ಹಣಕಾಸು ಸಾಧನಗಳು ಮತ್ತು ಯೋಜನೆಯ ಪ್ರಾರಂಭ

ಹಣಕಾಸು ಪೂರೈಕೆ
ಭಾರತದಲ್ಲಿ ಅನುವಾದ ಕಾರ್ಯಚಟುವಟಿಕೆಗಾಗಿ, ಭಾರತ ಸರ್ಕಾರದಿಂದ ಸಹಕರಿಸಲ್ಪಟ್ಟ ಪ್ರಮುಖ ಸಂಸ್ಥೆಯಾಗಿ NTM ಹೊರಹೊಮ್ಮಿದೆ. NTM ಕೇಂದ್ರದ ಯೋಜನೆಯಾಗಿದೆ. ಆದಾಗ್ಯೂ, NTM ನಿಂದ 12ನೇ ವಾರ್ಷಿಕ ಯೋಜನೆಯಿಂದ ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಏಕೆಂದರೆ, NTM ಅಂದಿನಿಂದ ಭಾಷಾಂತರ ಪರಕರಗಳಾದ ನಿಘಂಟು, ಅರ್ಥಕೋಶ, ಭಾಷಾಂತರ ತಂತ್ರಾಂಶ, ಹಾಗೂ ಪಠ್ಯಪುಸ್ತಕಗಳ ನಿಚ್ಚಳ ಭಾಷಾಂತರವನ್ನು ವಿವಿಧ ಕ್ಷೇತ್ರಗಳಲ್ಲಿ ಗಳಿಸಿ ಅದನ್ನು ವಿವಿಧ ಸಂಸ್ಥೆಗಳ ಮೂಲಕ ಮಾರುಕಟ್ಟೆ ಮಾಡುತ್ತದೆ. ಹಾಗೆಯೇ, ಆ ಪುಸ್ತಕಗಳಿಗೆ ಯಾವ ರೀತಿ ದರ ನಿಗದಿ ಮಾಡಬೇಕೆಂದರೆ ಅದು ಸಮಾಜದ ಎಲ್ಲಾ ವರ್ಗದ ಜನರಿಗೆ ಕೈಗೆಟುಕುವಂತಿರಬೇಕು. ಪ್ರಕಾಶನ ಸಂಸ್ಥೆಗಳು ಸಹ-ಪ್ರಕಾಶನ ಹಾಗೂ ರಿಯಾಯಿತಿ-ಪ್ರಕಾಶನಗಳಲ್ಲಿ ತೊಡಗಿಕೊಳ್ಳುವುದರ ಬಗ್ಗೆ NTM – PACನಿಂದ ಇನ್ನೂ ನಿರ್ಧಾರವಾಗಬೇಕಾಗಿದೆ.

ಹಾಗೇ, ಅದರ ಎಲ್ಲಾ ಜಾಲಾಧಾರಿತ ವಿಷಯಗಳು ಮತ್ತು ಉಪಕರಣಗಳು ಎಲ್ಲರಿಗೂ ಉಚಿತವಾಗಿ ದೊರಕುವಂತೆ ಮಾಡಲು ನಿರ್ಧರಿಸಲಾಗಿದೆ. ಅನುವಾದ ತರಬೇತಿ ಶಿಬಿರಗಳು ಹಾಗೂ ವಿಶ್ವಾಸಪತ್ರ ಕೊಡುವುದಕ್ಕೆ ಕೆಲವು ನಿಗದಿತ ಶುಲ್ಕವನ್ನು ಪಾವತಿಸುವುದರ ಬಗ್ಗೆ ಇನ್ನೂ ನಿರ್ಧಾರವಾಗಬೇಕಾಗಿದೆ.

ಆಯವ್ಯಯ
ಮಾನವ ಸಂಪನ್ಮೂಲ ಸಚಿವಾಲಯದಿಂದ ಹಾಗೂ ರಾಷ್ಟ್ರೀಯ ಜ್ಞಾನ ಆಯೋಗದಿಂದ ರೂ. 250ಕೋಟಿ ಶಿಫಾರಸ್ಸು ಆಗಿದ್ದರೂ ಸಹ, ಈಗಿನ ಪ್ರಾರಂಭಿಕ ಹಂತಗಳಲ್ಲಿ ರೂ. 100 ಕೋಟಿಗೆ ಆಯವ್ಯಯವನ್ನು ನಿಗಧಿಪಡಿಸಲಾಗಿದೆ. ಮಾರ್ಚ್ 2008ರಂದು, EFC ಪ್ರತಿ ತಯಾರಾಗಿ ಅದನ್ನು ಪರಿಶೀಲಿಸಿದ ನಂತರ ಯೋಜನೆಗೆ ರೂ. 98.97ಕೋಟಿಯನ್ನು ಮಂಜೂರುಮಾಡಲಾಗಿದೆ. ಅಂತೆಯೇ, NTM – EFC, CSTT ಗೆ (20 ಕೋಟಿ) ಮತ್ತು NCERTಗೆ (5 ಕೋಟಿ) ನಿಗದಿಪಡಿಸಿರುವ ಮೊಬಲಗನ್ನು ಕೈಬಿಡುವಂತೆ ನಿರ್ಧರಿಸಿತು. (NTM – EFC ವರದಿ, 11 ವಸ್ತು (iv & v), 6ನೇ ಪುಟ, PAMDಯ ಪರಿಶೀಲನೆ ಪುಟ 4, ಪುಟ 2 ಮತ್ತು ಪ್ಯಾರಾ 10ನ್ನು ನೋಡಿರಿ).

