ಅನುಚ್ಛೇದ - 1 :

ಅನುವಾದ ಉದ್ದಿಮೆಯ ಪ್ರೋತ್ಸಾಹ
(ಜಯತಿ ಘೋಷ್ರಿಂದ ಟಿಪ್ಪಣಿ)
ಭಾರತೀಯ ಭಾಷೆಗಳ ವಿವಿಧತೆಯನ್ನು ಕಾಪಾಡಿಕೊಳ್ಳುವ ಹಾಗು ಪುಷ್ಟೀಕರಿಸುವ ಅವಶ್ಯಕತೆಗೆ ಮಾನ್ಯತೆ ದೊರೆತಲ್ಲಿ, ಭಾರತದಲ್ಲಿ ಸಮರ್ಥ, ಶೀಘ್ರ, ಅತ್ಯುನ್ನತ ಗುಣಮಟ್ಟದ ಅನುವಾದ ಉದ್ದಿಮೆಯ ಅಗತ್ಯತೆ ಇದಾಗಲೇ ಸ್ಪಷ್ಟವಾಗಿದೆ. ಮತ್ತು ನಮ್ಮ ಎಲ್ಲಾ ಭಾಷಾ ಗುಂಪುಗಳಿಗೆ ಅವರವರ ಭಾಷೆಗಳಲ್ಲಿ ಸಾಕಷ್ಟು ಪ್ರಮಾಣದ ಸಾಮಾಗ್ರಿಗಳು ದೊರಕುವಂತಾಗಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರತಿ ದೇಶವು ತನ್ನ ಜ್ಞಾನಸಂಪತ್ತನ್ನು ವಿಮೆಗೊಳಿಸಿ ಅನುವಾದ ಸೇವೆಯನ್ನು ಸಂಯೋಜಿತವಾಗಿ ಪ್ರೋತ್ಸಾಹಗೊಳಿಸಿ ಅದರಿಂದ ವಿವಿಧ ರೀತಿಯ ಸಾಮಗ್ರಿಗಳ ವಿವಿಧ ಭಾಷೆಗಳಲ್ಲಿ ದೊರಕುವಂತೆ ಮಾಡಿವೆ. ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಅತ್ಯಂತ ತೀವ್ರತರವಾಗಿ ಸಕ್ರಿಯವಾಗಿರುವ ಅನುವಾದ ಉದ್ದಿಮೆಯನ್ನು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಹೊಂದಿರುವ, ಚೀನಾದಂತಹ ದೇಶಗಳಲ್ಲಿ ನಿಜವಾಗಿದೆ. ಹಾಗೆಯೇ ಅತಿ ಸಣ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿರುವ ಅತಿ ಹೆಚ್ಚು ವಿದೇಶಿ ಭಾಷೆಗಳಲ್ಲಿ ಪರಿಣಿತಿ ಹೊಂದಿರುವವರ ಜನಸಂಖ್ಯೆಯಿರುವ ರಾಷ್ಟ್ರಗಳಲ್ಲಿಯೂ ಸಹ ಇದು ನಿಜವಾಗಿದೆ. (ಯುರೋಪಿನ ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್) ಇಲ್ಲಿ ಅಲ್ಲಿನ ಪ್ರಾಂತೀಯ ಭಾಷೆಗಳು ಇಂದಿಗೂ ಸಾಕಷ್ಟು ಗಟ್ಟಿಯಾಗಿ ನೆಲೆನಿಂತಿವೆ, ಕಾರಣ ಅಲ್ಲಿರುವ ವ್ಯಾಪಕ ಅನುವಾದಗಳು.

