|
ಸಮಾರೋಪ
|
ಒಂದು ದೇಶವಾಗಿ ಭಾರತವು ತಾಂತ್ರಿವಾಗಿ ಪರಿಪಕ್ವ ಪ್ರಜಾಪ್ರಭುತ್ವವಾಗಿ ಪ್ರಸ್ತುತವಾಗಿ ಪ್ರಸನ್ನವಾಗಿದೆ.
ಇದಕ್ಕೆ ನಮ್ಮ ದೇಶವು ಸಂವೇದನಾ ಸ್ವಾತಂತ್ರ್ಯವನ್ನು ಪ್ರತಿಪಾದಿಸಲು ಮುಂದಾಗಿ, ತನ್ನ ಸಮಸ್ಯೆಗಳ ಒಡೆತನ
ಹೊಂದಲು ಸಮ್ಮತಿಯನ್ನು ಪ್ರತಿಪಾದಿಸಿ ಒಂದೇ ಪ್ರಾರಬ್ಧತೆಯ ದೃಷ್ಟಿಕೋನವನ್ನು ಹಂಚಿಕೊಳ್ಳುವ ವಿವಧತೆಯ
ಜನರ ಸಹಬಾಳ್ವೆಯಲ್ಲಿ ನಂಬಿಕೆಯನ್ನು ಪುನಃ ದೃಢೀಕರಿಸಲು ಒಂದು ಸಾಮಾಜಿಕ ಅನುಕ್ರಮವನ್ನು ಹೊಂದಲು ಪ್ರಯತ್ನಿಸುತ್ತಿದೆ.
ಭಾಷೆಗಳು ನಮ್ಮ ಬಹು ಸಾಂಸ್ಕೃತಿಕ ಸಿದ್ಧಾಂತ ಪರಂಪರೆಯ ಆತ್ಮ ಹಾಗೂ ಬಹುಭಾಷೀಯತೆ ನಮ್ಮ ಜೀವನ ವಿಧಾನ.
ಭಾರತೀಯ ಭಾಷೆಗಳ ಪ್ರಚಾರವನ್ನು ರಾಷ್ಟ್ರವು ಒಂದು ಪ್ರಗತಿಪರ ಪ್ರಕ್ರಿಯೆಯ ಬಹುಮುಖ್ಯ ಅಂಗ ಎಂದು ಪರಿಗಣಿಸಬೇಕು.
ಇದು ಜನರ ಪ್ರಜಾಪ್ರಭುತ್ವ ಭಾಗಿತ್ವವನ್ನು ಹೆಚ್ಚಿಸಿ ನಮ್ಮ ರಾಷ್ಟ್ರವು ಮಹೋನ್ನತ ರಾಷ್ಟ್ರವಾಗಿ ಉಳಿಯಲು
ಕೀಲಿಯಾಗಿದೆ. ನಮ್ಮ ಸಂಸ್ಕೃತಿಯು ಭಾಷೆಗಳ ಅಧ್ಯಯನದ ಮಹತ್ವವನ್ನು ಯಾವಾಗಲೂ ಅರ್ಥೈಸಿಕೊಂಡಿದೆ. ವೇದಕಾಲದಿಂದಲೂ
ಜ್ಞಾನದ ಆರು ವಿಭಾಗಗಳಾದ ಶಿಕ್ಷ, ವ್ಯಾಕರಣ, ನಿರುಕ್ತ ಮತ್ತು ಛಂದಸ್ಸು ಭಾಷೆಗೆ ಸಂಬಂಧಿಸಿದ್ದವು.
ಭಾರತೀಯ ವ್ಯಾಕರಣಕಾರರು ಕೈಗೊಂಡ ಕೆಲಸ (ತಮಿಳು ಮತ್ತು ಸಂಸ್ಕೃತದಲ್ಲಿ) ಬಹಳ ಉತ್ಕೃಷ್ಟ ಗುಣಮಟ್ಟದಾಗಿದ್ದು
ಅದು ಭಾಷೆಯ ವೈಜ್ಞಾನಿಕ ಅಧ್ಯಯನಕ್ಕೆ ತಳಹದಿ ಇರಿಸಿತು. ಹಲವಾರು ಆಧುನಿಕ ಸಿದ್ಧಾಂತಗಳು ನಮ್ಮ ಪೂರ್ವಜನರು
ಕೈಗೊಂಡ ಕಾರ್ಯಗಳಿಂದ ಬಹಳಷ್ಟು ಉಪಯೋಗಗಳನ್ನು ಕಂಡುಕೊಂಡಿವೆ. ಒಂದು ನಿರ್ದಿಷ್ಟ ಸಮಯದಲ್ಲಿ ಭಾರತದ
ಜ್ಞಾನಾಧಾರಿತ ಪಠ್ಯಗಳು ಅನುವಾದದ ಮೂಲಕ ಏಷ್ಯಾದ ಹಲವು ಭಾಗಗಳಲ್ಲಿ ತಮ್ಮ ದಾರಿಯನ್ನು ಕಂಡುಕೊಂಡವು.