ಅಂತಿಮವಾಗಿ, NTM – EFC ಸಭೆಯಲ್ಲಿ ರೂ. 73.97 ಕೋಟಿಯನ್ನು NTM ಗಾಗಿ ಮಂಜೂರು ಮಾಡಲಾಯಿತು. (NTM – EFC ಸಭೆಯ ವರದಿ, No. F. 25-4/2008-IFD, ದಿನಾಂಕ ಮೇ 22, 2008, ನೋಡಿರಿ) (NTM ವರದಿ, 11(i) ವಸ್ತು, ಪುಟ 6)

ಮಂಜೂರಾದ ಆಯವ್ಯಯದ ವಾರ್ಷಿಕ ವರದಿ ಇಂತಿದೆ:

    2008-09 2009-10 2010-11 2011-12 ಒಟ್ಟು
  ಮಂಜೂರಾದ ಆಯವ್ಯಯದ ವಾರ್ಷಿಕ ವರದಿ ಇಂತಿದೆ: 1519.712 2026.305 1800.731 2050.682 7397.43
1. ಮಾನವಸಂಪನ್ಮೂಲ 99.312 100.305 108.831 118.082 4,26.53
2. ಪ್ರಕಾಶನ ಮತ್ತು ಇತರೆ 1181.00 1901.60 1661.00 1901.60 6645.20
3. ಸಾಮಾನ್ಯ ಮೇಲ್ವಿಚಾರಣೆ 14.40 14.40 14.40 14.40 57.60
4. ಗಣಕಯಂತ್ರಗಳು/ಪರಿಕರಗಳು 220.00 00.00 00.00 00.00 2,20.00
5. ಉಪಕರಣಗಳ ಮೇಲ್ವಿಕಾರಣೆ 00.00 5.00 11.50 11.50 28.00
6. ಪ್ರಯಾಣ 5.00 5.00 5.00 5.00 20.00
ಅಂಕಣ 1: NTMಗಾಗಿಮಂಜೂರಾದ ಆಯವ್ಯಯದ ವಾರ್ಷಿಕ ವರದಿ.
 
ಈ ಸಂಪೂರ್ಣ ಕೆಲಸಗಳು (2ನೇ ಅಂಕಣದಲ್ಲಿ ಮೇಲಿನ ಮೇಜಿನಲ್ಲಿ ನಮೂದಿಸಿರುವಂತೆ) ಈ ಕೆಳಕಂಡಂತೆ ವಿಸ್ತಾರ ಮಾಡಲಾಯಿತು (CSTT ಮತ್ತು NCERTಗಳನ್ನು ಹೊರತುಪಡಿಸಿದ ನಂತರ)
 

ಕೆಲಸ-ಕಾರ್ಯಗಳ ವೆಚ್ಚ (ಲಕ್ಷಗಳಲ್ಲಿ)


ಅ. 1760 ಪರಾಮರ್ಶ ಗ್ರಂಥಗಳನ್ನು + 200 ಪಠ್ಯಪುಸ್ತಕಗಳ ಪ್ರಕಾಶನ ಮತ್ತು ಭಾಷಾಂತರ 4520.00
ಆ. ಭಾಷಾಂತರದ ನಿಯತಕಾಲಿಕೆಗಳಿಗೆ ಸಹಾಯಾನುಧಾನ ವಿಭಾಗದ ಸಹಾಯಧನ 200.00
ಇ. ಕೃತಿಸ್ವಾಮ್ಯ ಶುಲ್ಕಕ್ಕಾಗಿ ಅನುವಾದಕರಿಗೆ /ಬರಹಗಾರರಿಗೆ ಸಹಾಯಾನುಧನ ವಿಭಾಗದ ಅನುದಾನ 35.20 35.20
ಈ. ಅನುವಾದಕರ ತರಬೇತಿಗಾಗಿ ಸಹಾಯಾನುಧನದ ಅನುದಾನ 100.00
ಉ. ಸಹಾಯಾನುದಾನ + ಕೆಲಸ, ಈ-ನಿಘಂಟು/ಅರ್ಥಕೋಶ 990.00
ಊ. NLP ಸಂಶೋಧನೆಗಾಗಿ ಸಹಾಯಾನುದಾನದ ಅನುದಾನ 400.00
ಋ. ಅನುವಾದದಲ್ಲಿ ಪದವಿ/ಡಿಪ್ಲೋಮಾ ತರಗತಿಗಳನ್ನು ನಡೆಸುತ್ತಿರುವ ವಿಶ್ವವಿದ್ಯಾನಿಲಯಗದಳ ಇಲಾಖೆಗಳ ಸಹಾಯಾನುದಾನ 200.00
ೠ. (ಅಂತರ್) ಜಾಲ - ನಿರ್ವಹಣೆ (ರಾಷ್ಟ್ರೀಯ ನೋಂದಣಿ/ಲಘು ಪ್ರಕಟನೆ/ ಈ-ಕಾಲಿಕೆ/ ಹುಡುಕು/ಪರಿಕರಗಳು 200.00
  ಒಟ್ಟು (ಲಕ್ಷಗಳಲ್ಲಿ) 6645.20
ಅಂಕಣ 2: NTMನ ಸಹಾಯಾನುದಾನ ವಿಭಾಗಕ್ಕೆ, ಹೊರಗುತ್ತಿಗೆಗೆ, ಕನ್ಸಲ್ಟೆನ್ಸಿಗಳ ಕಾರ್ಯಗಳಿಗೆ ಮಂಜೂರಾದ ಅಯವ್ಯಯ.
 