ಅನುವಾದದ ಅಪೇಕ್ಷಣೆಯಿರುವುದು:
  » ಆಂಗ್ಲ ಭಾಷೆಯಿಂದ ಭಾರತೀಯ ಭಾಷೆಗಳಿಗೆ
  » ಭಾರತೀಯ ಭಾಷೆಗಳಿಂದ ಆಂಗ್ಲ ಭಾಷೆಗೆ
  » ಭಾರತೀಯ ಭಾಷೆಗಳ ನಡುವೆ

ಕೆಳಕಂಡ ಸಾಮಾಗ್ರಿಗಳು ಅನುವಾದವಾಗಬೇಕಾಗಿದೆ:
  » ಶಾಲಾಮಟ್ಟದ ಪಠ್ಯಪುಸ್ತಕಗಳು
  » ಉನ್ನತ ವ್ಯಾಸಂಗ ಮಟ್ಟದ ಪಠ್ಯಪುಸ್ತಕಗಳು
  » ಬೋಧಕವೃತ್ತಿಯ ಸಾಮಾಗ್ರಿಗಳು
  » ವಿಜ್ಞಾನ, ಸಮಾಜ ಶಾಸ್ತ್ರ ಮತ್ತು ಮಾನವಿಕ ಶಾಸ್ತ್ರಗಳ ತಜ್ಞ ಪುಸ್ತಕಗಳು
  » ಪ್ರಮಾಣಗ್ರಂಥಗಳು (ವಿಶ್ವಕೋಶಗಳು, ಇತರೆ)
  » ಸಾಹಿತ್ಯ
  » ವಸ್ತು ಭೂತವಾದ, ಪ್ರಚಲಿತ ಆಸಕ್ತಿಗಳ ಕುರಿತಾದ ಪುಸ್ತಕಗಳು
  » ಸೂಚನಾ ಕೈಪಿಡಿಗಳು
  » ಸಾಪ್ತಾಹಿಕ/ನಿಯತಕಾಲಿಕೆಗಳು
  » (ಜಾಲ) ವೆಬ್-ಆಧಾರಿತ ಸಾಮಾಗ್ರಿಗಳು

ಸಾರ್ವಜನಿಕ ಮತ್ತು ಖಾಸಗೀ ಕ್ಷೇತ್ರಗಳನ್ನೊಳಗೊಂಡಂತೆ, ಈ ಕ್ಷಣಕ್ಕೆ ವಿವಿಧ ಸ್ಥಳಗಳಲ್ಲಿ ವಿವಿಧ ಸಂಸ್ಥೆಗಳು ತಮ್ಮ ಇತರ ಕೆಲಸಗಳ ನಡುವೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ ರಾಷ್ಟ್ರೀಯ ಪುಸ್ತಕ ಪ್ರತಿಷ್ಠಾನ ಸಾಮಾನ್ಯವಾಗಿ ಪ್ರಶಸ್ತಿ ಪಡೆದಿರುವ ಅಥವ ಪ್ರಖ್ಯಾತ ಲೇಖಕರ ಕೆಲವು ಪ್ರಮುಖ ಸಾಹಿತ್ಯ ಕೃತಿಗಳಿಗೆ ಅನುವಾದಗಳನ್ನು ನೀಡಿದೆ (ಆಂಗ್ಲ ಭಾಷೆಯಿಂದ ಇತರೆ ಪ್ರಮುಖ ಭಾಷೆಗಳಿಗೆ ಮತ್ತು ಪ್ರತಿಯಾಗಿ). ಕೆಲವು ಖಾಸಗಿ ಸಂಸ್ಥೆಗಳು (ಉದಾ: ಕಥಾ ಪ್ರಕಾಶನಗಳು, ಪ್ರಜಾಸಕ್ತಿ ಪತ್ರಿಕೆಗಳ ಗುಂಪು ಇತರೆ) ಪ್ರಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಮತ್ತು ಪ್ರಚಲಿತ ಆಸಕ್ತಿಗಳ ವಿಷಯಗಳಪಠ್ಯಗಳನ್ನು ಅನುವಾದ ಮಾಡಿವೆ. ಆದರೆ, ಇದನೆಲ್ಲ ಕ್ರಮಬದ್ಧವಾಗಿ ಮಾಡಲು ಮತ್ತು ಎಲ್ಲಾ ಪ್ರಮುಖ ಭಾಷೆಗಳಲ್ಲಿ ನೇರ ಮಧ್ಯಸ್ಥಿಕೆ, ಪ್ರೋತ್ಸಾಹ ಅಥವ ಮೇಲ್ವಿಚಾರಣೆ ಮಾಡಲು ಯಾವುದೇ ಸಾರ್ವಜನಿಕ ಸಂಸ್ಥೆ ಇಲ್ಲ.