18 ಹಾಗು 19ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ಭಾರತಕ್ಕೆ ತರಲು ಇದೇ ಸಾಧನವನ್ನು ಬಳಸಲಾಗಿತ್ತು,
ಅಲ್ಲದೇ ಕಳೆದ ಶತಮಾನವು ಈ ಜ್ಞಾನದ ವಾಸ್ತವಿಕ ಸ್ಫೋಟವನ್ನು ಕಂಡಿತು. ಆದರೆ ಬಹಳವಾಗಿ ಪಶ್ಚಿಮದಿಂದ
ಭಾರತಕ್ಕೆ ಪಠ್ಯಗಳ ಹಾಗೂ ಜ್ಞಾನದ ಲಂಬಾಕಾರದ ಹಾಗೂ ಏಕದಿಕ್ಕಿನ ಹರಿವು ಕಂಡು ಬಂತು. ನಾವು ಹಲವಾರು
ಸಂದರ್ಭಗಳಲ್ಲಿ ಹಾಗೂ ಬಹುಪಾಲು ಶಾಸ್ತ್ರಗಳಲ್ಲಿ ಇಂಗ್ಲೀಷ್ ಆಧಾರಿತ ಪಠ್ಯಗಳನ್ನೇ ಬೋಧಿಸುತ್ತಿದ್ದೇವೆ.
ನಾವು ಈಗ ಎದುರಿಸುತ್ತಿರುವ ಪರಿಸ್ಥಿತಿಯೇನೆಂದರೆ, ಕೇಂದ್ರಗಳನ್ನು ಹೊರತುಪಡಿಸಿ ಇತರೆಡೆ ಬೋಧನೆಯು
ಸ್ಧಳೀಯ ಭಾಷೆಯಲ್ಲಿ ನೆರವೇರುತ್ತದೆ. ಆದರೆ ಆ ಭಾಷೆಗಳಲ್ಲಿ ದೊರಕುವ ಸಂಪನ್ಮೂಲ ಪಠ್ಯಗಳು ವಿರಳ. ಆಂಗ್ಲಭಾಷೆಯು
ವಾಣಿಜ್ಯ ಹಾಗು ಸಂವಹನ ಭಾಷೆಯಾಗಿ ಇಂದು ಪ್ರಚಲಿತವಾಗಿದೆ ಆದರೆ, ವಿಶ್ವವಿದ್ಯಾನಿಲಯದ ಶಿಕ್ಷಣದ ಆಜ್ಞಾ
ಮಾಧ್ಯಮವಾಗಿ ಆಂಗ್ಲ ಭಾಷೆಯು ಕ್ಷೀಣಿಸುತ್ತಿದೆ. ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಭಾಷಾ ಪಲ್ಲಟನೆ
ಒಂದು ನೈಜ ಸಮಸ್ಯೆಯಾಗಿದೆ. ಕಲಿಸಲ್ಪಟ್ಟವರ ಭಾಷೆಗಳು ಹಾಗೂ ಯಾವ ಭಾಷೆಗಳ ಮುಖಾಂತರ ಬೋಧನೆ ನಡೆಯುತ್ತಿದೆಯೋ,
ಆ ಎರಡು ಭಾಷೆಗಳ ನಡುವೆ ಒಂದು ಬೃಹತ್ ಅಂತರ ಹೊರಬೀಳುವುದು.