ಅಂತೆಯೇ, EFCಯ ವರದಿಯಲ್ಲಿ, ಅನುಕೃತಿ ಹಾಗು CIILನಲ್ಲಿ ನಡೆಯುತ್ತಿರುವ ಇತರೆ ಭಾಷಾಂತರದ ಯೋಜನೆಗಳು ತದನಂತರ NTMನಡಿಯಲ್ಲಿ ಕಾರ್ಯನಿರ್ವಹಿಸಲು ಆದೇಶಿಸಲಾಯಿತು. ಇದರಿಂದ ಕೆಲಸದ ಪ್ರತಿಮಾಡುವಿಕೆಯನ್ನು ತಡೆಯಬಹುದಾಗಿದೆ.

NTM ಗೆ ಸಹಾಯಾನುದಾನದ ಅಂಶಕ್ಕೆ ಸಂಬಂಧಿಸಿದಂತೆ, ‘ಆ’ ಯಿಂದ ‘ಋ’ ಋ ವರೆಗೆ ಎಲ್ಲವನ್ನೂ ಕೂಡಬೇಕಾಗುತ್ತದೆ. (ಆದರೆ ‘ಉ’, ಉವನ್ನು ಹೊರತುಪಡಿಸಿ, ಏಕೆಂದರೆ ಅಲ್ಲಿ ಕೆಲಸಗಳು ಮತ್ತು ಸಹಾಯಾನುದಾನವನ್ನು ಬೇರ್ಪಡಿಸಲಾಗುತ್ತದೆ), ಮತ್ತು ವಿಶ್ವವಿದ್ಯಾನಿಲಯಗಳಿಗೆ, ಸಂಸ್ಥೆಗಳಿಗೆ, ಭಾಷಾಂತರದ ಪರಿಕರಗಳಿಗೆ, ವ್ಯಕ್ತಿಗಳಿಗೆ ಮತ್ತು ಸಂಶೋಧಕರಿಗೆ ಕೊಡುವ ಅಂಕಿಗಳು ರೂ. 1535.20 ಲಕ್ಷಗಳಾಗುತ್ತದೆ. ಈ ಆ, ಈ, ಉ ಮತ್ತುಊ, ಗಳಿಗೆ ಸಹಾಯಾನುದಾನವನ್ನು ನೀಡಲು ದೇಶದ ಎಲ್ಲಾ ಮೂಲೆಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸುವುದು ಸ್ಪಷ್ಟವಾಗಿದೆ. ಆದಾಗ್ಯೂ ಇ ಮಾತ್ರ ಪಠ್ಯಗಳ ಗುರುತಿಸುವಿಕೆ ಮೇಲೆ ಅವಲಂಬಿತವಾಗಿದೆ. ಮತ್ತು ಋ ಯಾವಯಾವ ವಿಶ್ವವಿದ್ಯಾನಿಲಯಗಳು ಭಾಷಾಂತರ ತರಗತಿಗಳನ್ನು ಹಮ್ಮಿಕೊಳ್ಳುತ್ತವೆ ಮತ್ತು ಅವಕ್ಕೆ ಎಷ್ಟು ಅನುದಾನ ನೀಡಬೇಕು ಎನ್ನುವುದರ ಮೇಲೆ ಅವಲಂಬಿತವಾಗಿದೆ. ಆದಾಗ್ಯೂ, NTM ನ PAC ಭೇಟಿಯ ನಂತರವೇ ಸಹಾಯಾನುದಾನದ ಕೆಲಸಗಳು NTM ನಲ್ಲಿ ಆರಂಭವಾಗುತ್ತವೆ.

ಜೂನ್ 18, 2008ರಂದು ಸನ್ಮಾನ್ಯ ಮಾನವ ಸಂಪನ್ಮೂಲ ಖಾತೆ ಸಚಿವರಿಂದ NTM ಸಂಪೂರ್ಣವಾಗಿ ಅನುಮೋದನೆಗೊಂಡಿತು. 2007-08ನೇ ಸಾಲಿನಲ್ಲಿ NTM ಗಾಗಿ 90 ಕೋಟಿ ರೂಗಳನ್ನು ಸಚಿವಾಲಯ ವಿತರಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು, (ಸಹಾಯಾನುದಾನದ ಮೇಲಿನ ಆಯವ್ಯಯ ಪುಟ 20 ನೋಡಿರಿ) ಹಾಗೂ ಎಲ್ಲಾ ಆಯವ್ಯಯ ವಿಭಾಗಗಳಿಗೆ ಮತ್ತು ಉಪಶೀರ್ಷಿಕೆಗಳನ್ನು ನಿರ್ಮಿಸಿರುವುದನ್ನು ನೋಡಬಹುದು. ಆದರೆ EFC ತಡಮಾಡದಿದ್ದರಿಂದ ಆ ಮೊಬಗಲನ್ನು ಖರ್ಚುಮಾಡಲಾಗಿಲ್ಲ. 2008-09 ಸಾಲಿಗೆ, ಅಂತೆಯೇ, NTM ನ ಕುರುಹಾಗಿ ರೂ. 100 ಲಕ್ಷವನ್ನು ಆಯವ್ಯಯದಲ್ಲಿ ಸೇರಿಸಲಾಗಿದೆ. ಅದರ ವಿವರ ಇಂತಿದೆ:

  2008-09 B.G.    
ಸಂಬಳ/ಇತರೆ 50.00 ಕಛೇರಿ ವೆಚ್ಚ 13.00
(ಒ.ಟಿ.ಎ.) 00.00 (ಒ.ಎ.ಸಿ.) 05.00
ವೈದ್ಯಕೀಯ 00.50 (ಒ.ಸಿ.) 05.00
ಪ್ರಯಾಣ ವೆಚ್ಚ 10.00 ಸಹಾಯಾನುಧಾನ 16.50
    ಒಟ್ಟು 100.00
ಅಂಕಣ 3: 2008-09ನೇ ಸಾಲಿನ NTM BGಗಾಗಿ ಮಂಜೂರಾದ ಹಣ.
 