ಪ್ರಸ್ತುತ ಅನುವಾದದಲ್ಲಿ ಸಮಸ್ಯೆಗಳು ಕೆಳಗಿನಂತಿವೆ:
1. ಅನುವಾದವಾಗಿರುವ ಸಾಮಗ್ರಿಗಳ ಲಭ್ಯತೆಯಲ್ಲಿ ಸಾಕಷ್ಟು ವಿಮರ್ಶಾತ್ಮಕ ಅಂತರಗಳಿವೆ
2. ಅನುವಾದ ಗುಣಮಟ್ಟ ಮತ್ತು ಅನುವಾದವಾಗಿರುವ ಸಾಮಗ್ರಿಗಳನ್ನು ಎಟುಕುವಿಕೆಯಲ್ಲಿ ಸಾಕಷ್ಟು ಪ್ರಮುಖ ತೊಂದರೆಗಳಿವೆ. ಅದರ ಗುಣಮಟ್ಟವು ಇಜ್ಜೋಡಾಗಿದೆ ಮತ್ತು ಸಾರವಿಲ್ಲದಂತಿದೆ. ಹಾಗೆಯೇ ಅನುವಾದವಾಗಿರುವ ಪುಸ್ತಕಗಳು ಸಾಮಾನ್ಯವಾಗಿ ಅಕ್ಷರಶಃ ಅನುವಾದವಾಗಿರುತ್ತವೆ ಅಥವಾ ಅತ್ಯಂತ ಕ್ಲಿಷ್ಟಕರವಾದ ಭಾಷೆಯಲ್ಲಿ ಅನುವಾದವಾಗಿರುತ್ತದೆ. ಇದರಿಂದ ಅನುವಾದ ಗ್ರಂಥ ಎಟುಕುವಂತಿರುವುದಿಲ್ಲ. ಹಾಗೆಯೇ ಅನುವಾದವಾಗಿರುವ ಗ್ರಂಥದ ಉತ್ಪಾದನಾ ಗುಣಮಟ್ಟವು ಸಹ ವಿಭಿನ್ನವಾಗಿರುತ್ತದೆ.
3. ಅನುವಾದದಲ್ಲಿ ಸಾಕಷ್ಟು ಸಮಯದ ಅಭಾವವಾಗುವುದರಿಂದ, ಇತ್ತೀಚಿನ ಯಾವ ಪುಸ್ತಕಗಳು ಅನುವಾದದಲ್ಲಿ ಸಾಕಷ್ಟು ವರ್ಷಗಳವರೆಗೆ ದೊರಕುವುದಿಲ್ಲ.
4. ಅನುವಾದ ಸಾಮಗ್ರಿಯ ಪ್ರಸರಣ ಹಾಗೂ ಪ್ರೋತ್ಸಾಹದಲ್ಲಿ ನ್ಯೂನತೆಯಿರುವುದರಿಂದ ಸಾಮಾನ್ಯ ಜನರಿಗೆ ಅದರ ಲಭ್ಯತೆಯ ಬಗ್ಗೆ ತಿಳುವಳಿಕೆಯಿರುವುದಿಲ್ಲ. ಅದರಲ್ಲಿ ಸಾಕಷ್ಟು ಒಳ್ಳೆಯ ಗುಣಮಟ್ಟದ ಅನುವಾದ ಇದ್ದರೂ ಸಹ.
5. ಕ್ಲಿಷ್ಟಕರ ಅಂತರಗಳಿದ್ದರೂ ಸಹ ಅನುವಾದದಲ್ಲಿ ಅನಾವಶ್ಯಕ ನಕಲುಗಳಿಂದಾಗಿ ಸಂಯೋಜನೆಯೇ ಇಲ್ಲದಂತಾಗಿದೆ.
