ನಿರ್ವಹಣಾ ವ್ಯವಸ್ಥೆಗಳು

ನಿರ್ವಹಣೆ
ಭಾರತೀಯ ಭಾಷಾ ಸಂಸ್ಥಾನ NTM ಅನ್ನು ಸ್ಥಾಪಿಸಿ ಕಾರ್ಯೋನ್ಮುಖವಾಗಿಸುವುದು. ಸಿಐಐಎಲ್ ನಿರ್ದೇಶಕರು ಯೋಜನೆಯ ಸಮನ್ವಯ ಮಾಡುವ ನೋಡಲ್(ಸಮನ್ವಯ) ಅಧಿಕಾರಿಯಾಗಿರುತ್ತಾರೆ. NTMನ ಯೋಜನಾ ನಿರ್ದೇಶಕರು ರಾಅಮಿ ಯೋಜನಾ ಸಲಹಾ ಸಮಿತಿಯ ಸದಸ್ಯ-ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು (NTM-PAC ಎಂದು ಕರೆಯಲ್ಪಡುತ್ತದೆ.)

ಯೋಜನಾ ಸಲಹಾ ಸಮಿತಿ (NTM-PAC)
NTM-PACನ ರಚನೆಯು ಈ ಕೆಳಕಂಡಂತೆ ಇರುತ್ತದೆ:
ನಿರ್ದೇಶಕರು, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಅಧ್ಯಕ್ಷರು
ಜಂಟಿ ಕಾರ್ಯದರ್ಶಿಗಳು (ಭಾಷೆಗಳು) ಇವರಿಂದ ನಾಮ ನಿರ್ದೇಶಿತ ಅಥವ ನಿರ್ದೇಶಕರು (ಭಾಷೆಗಳು), ಉನ್ನತ ಶಿಕ್ಷಣ ಇಲಾಖೆ ಮಾ ಸಂ ಸಚಿವಾಲಯ, ಭಾರತ ಸರ್ಕಾರ ಸದಸ್ಯರು
ಜಂಟಿ ಕಾರ್ಯದರ್ಶಿಗಳು (ಎಫ್‌ಎ) ಅಥವಾ ಐಎಫ್ಡಿ (ಹೆಚ್‌ಆರ್‌ಡಿ) ಇವರು ನಾಮ ನಿರ್ದೇಶಿತರು ಸದಸ್ಯರು
ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳ ಆಯೋಗ ನವ ದೆಹಲಿ ಅಧ್ಯಕ್ಷರು ಸದಸ್ಯರು
ಅನುವಾದವನ್ನು ಬೋಧಿಸುವ ಸದಸ್ಯರು
ವಿವಿಧ ವಿಶ್ವ ವಿದ್ಯಾಲಯಗಳ ಇಬ್ಬರು ಪ್ರತಿನಿಧಿಗಳು ಸದಸ್ಯರು
ವಿವಿಧ ರಾಜ್ಯಗಳ ಭಾಷೆ ಮತ್ತು ಅನುವಾದಗಳ ನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳು/ಅಧ್ಯಯನ ಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು (ಸರತಿಯಂತೆ) ಸದಸ್ಯರು
ಭಾಷಾ ವಿಶ್ವ ವಿದ್ಯಾನಿಲಯದ ಉಪ-ಕುಲಪತಿಗಳು (ಸರತಿಯ ಮೇಲೆ) ಸದಸ್ಯರು
ಪುಸ್ತಕಗಳ ಮಾರಾಟಗಾರರು ಮತ್ತು ಪ್ರಕಾಶಕರುಗಳಿಂದ ಮೂವರು ಸದಸ್ಯರು
ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳು ಸದಸ್ಯರು
ನಿರ್ದೇಶಕರು, ರಾಷ್ಟ್ರೀಯ ಪುಸ್ತಕ ಪ್ರಾಧಿಕಾರ. ಸದಸ್ಯರು
ವಿವಿಧ ಐಐಟಿ/ಎನ್ ಐಟಿ/ಅನುವಾದಗಳಿಗೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಕೈಗಾರಿಕಾ ಸಂಸ್ಥೆಗಳ ಅಥವಾ ಅನುವಾದ ಸಾದನ/ತಂತ್ರಜ್ಞಾನಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಇಬ್ಬರು (ಸರತಿಯಂತೆ) ಸದಸ್ಯರು
ಯೋಜನಾ ನಿರ್ದೇಶಕರು ರಾಷ್ತ್ರೀಯ ಅನುವಾದ ಮಿಷನ್ ಅಥವ ಅವರ ಗೈರುಹಾಜರಿಯಲ್ಲಿ, ಅಕಾಡೆಮಿಕ್ ಕಾರ್ಯದರ್ಶಿ, ಸಿಐಐಎಲ್. ಸದಸ್ಯ-ಕಾರ್ಯದರ್ಶಿ