ಸಂಸ್ಥೆಯು ಸಚಿವಾಲಯ ಮಂಜೂರು ಮಾಡಿರುವ ಆಯವ್ಯಯದ ಮೊದಲ 2 ಚತುರ್ಮಾಸಿಕ ಕಂತುಗಳನ್ನು ಅಂದರೆ ರೂ. 41.75 ಲಕ್ಷಗಳನ್ನು PAOಯಿಂದ ಬಿಡುಗಡೆಗೊಳಿಸಲು ಕೇಳಿದೆ. [ಪತ್ರ ಸಂ. 1-1/2008-09/Accts/ಆಯವ್ಯಯ/ (NTM)]. ಅಂತೆಯೇ CCAಯಿಂದ ಶಿಫಾರಸ್ಸು ಮಾಡಿರುವಂತೆ NTM ಸಹಾಯಾನುದಾನಕ್ಕಾಗಿ ಪ್ರತ್ಯೇಕಖಾತೆಯನ್ನು ತೆರೆಯಲು ವಿವಿಧ ಹಂತಗಳಲ್ಲಿ ಕೆಲಸ ನಡೆಯುತ್ತಿದೆ. ಆದಾಗ್ಯೂ, EFCಯ ಪ್ರಕಾರ 2008-09ನೇ ಸಾಲಿನ ಆಯವ್ಯಯ ಉಳಿದಿರುವ ಬಾಬ್ತು ರೂ. 1419.712 ಲಕ್ಷ (ಏಪ್ರಿಲ್ - ಮೇ 08ರಲ್ಲಿ ಅಂದಾಜು ಮಾಡಿರುವಂತೆ) ಮತ್ತು ಈಗಾಗಲೇ ಸಾಕಷ್ಟು ಸಮಯ ರೀತಿ-ರಿವಾಜುಗಳನ್ನು ರಚಿಸುವುದರಲಿಲೇ ಮತ್ತು ಅವುಗಳನ್ನು ಪ್ರಾರಂಭಿಸುವುದರಲ್ಲೇ ಕಳೆದು ಹೋಗಿರುವುದರಿಂದ, ಮೊದಲ ವರ್ಷದ ಆಯವ್ಯಯವನ್ನು ಸಾಕಷ್ಟು ಪ್ರಮಾಣದಲ್ಲಿ ಇಳಿಸಬೇಕಾಗಿರುವುದು ಒಂದು ಪ್ರಮುಖ ಅಂಶ. ಕೆಳಗಿರುವ ಪಟ್ಟಿಯಲ್ಲಿನ ಅಂಕಿ-ಅಂಶಗಳು ಕಡಿತಗೊಳಿಸಿರುವ ವೆಚ್ಚವನ್ನು ವಾರ್ಷಿಕ ವರದಿಯಂತೆ ನಮೂದಿಸಲಾಗಿದೆ. ಮೊದಲ 1 ಮತ್ತು 2ನೇ ಪಟ್ಟಿಗಳನ್ನು ಗಣನೆಗೆ ತೆಗೆದುಕೊಂಡು ಕೆಳಗಿನ ಪಟ್ಟಿಯನ್ನು ತಯಾರಿಸಲಾಗಿದೆ.
 
NTM ಆಯವ್ಯಯ (ಲಕ್ಷಗಳಲ್ಲಿ)
  2008-09ರಲ್ಲಿ
ಬಿಡುಗಡೆ-ಗೊಳಿಸಿರುವುದು
2008-09ರಲ್ಲಿ
ಕೇಳಿರುವ ಹೆಚ್ಚಿನ ಹಣ
2009-10 2010-11 2011-12 ಒಟ್ಟು
ಸಂಬಳ/ಇತರೆr 50.00 49.312
100.688
124.950*