6. ಆಂಗ್ಲಭಾಷೆಯಿಂದ ಇತರ ಭಾಷೆಗಳಲ್ಲಿ ಹಾಗೂ ಇತರ ಭಾಷೆಗಳಿಂದ ಆಂಗ್ಲಭಾಷೆಗೆ ವೆಬ್ (ಜಾಲ) ಆಧಾರಿತ ಅನುವಾದ ಸೇವೆಯು ಇನ್ನೂ ತರುಣಾವಸ್ಥೆಯಲ್ಲಿಯೇ ಇದೆ. ಯಂತ್ರಾನುವಾದ ಮಾಡುತ್ತಿರುವವರಲ್ಲಿ C-DAC, ವ್ಯಾಕರ್ತ, MANTRA, NCST ಮುಂಬೈ: MATRA, IITS (ಕಾನ್ಪುರ) ಅನುಸಾರಕ, ಅಂಗ್ಲಭಾರತಿ ಇತರೆ ಪ್ರಮುಖರು. ಇವುಗಳಲ್ಲಿ ಇನ್ನೂ ಸಾಕಷ್ಟು ಸಮಸ್ಯೆಗಳಿವೆ, ಅವುಗಳಲ್ಲಿ ಕೆಲವೇ ಕೆಲವು ಭಾರತೀಯ ಭಾಷೆಗಳಲ್ಲಿ ಮಾತ್ರ ಯಶಸ್ಸು ಕಂಡಿವೆ. ಆನ್ಲೈನ್ನಲ್ಲಿ ಭಾಷಾ ಶಬ್ದಕ್ಕೆ ಸಂಬಂಧಿಸಿದಂತಹ ಸಂಪನ್ಮೂಲಗಳ ಕೊರತೆ ಸಂಯೋಜನೆಯ ಕೊರತೆ ಎದ್ದು ಕಾಣುತ್ತದೆ.

ಆದಾಗ್ಯೂ ಭಾರತದಲ್ಲಿ ಅನುವಾದ ಸೇವೆಗಳ ಅಭಿವೃದ್ಧಿಯಾಗಲು ಸಾಕಷ್ಟು ಅನುಕೂಲಗಳಿವೆ:
1. ಸಾಕಷ್ಟು ಪ್ರಮಾಣದಲ್ಲಿ ದ್ವಿಭಾಷಾ ಪಾಂಡಿತ್ಯ ಪಡೆದಿರುವ ಜನಸಂಖ್ಯೆಯಿರುವುದರಿಂದ ಅವುಗಳನ್ನು ಅನುವಾದದಲ್ಲಿ ವಿನಿಯೋಗಿಸಬಹುದಾಗಿದೆ. ಹಾಗಾಗಿ ಇದು ಸುಶಿಕ್ಷಿತ ಔದ್ಯೋಗಿಕ ಪೀಳಿಗೆಯ ನಿರ್ಮಾಣವಾಗುವಲ್ಲಿ ಸಹಕಾರಿಯಾಗಿದೆ.
2. ಈಗಾಗಲೇ ಸಾಕಷ್ಟು ಸಂಸ್ಥೆಗಳು ಭಾಷಾ ತರಬೇತಿಯನ್ನು ನೀಡಲು ತಯಾರಾಗುತ್ತಿರುವುದರಿಂದ ಇದನ್ನು ಸಾಕಷ್ಟು ಸುಲಭವಾಗಿ ವಿಸ್ತರಿಸಬಹುದು. ಅನುವಾದಕ್ಕಾಗಿ ಬೇಕಾಗಿರುವ ಇತರ ದಕ್ಷತೆಗಳನ್ನು ಪಡೆಯುವುದು ಕಷ್ಟಸಾಧ್ಯವಲ್ಲದರಿಂದ ಅವುಗಳನ್ನು ಈಗಿರುವ ಕೋರ್ಸ್ಗಳಲ್ಲಿಯೇ ಅಳವಡಿಸಬಹುದು.
3. ಅನುವಾದ ಕೇವಲ ಸೀಮಿತವಾದ ಮಾರುಕಟ್ಟೆ ಹೊಂದಿರುವುದರಿಂದ ಅದರ ಕೃತಿಸ್ವಾಮ್ಯ ಅಂಶಗಳು ಕಡಿಮೆ ಇರುತ್ತವೆ. ಆದುದರಿಂದ ಪುಸ್ತಕಗಳು ಮತ್ತು ಇತರೆ ಎಲ್ಲಾ ಸೌಲಭ್ಯಗಳು ಕಡಿಮೆ ಬೆಲೆಗೆ ಸುಲಭವಾಗಿ ದೊರಕುವಂತಾಗುತ್ತವೆ.