ತಾಂತ್ರಿಕ ಪ್ರಗತಿಯ ಸ್ತರದಲ್ಲಿ ಬಹು ಮುಖ್ಯವಾದ ಪ್ರೋತ್ಸಾಹವನ್ನು ನಾವು ಕಾಣಬಹುದಾಗಿದೆ. ನಮ್ಮ ಭಾಷೆಗಳು
ಮತ್ತು ವ್ಯಾಕರಣ ಉಲ್ಲೇಖಗಳು ನಮಗೆ ಸ್ವಾಭಾವಿಕ ಭಾಷಾ ಪರಿಷ್ಕರಣೆಯಲ್ಲಿ ಸಾಕಷ್ಟು ಸಹಾಯವಾಗುವಂತೆ
ಯಾಂತ್ರಿಕ ಕೌಶಲ್ಯವನ್ನು ನೀಡುವುದು. ಮಾಹಿತಿ ತಂತ್ರಜ್ಞಾನದಲ್ಲಿ ನಾವು ಅತ್ಯಂತ ತೀವ್ರವಾದ ದಾಪುಗಾಲು
ಹಾಕುತ್ತಿರುವುದು ನಮ್ಮ ಯಂತ್ರಾಧಾರಿತ ಅನುವಾದದಲ್ಲಿನ ಕಾರ್ಯವ್ಯಾಪ್ತಿಗೆ ಸಾಕಷ್ಟು ಅನುಕೂಲಗಳನ್ನು
ಮಾಡಿಕೊಡುತ್ತದೆ. ಹಾಗಾಗಿ ಎಲ್ಲಾ ಸಂಬಂಧಪಟ್ಟ ಸಂಸ್ಥೆಗಳು ಭಾರತೀಯ ಭಾಷೆಗಳನ್ನು ಒಗ್ಗೂಡಿಸುವಲ್ಲಿ
ಮತ್ತು ಅದರಿಂದ ಎಲ್ಲಾ ವರ್ಗಗಳು ಔನತ್ಯ ಮತ್ತು ಅನುವಾದ ಚಟುವಟಿಕೆಗಳಲ್ಲಿ ತಮ್ಮ ಕೈಗೂಡಿಸುತ್ತವೆಂದು
ಆಶಿಸಲಾಗಿದೆ.
ಸ್ಥಳ ಮತ್ತು ಸಮಯಗಳ ನಡುವಿನ ಸೇತುವೆಯಾಗಲು ಮಾನವ ಜನಾಂಗಕ್ಕೆ ದೊರಕಿರುವ ಅಮೂಲ್ಯವಾದ ಉಡುಗೊರೆಯೆಂದರೆ
ಭಾಷೆ. ಇದರ ಹೊರತಾಗಿ ಯೋಚಿಸುವ ಇತರ ಬಲಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಹಾಗೂ ಭಾಷೆಯನ್ನು ವಿವಾದರಹಿತವನ್ನಾಗಿಸಲು
ಬೇಕಾದ ಅಂಶಗಳ ಕುರಿತು ಅನ್ವೇಷಿಸಬೇಕು. ನಾವು ಪ್ರತಿಯೊಬ್ಬರಿಗೂ ತಿಳಿಸಬೇಕಾಗದ ಪ್ರಮುಖಾಂಶವೇನೆಂದರೆ
ಭಾಷೆಗಳು ನಮ್ಮ ಸಂಪತ್ತು ಮತ್ತು ಬಹುಭಾಷಿತ್ವವು ನಮ್ಮ ಆಸ್ತಿ, ಮತ್ತು ನಮ್ಮ ಜನರ ಭವಿತವ್ಯವು ನಮ್ಮ
ಭಾಷೆಗಳ ಭವಿತವ್ಯದ ಮೇಲೆ ನಿಂತಿದೆ ಎಂಬುದು ನಮಗೆ ಮನದಟ್ಟದಾಗಿದೆ ಹಾಗೂ ಇವುಗಳ ಆಧಾರದ ಮೇಲೆ ಮತ್ತು
ಇವುಗಳ ಮೂಲಕ ನಾವು ನಮ್ಮ ಜ್ಞಾನವೃದ್ಧಿಯನ್ನು ಮಾಡಿಕೊಳ್ಳುತ್ತೇವೆ. ಭಾಷೆಯ ಮೂಲಕ ಮತ್ತೊಂದು ಭಾಷೆಗೆ
ಜ್ಞಾನವರ್ಗೀಕರಣವಾಗುವಂತಹ ಒಂದು ಸಂಸ್ಕೃತಿಯನ್ನು ಶಕ್ಯವಾಗಿಸುವತ್ತ ನಾವು ತಯಾರಾಗಬೇಕು. ಇಲ್ಲಿ ಉಲ್ಲೇಖಿಸಿರುವ
ರಾಷ್ಟ್ರೀಯ ಅನುವಾದ ಮಿಷನ್ ಈ ನಿಟ್ಟಿನಲ್ಲಿ ಸಂಶೋಧನೆಯ ಮತ್ತು ಶೈಕ್ಷಣಿಕ ವಿನಿಮಯಗಳಲ್ಲಿ ಪ್ರೋತ್ಯಾಹವನ್ನು
ಹಾಗೆಯೇ ಭಾರತದಲ್ಲಿನ ಭಾಷೆಗಳ ಸಂಪೂರ್ಣ ಬೆಳವಣಿಗೆಯಲ್ಲಿ ಉಪಯುಕ್ತ ಸಾಧನವಾಗಿದೆ.
|
|
|