274.950
100.305
110.757
183.260+
58.310

452.632
108.831
121.833
331.079#


561.743
118.082
134.016
364.187


616.285
1955.61
(ಒ.ಟಿ.ಎ.) 00.00 00.000 00.000 00.000 00.000 00.000
ವೈದ್ಯಕೀಯ 00.50 00.000 00.550 00.600 00.65 002.30
ಪ್ರಯಾಣ ವೆಚ್ಚ 10.00 05.000 30.000 35.000 45.00 125.00
ಕಛೇರಿ ವೆಚ್ಚ 13.00 112.000 45.000 50.000 00.000 220.00
(ಒ.ಎ.ಸಿ.) 05.00 09.400 14.400 14.400 14.400 057.60
(ಒ.ಸಿ.) 05.00 390.050 1099.923 1169.720 837.027 3501.72
ಸಹಾಯಾನುಧಾನ 16.50 175.400 383.800 422.18 537.320 1535.20
ಒಟ್ಟು 100.00 966.800        
Grand Total   1066.800 2026.305 2253.643 2050.682 7397.43
ಸೂಚನೆ: * 300 ಪುಸ್ತಕಗಳಿಗೆ ಅನುವಾದ ಶುಲ್ಕ + 440 ಪುಸ್ತಕಗಳಿಗೆ ಅನುವಾದ ಶುಲ್ಕ + ಹಿಂದಿನ ವರ್ಷಗಳ 140 ನಿಯೋಜಿತ ಕಾರ್ಯಗಳ ಬಾಕಿ ಪಾವತಿಗಾಗಿ 58.31 ಹಣ # 580 ಪುಸ್ತಕಗಳ ವೆಚ್ಚ ಮತ್ತು ಜಾಲಾಧಾರಿತ ವಿಷಯಾನುವಾದಗಾಗಿ 0.90.

ಅಂಕಣ 4: NTMಗಾಗಿಮಂಜೂರಾದ ಆಯವ್ಯಯದ ವಾರ್ಷಿಕ ವರದಿ.

ಯೋಜನೆಯು ಈಗಿನ್ನು ವಿಧಾಯಕ ಹಂತದಲ್ಲಿರುವುದರಿಂದ 2008-09ನೇ ಸಾಲಿಗೆ ಸಾಕಷ್ಟು ಕಡಿಮೆ ಪ್ರಮಾಣದ ಹಣ ಕೇಳಿರುವುದನ್ನು ನಾವು ಕಾಣಬಹುದಾಗಿದೆ: ರೂ. 1519.712 ಲಕ್ಷಗಳಿಗೆ ಬದಲಾಗಿ ರೂ. 1166.88 ಲಕ್ಷಗಳು, ಈ ಮೊತ್ತವು ಈಗಾಗಲೇ ಮಂಜೂರಾಗಿದೆ. ಪಟ್ಟಿ 1ರಲ್ಲಿ ನಮೂದಿಸಿರುವಂತೆ (NTM ವರದಿ ಮತ್ತು ಯೋಜನೆಯ ವಿಸ್ತೃತ ವರದಿಯಂತೆ). ಬೇರೆ ವರ್ಷಗಳಲ್ಲಿನ ಅಂಕಿ-ಅಂಶಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2008-09ರ ಉಳಿತಾಯವು 2010-11ಕ್ಕೆ ಜಮಾ ಆಗಿರುವುದನ್ನು, ಹೊರತುಪಡಿಸಿ, ಮೊದಲ ವರ್ಷದಲ್ಲಿ, 440 ಪುಸ್ತಕಗಳು ಭಾಷಾಂತರಕ್ಕಾಗಿ ಹಂಚಿಕೆಯಾದರೆ, ಅದರಲ್ಲಿ ಶೇಕಡ 68 ರಿಂದ 70ರಷ್ಟನ್ನು ಸಲ್ಲಿಸಬಹುದೆಂದು, ಅಂದರೆ 300 ಪುಸ್ತಕಗಳಿಗಿಂತ ಹೆಚ್ಚು ಅನುವಾದಕರಿಂದ ಮಂಡಿಸಲಾಗುವುದಿಲ್ಲವೆಂದು ಭಾವಿಸಲಾಗಿದೆ. (ಪ್ರತಿ ಪುಸ್ತಕ 250 ಪುಟಗಳಷ್ಟು ಉದ್ದವಿರಬಹುದೆಂಬ ಅಂದಾಜಿನ ಮೇಲೆ) 10ನೇ ಯೋಜನೆಯಲ್ಲಿ ಅನುಮೋದಿಸಿರುವ ‘ಕಥಾಭಾರತಿ’ ಯೋಜನೆಯಲ್ಲಿ ಪ್ರತಿ 1000 ಪದಗಳಿಗೆ ರೂ. 300 (= 3 ಮುದ್ರಿತ ಪುಟಗಳಂತೆ) ನ್ನು ನಿಯೋಜಿಸಲಾಗಿತ್ತು. NTM ಏನಾದರೂ 1000 ಪದಗಳಿಗೆ ರೂ. 500ರನ್ನು ಕೊಡಲು ಒಪ್ಪಿದರೆ, ಅದೂ ಸಹ ತಾಂತ್ರಿಕ ಭಾಷಾಂತರಕ್ಕಾಗಿ, ಆಗ ನಾವು ಸರಿಸುಮಾರು ರೂ. 41,665ನ್ನು ಪ್ರತಿ ಅನುವಾದಕರಿಗೆ ನೀಡಬೇಕಾಗುತ್ತದೆ. 1960 ಪುಸ್ತಕಗಳಿಗೆ, ಅಂದರೆ ಅವುಗಳ ರೂಪಾಂತರ ಮತ್ತು ಭಾಷಾಂತರಕ್ಕೆ, ಮೌಲ್ಯಮಾಪನಕ್ಕೆ, ಅಚ್ಚುಪಡಿ - ಸಂಪಾದನೆಗೆ, ರೂ. 4520 ಲಕ್ಷಗಳನ್ನು (ಪಟ್ಟಿ 2ನ್ನು ನೋಡಿರಿ) ಇದರ ಜೊತೆ ಮುದ್ರಣ ಮತ್ತು ಪ್ರಕಾಶನ, ವೇತನ/ಬೆಲೆ ಸೇರಿದೆ. ಹಾಗಾಗಿ ಈಗ ನಾವು 2008-09ರ ಅಗತ್ಯತೆಗಳನ್ನು ಲೆಕ್ಕಹಾಕಬೇಕು. 2008-09ರಲ್ಲಿ ಸುಮಾರು 440 ಶೀರ್ಷಿಕೆಗಳನ್ನು ಮತ್ತು ಕೇವಲ 300 ಪುಸ್ತಕಗಳನ್ನು (ಅಂದರೆ 250 ಪುಟಗಳ ಅಂದಾಜು) ಸಂಪೂರ್ಣಗೊಳಿಸಿ ಮತ್ತು ಅವುಗಳ ಮೌಲ್ಯಮಾಪನ/ಅಚ್ಚುಪಡಿ ಸಂಪಾದನೆಯನ್ನು ಪೂರ್ಣಗೊಳಿಸುವುದಕ್ಕಾಗಿ, ನಾವು 4520 ಲಕ್ಷಗಳಲ್ಲಿ ಕೇವಲ 520 ಲಕ್ಷಗಳನ್ನು ಕೇಳಲು ನಿರ್ಧರಿಸಲಾಗಿದೆ (ಇದರಲ್ಲಿ ಒಂದು ಭಾಗವನ್ನು ಸಮಾಲೋಚರಿಗೆ ಮತ್ತು ಒಂದು ಭಾಗವನ್ನು OC headಗಳಿಗೆ ನೀಡಲಾಗುವುದು)