4. ಸಂಪುಟಗಳು ಬೃಹತ್ ಸಂಪುಟಗಳಾಗಿರುವುದರಿಂದ, ಇದು ಕಡಿಮೆ ವೆಚ್ಚದ ಉತ್ಪಾದನಾ ಶುಲ್ಕವನ್ನು ಮತ್ತು ಹೆಚ್ಚು ಖಾಸಗಿ ಸಹಭಾಗಿತ್ವವನ್ನು ಹೊಂದಿರುತ್ತವೆ. ಇದು ಮೂಲ ವಿನ್ಯಾಸಗಳು ಅಭಿವೃದ್ಧಿ ಹೊಂದಿದ ನಂತರ ಮಾತ್ರ ಸಾಧ್ಯ.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ:
  » ಅನುವಾದಗಳನ್ನು ಒದಗಿಸುತ್ತಿರುವ ಹಾಗು ಅದರ ಬಗ್ಗೆ ವ್ಯವಹರಿಸುತ್ತಿರುವ ಚಾಲ್ತಿಯಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಯಾವುವು ಮತ್ತು ಅವು ಎಷ್ಟು ಪ್ರಭಾವಿಯಾಗಿವೆ?
  » ಇಂತಹ ಕಾರ್ಯಚಟುವಟಿಕೆಗಳಲ್ಲಿ ಸಾರ್ವಜನಿಕ ವಲಯದ ಪ್ರಸಕ್ತಿ ಹೇಗಿರಬೇಕು? ಸಾರ್ವಜನಿಕವಾಗಿ ಯಾವುದಾದರೂ ವಿಮರ್ಶನಾತ್ಮಕ ಮೂಲಭೂತ ಸೌಕರ್ಯ ಒದಗಿಸುವ ಅವಶ್ಯಕತೆ ಇದೆಯೇ?
  » ಪ್ರಮುಖ ಭಾಷೆಗಳಿಗೆ ಇತ್ತೀಚಿನ ದಿನಗಳ ವಿವಿಧ ಸಾಮಾಗ್ರಿಗಳನ್ನು (ಇತ್ತೀಚಿನ ಸಾಹಿತ್ಯ, ಪ್ರಚಲಿತ ಆಸಕ್ತಿಗಳು, ಪ್ರಮುಖ ನಿಯತಕಾಲಿಕೆಗಳು) ಅನುವಾದ ಮಾಡುವಂತೆ ನಿಶ್ಚಯಿಸಲು ಯಾವುದಾದರು ಮಾರ್ಗವಿದೆಯೇ? ಯಾವುದು ಏನೇಂಬುದನ್ನು ನಿಶ್ಚಯಿಸುವವರು ಯಾರು?
  » ಈ ರೀತಿಯ ನಿರ್ಧಾರಗಳು ಕೇಂದ್ರೀಕೃತವಾಗಿರಬೇಕೇ ಅಥವಾ ಇವುಗಳು ರಾಜ್ಯ ಸರ್ಕಾರಗಳ ಮೂಲಕ ಸಂಯೋಜಿತವಾಗಬೇಕೇ?
  » ವಿವಿಧ ರೀತಿಯ ಅನುವಾದ ಸೇವೆಗಳ ಕೃತಿಸಾಮ್ಯ, ಪ್ರೋತ್ಸಾಹ, ಮೇಲ್ವಿಚಾರಣೆ ಇತ್ಯಾದಿಗಳನ್ನು ನೋಡಿಕೊಳ್ಳಲು ಯಾವುದಾದರೂ ಸಾರ್ವಜನಿಕ ಸಂಸ್ಥೆ ಇದೆಯೇ?
  » ಈ ಸ್ತರದಲ್ಲಿ ಖಾಸಗಿ ಚಟುವಟಿಕೆಗಳನ್ನು ಪ್ರೋತ್ಸಾಹಗೊಳಿಸುವುದು ಹೇಗೆ? ಈ ಚಟುವಟಿಕೆಗಳಲ್ಲಿ ಆರ್ಥಿಕ ಅಥವ ಇನ್ನಿತರೆ ಸೌಲಭ್ಯಗಳು ಬಂಡವಾಳಗಳಾಗಿ ಒದಗಿಸಬಹುದೇ? ಪ್ರಕಾಶನ ಕೇಂದ್ರಗಳಲ್ಲಿ ಸಹಭಾಗಿತ್ವಗಳನ್ನು ಅಭಿವೃದ್ಧಿಪಡಿಸಬಹುದೇ?
