ರಗಳನ್ನಾಗಿ ಯಂತ್ರಾನುವಾದದಲ್ಲಿ ಬಳಸಲಾಗುತ್ತಿದೆ. ಪ್ರತ್ಯೇಕ
ಸಂಸ್ಥೆಗಳು ಇದರ ಮಾಹಿತಿ ಸಂಪುಟಕ್ಕೆ ಮತ್ತು ಮಹತ್ವವುಳ್ಳ ಪ್ರಾರಂಭಿಕ ಬಂಡವಾಳಗಳಿಗೆ ಬೇಕಾದ ಬೃಹತ್
(magnitude) ಶ್ರಮವನ್ನು ಒದಗಿಸಲು ಸಾಧ್ಯವಾಗುವುದಿಲ್ಲ; ಆದಾಗ್ಯೂ NTM ಇಂತಹ ಶ್ರಮಗಳಿಗೆ ತನ್ನ
ಬೆಂಬಲ ನೀಡುತ್ತದೆ.
|
|
»
|
15 ರಾಷ್ಟ್ರಗಳನ್ನೊಳಗೊಂಡ, ಸಂಯುಕ್ತ ರಾಷ್ಟ್ರ (united nations) ಗಳಿಂದ 1996ರಲ್ಲಿ ಪ್ರಾರಂಭಿತವಾದ
‘Universal Networking Language’ (UNL)ನ ಆಧಾರದ ಮೇಲೆ ಅಂತರ್ಭಾಷಾ ಕಲಿಕೆ (approach)ಗೆ ಪ್ರೋತ್ಸಾಹ
ನೀಡುವುದು. (ಮುಂಬೈ IITಯು ವಿವಿಧ ಪರಿಕರಗಳು, ತಂತ್ರಜ್ಞಾನಗಳು ಮತ್ತು ಸಂಪನ್ಮೂಲಗಳನ್ನು ಆಂಗ್ಲಭಾಷೆಗೆ
ಮತ್ತು ಭಾರತೀಯ ಭಾಷೆಯ ಯಂತ್ರಾನುವಾದಕ್ಕೆ, ಈಗಾಗಲೇ ಸಾರ್ವತ್ರಿಕರಿಸಲಾಗಿದೆ).ता है।
|
|
|