ಅಧಿಕಗಳಿಗೆ ಪ್ರತಿಪಾದನೆಗಳು (2 ಪಟ್ಟಿಯಲ್ಲಿನ, ‘ಅ’ ಅಂಶ): 520 ಲಕ್ಷ
1. ಅನುವಾದಕರಿಗೆ ಗೌರವಧನ 124.95 (ಲಕ್ಷಗಳಲ್ಲಿ) (41,650x300 .)
2. ಮೌಲ್ಯಮಾಪನ 15.00
3. ಅಚ್ಚುಪಡಿ-ಸಂಪಾದನೆ 75.00
4. data input/ಸಾರ್ವಜನಿಕ ಗಣಕತಂತ್ರ 30.00
5. ಮುದ್ರಣ (ಕಾಗದಗಳು/ಪ್ರಕಟಣೆಗಳು, ಇತರೆ) 200.05
6. IPR/ಕೃತಿಸ್ವಾಮ್ಯ 75.00

ಪರಿಕರಗಳಿಗೆಂದು ನಿಗಧಿಯಾಗಿರುವ ರೂ. 220 ಲಕ್ಷಗಳಲ್ಲಿ, ಮೊದಲ ವರ್ಷದ 125 ಲಕ್ಷಗಳು ದೆಹಲಿಯಲ್ಲಿ ಕಛೇರಿ ನಿರ್ಮಿಸಲು ಮತ್ತು ಅಲ್ಲಿಗೆ ಯಂತ್ರಗಳನ್ನು ಮತ್ತು ಮೂಲಭೂತ ಸರಂಜಾಮುಗಳನ್ನೊದಗಿಸಲು ನಿಗಧಿಯಾಗಿದೆ. TE ಅಡಿಯಲ್ಲಿ ನಾವು ಇನ್ನೂ ಅಧಿಕ ಹಣ ಕೇಳುತ್ತಿದ್ದೇವೆ, (5 ಲಕ್ಷಕ್ಕೆ ಬದಲಾಗಿ 15 ಲಕ್ಷ), ಮತ್ತು ಏಕೆಂದರೆ ಇದು ಮೊದಲ ವರ್ಷವಾದ್ದರಿಂದ, ಸಾಕಷ್ಟು ಸಭೆಗಳಿರುತ್ತವೆ. ಸಾಮಾನ್ಯ ಮೇಲ್ವಿಚಾರಣೆ ಅದರಂತೆಯೇ ಉಳಿಯುತ್ತಿದೆ, ಪಟ್ಟಿ 1ರಂತೆ: OAC 14.20 ಲಕ್ಷ.

ಅಂತಿಮವಾಗಿ, NTM ಸಹಾಯಾನುಧನದ ಹಣ ರೂ. 1535.20 (ಪಟ್ಟಿ 2) ಎಲ್ಲಾ 4 ವರ್ಷಗಳಲ್ಲಿನ, 2008-09 ರ ಭಾಗ ರೂ. 383.80 ಲಕ್ಷವಾಗಿರುತ್ತದೆ. ಆದಾಗ್ಯೂ, ಪ್ರಸಕ್ತ ವರ್ಷದಲ್ಲಿ ಇನ್ನೂ 7 ತಿಂಗಳು ಮಾತ್ರವಿರುವುದರಿಂದ, ಈಗ ಕೇಳಿರುವ ಅಧಿಕ ಮೊತ್ತದಲ್ಲಿನ ಹಣವು ರೂ. 191.20 ಲಕ್ಷಗಳು ಮಾತ್ರವಾಗಿರುತ್ತದೆ.