  » ಒಂದು ಗುಣಮಟ್ಟವಿರುವ ಅನುವಾದವನ್ನು ಹೇಗೆ ಖಾತ್ರಿಪಡಿಸುವುದು, ಎಚ್ಚರಿಸುವುದು ಹಾಗೂ ಮೇಲ್ವಿಚಾರಿಸುವುದು ಹೇಗೆ? ಈ ಕಾರ್ಯವ್ಯಾಪ್ತಿಯಲ್ಲಿ ಕೆಲವು ನಿಪುಣರನ್ನು ತರಬೇತಿ ಮಾಡಲು ಮತ್ತು ನಿಯೋಜಿಸಲು ಕೆಲವು ವಿಶೇಷ ಸಂಪನ್ಮೂಲಗಳನ್ನು ನಿಯೋಜಿಸುವ ಅವಶ್ಯಕತೆ ಇದೆಯೇ?
  » ಅನುವಾದವಾಗಿರುವ ಸಾಮಗ್ರಿಗಳ ತುರ್ತು ರವಾನೆ ಹೇಗೆ ಮಾಡಬೇಕು?
  » ಯಾಂತ್ರಾನುವಾದದ ಸಾಧ್ಯತೆಗಳೇನು ಮತ್ತು ಸಾಂಪ್ರದಾಯಿಕ ಅನುವಾದ ರೀತಿಗಳಲ್ಲಿ ಮತ್ತು ಯಾಂತ್ರಾನುವಾದದ ನಡುವೆ ಸಾಮ್ಯತೆ ತರಲು ಸಾಧ್ಯವೇ?

ತತ್ಕ್ಷಣ ಆಶಿಸಿರುವ ಹೆಜ್ಜೆ:
ಅನುವಾದ ಉದ್ದಿಮೆಯ ಪ್ರೋತ್ಸಾಹಕ್ಕಾಗಿ ರಾಷ್ಟ್ರೀಯ ಸಮಾಲೋಚನೆಗಾಗಿ ಕೆಳಕಂಡ ಪ್ರತಿನಿಧಿಗಳನ್ನು ಸಮಾವೇಶಗೊಳಿಸುವುದು:
  » ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕಕರು (ಆಡಳಿತ ಭಾಷೆಗಳ ಇಲಾಖೆ, ಶಿಕ್ಷಣ ಇಲಾಖೆ, ಸಂಸ್ಕೃತಿ ಮತ್ತು ವಿಜ್ಞಾನ ಇಲಾಖೆಗಳಿಂದ)
  » ಶಾಲೆಗಳು, ವಿಶ್ವವಿದ್ಯಾನಿಲಯಗಳು, ತಂತ್ರಜ್ಞಾನ ಸಂಸ್ಥೆಗಳು
  » ಉದ್ದಿಮೆ (ವಿವಿಧ ಸ್ತರಗಳಲ್ಲಿ ಅನುವಾದಕ್ಕಾಗಿ ಕಾರ್ಮಿಕರ ಅವಶ್ಯಕತೆಯಿರುವುದರಿಂದ)
  » ಮಾಧ್ಯಮ
  » ಪ್ರಕಾಶನ ಉದ್ಯಮ
  » ಭಾಷಾ ಶಾಲೆಗಳು

ಆದಷ್ಟು ಬೇಗ ಸಮರ್ಪಕ ಜನರನ್ನು ಮತ್ತು ಸಂಸ್ಥೆಗಳನ್ನು ಗುರುತಿಸಬೇಕಾಗಿದೆ ಮತ್ತು ವಿಚಾರದ ಕುರಿತು ಚಿಕ್ಕ ಟಿಪ್ಪಣಿ ಮತ್ತು ಪ್ರಸರಣದ ಗುರಿ ಕುರಿತಾದ ಒಂದು ಟಿಪ್ಪಣಿಯನ್ನು ಕೆಲವು ಪರಿಣತರೊಂದಿಗೆ ಚರ್ಚಿಸಿ ನಿರ್ಧರಿಸಬೇಕು.