ಮೊದಲ ಹೆಜ್ಜೆಗಳು
ಯೋಜನೆಯ ಮೂಲ ವಿನ್ಯಾಸವನ್ನು ಸಿದ್ದಪಡಿಸಲು ಮತ್ತು ಅದರ ಹಿಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕೆಳಕಂಡ ಶ್ರೇಣಿಗಳಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಯೋಚಿಸಲಾಗಿದೆ:

1. ಸಾಕಷ್ಟು ಸಂಖ್ಯೆಯಲ್ಲಿ ಸಾಮಾನ್ಯ ಜನ ಮಿಷನ್ನ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಲು ಉತ್ಸುಕರಾಗಿರುವುದರಿಂದ NTM ನ ಕುರಿತಾದ ಮೂಲಭೂತ ಮಾಹಿತಿಯನ್ನು ಈಗ ಚಾಲ್ತಿಯಲ್ಲಿರುವ ಸಂಸ್ಥೆಯ ವೆಬ್-ಸೈಟ್ನಲ್ಲಿ ದಾಖಲಿಸಲಾಗುವುದು.
2. ಭಾಷಾಂತರ ಮತ್ತು ನಿಘಂಟುಗಳ ಯೋಜನೆಗಳನ್ನು NTM ನಲ್ಲಿ ವಿಲೀನಮಾಡಲು ತೀರ್ಮಾನಿಸಿದೆ. (NTM ವರದಿ, 11 (vi)ವಸ್ತು, ಪುಟ 6, ಮತ್ತು 8 ಕಂಡಿಕೆ FAಗಳ ಅವಲೋಕನಗಳು) ಮತ್ತು ಆಯೋಜನೆಗಳಲ್ಲಿ ಉದಾಹರಣೆಗೆ ಅನುಕೃತಿಯಂತಹ ಯೋಜನೆಗಳಲ್ಲಿ ನೇಮಿಸಿಕೊಂಡಿರುವ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಸಮಾಲೋಚಕರಾಗಿ ನಿಯುಕ್ತಿಗೊಳಿಸಲಾಗುವುದು.
3. ಒಂದು ಕರಡು ನೆಲವನ್ನು/ NTM ಗಾಗಿ ಒಂದು ಹುಡುಕು-ತಾಣವನ್ನು ಈಗಾಗಲೇ ದಾಖಲಿಸಲಾಗಿದ್ದು, ಅದರ ‘ಕಾರ್ಮಿಕ ವರ್ಗ’ ಈಗಾಗಲೇ ನಿರ್ಮಿಸಿದ್ದು (NTM ವರದಿ, 11 (vi)ವಸ್ತು, ಪುಟ 6) ಇದರಲ್ಲಿನ ಕರಡುಗಳನ್ನು ಮತ್ತದರ ಮಾಹಿತಿಯನ್ನು ಎಲ್ಲಾ 22 ಭಾಷೆಗಳಲ್ಲಿ ಪರಿವರ್ತಿಸಲಾಗುವುದು.
4. ಮೇಲೆ ತಿಳಿಸುವುದೆಲ್ಲವು ಹೊರಗುತ್ತಿಗೆಯ ಸಮಾಲೋಚಕರಿಗೆ ನೀಡುವ ಮೂಲಕ ನಡೆಸಬೇಕು (NTM ವರದಿ, 11 (vi)ವಸ್ತು, ಪುಟ 6 ಮತ್ತು HE-ಕಾರ್ಯದರ್ಶಿಯ ಅವಲೋಕನಗಳು 7ನೇ ಕಂಡಿಕೆ ಒಂದು ಆಂತರಿಕ ವ್ಯವಸ್ಥೆಯ ಹೊರಗುತ್ತಿಗೆಗಾಗಿ ನಿರ್ಮಿಸಿಸುವುದು). ಒಮ್ಮೆ ಈ ಎಲ್ಲಾ ತಳಹದಿಯ ಕೆಲಸಗಳು ಆದನಂತರ, ಅದನ್ನು PAC ಮಂಡಳಿಯ ಮುಂದೆ ಅಂಗೀಕಾರಕ್ಕಾಗಿ ಕಳುಹಿಸಬಹುದು ಮತ್ತು ಕೊನೆಗೆ ಸಚಿವಾಲಯ ಮತ್ತು PAC ಮಂಡಳಿಯ ಅಂಗೀಕಾರದೊಂದಿಗೆ ಯೋಜನೆಯನ್ನು ಆರಂಭಿಸಬಹುದು.
5. ಕನಿಷ್ಠ 6 ಪ್ರಮುಖ ಭಾಷೆಗಳನ್ನು ಮೂಲಭೂತ ಮುದ್ರಣ - ನಿಘಂಟುಗಳನ್ನು ಆದಷ್ಟು ಬೇಗ ಲಾಂಗ್ಮನ್ ಗುಂಪಿನಡಿ ಸಂಪೂರ್ಣಗೊಳಿಸಬೇಕು (PPP modeನಲ್ಲಿ) ಏಕೆಂದರೆ NTMನ ಮೊದಲ ಗುಂಪಿನ ಅನುವಾದ ಪರಿಕರಗಳು ಅಥವ ಉತ್ಪಾದನೆಯನ್ನು (ವರದಿ, 2ನೇ ಕಂಡಿಕೆ, ಪುಟ 1ರಂತೆ), ಮತ್ತು ಅದರ ಈ-ನಿಘಂಟುಗಳಾಗಿ ಪರಿವರ್ತಿಸಿಸುವ ಕೆಲಸವನ್ನು ಅದೇ ಸಮಾಲೋಚಕರು ಮಾಡುತ್ತಿದ್ದಾರೆ.
6. PAC ಮಂಡಳಿಯು ಭಾಷಾಂತರಕ್ಕಾಗಿ ಪುಸ್ತಕಗಳನ್ನು ಆಯ್ಕೆ ಮಾಡಲೋಸುಗ, ಪ್ರಮುಖ ವಿಶ್ವವಿದ್ಯಾನಿಲಯಗಳ, UGC ಮತ್ತು ಕೇಂದ್ರ ಲೋಕ ಸೇವ ಆಯೋಗಗಳ ಪಠ್ಯಕ್ರಮಗಳನ್ನು ಪಠ್ಯಗಳ ಮತ್ತು ಪರಾಮರ್ಶನ ಗ್ರಂಧಗಳ ಸಂಗ್ರಹವನ್ನು ಮಾಡಲಾಗುವುದು.
7. ವಿಸ್ತೃತ ಯೋಜನೆ ವರದಿಯ ಅಸಲು ಪ್ರತಿಯನ್ನು ಸಾಕಷ್ಟು ವಿಸ್ತರಿಸಲಾಗಿದೆ; ಅದು ಈಗ ರಚಿಸಲ್ಪಡುತ್ತಿರುವ NTM ನ ಹುಡುಕು-ತಾಣದಲ್ಲಿನ ಜಾಲ-ಪುಟಗಳಲ್ಲಿ ಅದನ್ನು ಆಧುನಿಕರಿಸಲಾಗುವುದು.
8. ರಾಷ್ಟ್ರೀಯ ಅನುವಾದಕರ ದಾಖಲಾತಿಯ ಕರಡು ಪ್ರತಿಯನ್ನು ASP scripting ಮತ್ತು MySQL ಗಳ ಹಿನ್ನಲೆಯಲ್ಲಿ ಈಗಾಗಲೇ ಸಿದ್ದಪಡಿಸಲಾಗಿದೆ.
9. ಎಲ್ಲಾ 22 ಭಾಷೆಗಳಲ್ಲಿ ಜಾಹಿರಾತು/ಮಾಧ್ಯಮದ ಪ್ರಚಾರ ಸಾಮಗ್ರಿಗಳಿಗಾಗಿ ತ್ವರಿತ ನಿರ್ಣಯಗಳನ್ನು ಜಾಗೃತಿ ಮೂಡಿಸಲು ಕೈಗೊಳ್ಳಬೇಕಾಗಿದೆ.
10. ‘ಅನುಕೃತಿ’ (ಇಲ್ಲಿಯವರೆಗೂ CIIL, ಸಾಹಿತ್ಯ ಅಕಾಡೆಮಿ ಮತ್ತು ರಾಷ್ಟ್ರೀಯ ಪುಸ್ತಕ ಪ್ರಾದಿಕಾರದಿಂದ ನಡೆಸಲ್ಪಟ್ಟಿದೆ)ಯ ಹುಡುಕು-ತಾಣವನ್ನು NTM ನ ಮುಖ್ಯ ಹುಡುಕು-ತಾಣಕ್ಕೆ ಸಂಪರ್ಕಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ (NTM ವರದಿ, 2ನೇ ಕಂಡಿಕೆ, ಪುಟ 2ರಲ್ಲಿರುವಂತೆ: ಮೊದಲಿನ ‘ಅನುಕೃತಿ’ಯಲ್ಲಿರುವ ಎಲ್ಲಾ ಜಾಲಾಧಾರಿತ ಹಾಗೂ ಯೋಜನಾ ಆಯೋಗದಿಂದ ಅಂಗೀಕೃತವಾಗಿರುವ ಎಲ್ಲಾ ಭಾಷಾಂತರ ಚಟುವಟಿಕೆಗಳನ್ನು NTM ನ ಕಾರ್ಯವ್ಯಾಪ್ತಿಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ) ಹಾಗೆಯೇ ಅದರ ಪರಿವಿಡಿಗಳನ್ನು ವಿಭಜಿಸಿ ಅದನ್ನು ಉನ್ನತ ಸ್ತರಕ್ಕೇರಿಸಲು ಕಾರ್ಯಯೋಜನೆಗಳನ್ನು ಕೃತಿಗಿಳಿಸಲಾಗಿದೆ.
11. NTM ನ ಹುಡುಕು-ತಾಣವನ್ನು ಎಷ್ಟು ಸಾಧ್ಯವೋ ಅಷ್ಟು ಸಾರ್ವಜನಿಕರಿಗೆ ಸುಲಭವಾಗಿ ಅರಿವಾಗುವಂತೆ ಮತ್ತು ಸುಲಭ ಗಣಕ ತಂತ್ರಜ್ಞಾನದ ಮೂಲಕ ಭಾರತದ ಎಲ್ಲಾ ಭಾಷೆಗಳಲ್ಲಿ ಲಭಿಸುವಂತೆ ರಚಿಸಲಾಗಿದೆ (ಯೋಜನಾ ಆಯೋಗದ ಆದೇಶಿದಂತೆ, ನೋಡಿ NTM ವರದಿ, 3ನೇ ಕಂಡಿಕೆ, ಪುಟ 2) ಮತ್ತು
12. ಸಂಸ್ಧೆಯು ಈಗಾಗಲೇ ಅಂತರ್ರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು ಅನುವಾದಕ್ಕೆ ಸಂಬಂಧಿಸಿದಂತೆ ಮುಂದಿಡಬಹುದಾದ ನೀತಿ-ನಿಯಮಗಳ ಪ್ರಸ್ತಾಪಗಳ ಬಗ್ಗೆ ಮಾತುಕತೆಯನ್ನು ಪ್ರಾರಂಭಿಸಿದೆ. ಇದರಿಂದ PAC ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.