ರಾಷ್ಟ್ರೀಯ ಅನುವಾದ ಮಿಷನ್ ಸಂಘದ ಸದಸ್ಯತ್ವ:
NTM ನ ಸದಸ್ಯತ್ವವು ಸಾಮಾನ್ಯವಾಗಿ ಅನುವಾದದಲ್ಲಿ ತೊಡಗಿಸಿಕೊಂಡಿರುವ ಎಲ್ಲ ವೃತ್ತಿಪರರು, ಹವ್ಯಾಸಿ ಅನುವಾದಕರು, ಅನುವಾದದಲ್ಲಿ ಆಸಕ್ತ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಮುಕ್ತವಾಗಿದೆ. NTM ನ ಸದಸ್ಯರಾಗಲು ವಿವರಗಳನ್ನು ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ.

ಯೋಜನಾ ನಿರ್ದೇಶಕರು
NTMನ ಯೋಜನಾ ನಿರ್ದೇಶಕರನ್ನು ಜಂಟಿ ಕಾರ್ಯದರ್ಶಿಗಳು (ಭಾಷೆಗಳು) ಇವರ ಅಧ್ಯಕ್ಷತೆ, ನಿರ್ದೇಶಕರು ಸಿಐಐಎಲ್ ಸದಸ್ಯ ಕಾರ್ಯದರ್ಶಿಗಳಾಗಿಯೂ, ಕಾರ್ಯದರ್ಶಿಗಳು (ಎಚ್‌ಇ) ರವರು ಹೊರಗಿನಿಂದ ನಾಮ ನಿರ್ದೇಶಿಸುವ ಒಬ್ಬರು ಹಾಗೂ NTM-PAC ಮೂವರು ಸದಸ್ಯರನ್ನೊಳಗೊಂಡಂತೆ ರಚಿತಗೊಳ್ಳುವ ಸಮಿತಿಯು ನೇಮಕ ಮಾಡುತ್ತದೆ. ಯೋಜನಾ ನಿರ್ದೇಶಕರಾಗಿ ನೇಮಕಗೊಳ್ಳಲು ಇರಲೇ ಬೇಕಾದ ಮತ್ತು ಅಪೇಕ್ಷಿತ ಅರ್ಹತೆಗಳು ಈ ಕೆಳಕಂಡಂತೆ ಇವೆ:

(i) NTM ನ ನಿರ್ದೇಶಕರ ಅವಧಿಯು ಐದು ವರ್ಷಗಳದ್ದಾಗಿರುತ್ತದೆ.
(ii) NTM ನ ನಿರ್ದೇಶಕರ ವಯಸ್ಸು 60ವರ್ಷದೊಳಗಿರುವುದು ಅಪೇಕ್ಷಣೀಯ.
(iii) ನಾಮ ನಿರ್ದೇಶಿತ ಪರಿಣಿತರು ಯಾವುದೇ ಭಾಷೆಯ ಅನುವಾದದಲ್ಲಿ/ಸಾಹಿತ್ಯದಲ್ಲಿ/ಭಾಷೆಯಲ್ಲಿ (ಕಂಪಾರೆಟೀವ್ ಸಾಹಿತ್ಯವನ್ನೊಳಗೊಂಡಂತೆ) ಸ್ನಾತಕೋತ್ತರ ಡಾಕ್ಟೋರಲ್ ಡಿಗ್ರಿ ಪಡೆದಿರುವುದು ಭಾಷಾ ಶಾಸ್ತ್ರ ಮತ್ತು ಅಥವಾ ಅನುವಾದ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರಬೇಕು.
(iv) ಕನಿಷ್ಟ 15 ವರ್ಷಗಳ ಕಾಲ ಬೋಧನೆ/ಸಂಶೋಧನೆಯ ಅನುಭವ
(v) ಅನುವಾದ ಅಧ್ಯಯನದ/ನಿಘಂಟು ಶಾಸ್ತ್ರದಲ್ಲಿ ಪ್ರಕಟಣಾ ಅನುಭವ
(vi) ಅನುವಾದ ಕಾರ್ಯದ ವಾಸ್ತವಿಕ ಪ್ರಕಟಣೆಗಳ ಬಗ್ಗೆ ಸಾಕ್ಯಗಳು

NTM ನ ಯೋಜನಾ ನಿರ್ದೇಶಕರು ಸಿಐಐಎಲ್ ನ ನಿರ್ದೇಶಕರಿಗೆ ವರದಿ ಮಾಡುವರು ನಂತರ ಅವರು ಮಿಷನ್ ನ ನೋಡಲ್ ಅಧಿಕಾರಿಯಾಗಿ ಯೋಜನೆಗೆ ಸಂಬಂಧಿಸಿದಂತೆ ಒಡಂಬಡಿಕೆಗಳು, ಒಪ್ಪಂದಗಳು, ಸಹಯೋಗಗಳು ಅಗತ್ಯ ಬುನಾದಿ ಕಾರ್ಯಗಳು ಇತ್ಯಾದಿಗಳಿಗೆ ಸಹಿ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ ಮತ್ತು ಅಗತ್ಯ ಪತ್ರ ವ್ಯವಹಾರ ಮಾಡುವ ಜವಾಬ್ದಾರಿಯನ್ನು ಯೋಜನಾ ನಿರ್ದೇಶಕರು ಹೊಂದಿರುತ್ತಾರೆ. NTM ನ ಯೋಜನಾ ನಿರ್ದೇಶಕರ ಕರ್ತವ್ಯಗಳು ಹಾಗೂ ಜವಾಬ್ದಾರಿಗಳು ಈ ಕೆಳಕಂಡಂತೆ ಇದ್ದು ಅವರು:


(a) ಸಂಸ್ಥೆಯು ವಹಿಸುವ ಎಲ್ಲ ದಾಖಲೆಗಳ ಮತ್ತು ಪ್ರಕಟಣೆಗಳ ಹಾಗೂ ಇನ್ನಿತರ ಸ್ವತ್ತುಗಳ ಸುಪರ್ದು ಹೊಂದಿರುತ್ತಾರೆ.
(b) ಸಂಸ್ಥೆಯ ಪ್ರಾಧಿಕಾರದ ಮೇರೆಗೆ ಅಧಿಕೃತ ಪತ್ರ ವ್ಯವಹಾರ ನಡೆಸುವುದು,
(c) NTM-PAC ಹಾಗೂ ಕಾರ್ಯಕಾರಿ ಗುಂಪಿನ ಮತ್ತು ಇನ್ನಿತರ ಹಲವು ಸಮಿತಿಗಳ ಸಭೆಯನ್ನು ಪಿಎಸಿ ಅಧ್ಯಕ್ಷರ ಸೂಚನೆ ಮೇರೆಗೆ ಕರೆಯುವುದು
(d) ಆ ಸಮಿತಿಗಳ ಸಭಾ ನಡಾವಳಿಗಳನ್ನು ಕಾಯ್ದಿರಿಸುವುದು
(e) NTMನ ಲೆಕ್ಕ- ಪತ್ರಗಳ ನಿರ್ವಹಣೆ
(f) NTM- PAC ದತ್ತ ಅಧಿಕಾರ ವ್ಯಾಪ್ತಿಯೊಳಗೆ ಯಾವ ಕಾರ್ಯ ಯೋಜನೆಗೆ ಮಂಜೂರಾಗಿ ಹಣ ಬಿಡುಗಡೆಯಾಗುವುದೋ ಆ ಹಣವನ್ನು ಅದೇ ಉದ್ದೇಶಗಳಿಗೆ ವ್ಯಯ ಮಾಡುವ ಜವಾಬ್ದಾರಿ
(g) ಪ್ರತೀ ವರ್ಷದ ಹಣಕಾಸು ವರ್ಷದ ಆರಂಭದಲ್ಲಿ ಮಿಷನ್ ಗೆ ಅಗತ್ಯವಾದ ಆಯವ್ಯ ಸಿದ್ದಪಡಿಸುವುದು ಮತ್ತು ಸಿಐಐಎಲ್ ನ ನಿರ್ದೇಶಕರ ಮೂಲಕ ಇಲಾಖೆಗೆ ಅನುಮೋದನೆಗಾಗಿ ಕಳುಹಿಸುವುದು;
(h) ಆಡಳಿತ ಮಂಡಳಿಯು ನೀಡಿದ ಅಧಿಕಾರ ವ್ಯಾಪ್ತಿಯೊಳಗೆ ಆಡಳಿತ ಮತ್ತು ಹಣಕಾಸು ಅಧಿಕಾರ ಚಲಾಯಿಸುವುದು;
(i) ಈ ಮೇಲೆ ತಿಳಿಸಿದ ಎಲ್ಲವನ್ನೂ ಹೊರತು ಪಡಿಸಿ ಬಾರತ ಸರ್ಕಾರವು ಒಬ್ಬ ಯೋಜನಾ ನಿರ್ದೇಶಕರ ಆಯ್ಕೆಯಾದ ಮೆಲೆ ಯಾವುದೇ ಹಂತದಲ್ಲಿ ದುರ್ವರ್ತನೆ ಕಾರಣಕ್ಕಾಗಿ ಅವರನ್ನು ಬರ್ಕಾಸ್ತುಗೊಳಿಸಬಹುದು.

ಸಿಬ್ಬಂದಿ ಬೆಂಬಲ
NTMಗಾಗಿ ಯಾವುದೇ ಖಾಯಂ ಸಿಬ್ಬಂದಿಯ ನೇಮಕ ಮಾಡುವುದಿಲ್ಲ. ಸಿಬ್ಬಂದಿ ಅಗತ್ಯವನ್ನು ಅಗತ್ಯನುಸಾರ ಅಲ್ಪಕಾಲೀನ ಒಪ್ಪಂದದ ಮೇರೆಗೆ ಮಾಡಲಾಗುವುದು. ಗರಿಷ್ಟ ಪ್ರಮಾಣದಲ್ಲಿ ಸಿಬ್ಬಂದಿ/ಸೇವೆ ಅಗತ್ಯಗಳನ್ನು ಹೊರಗುತ್ತಿಗೆ ಮೇಲೆ ಮಾಡಲಾಗುವುದು. ಆದಾಗ್ಯೂ 65ರಷ್ಟು ಪ್ರಮಾಣದಲ್ಲಿ ಮೂಲ ಸಿಬ್ಬಂದಿಯಿದ್ದು ಅದರ 1/3 ಭಾಗ ದೆಹಲಿ ಕಛೇರಿಯಲ್ಲಿ ಉಳಿದವರು ಮೈಸೂರಿನಲ್ಲಿ ಕಾರ್ಯನಿರ್ವಹಿಸುವರು. ಇದಲ್ಲದೇ ವಿವಿಧ ಭಾಷೆಗಳ ಪರಿಣಿತಿ ಹೊಂದಿರುವರನ್ನು ನಿರ್ಧಿಷ್ಟ ಕಾರ್ಯಗಳ ಸಲಹೆಗಾರರಾಗಿರುವರು.

NTMನ ಮೂಲ 65ಸಿಬ್ಬಂದಿಯ ಸಿಬ್ಬಂದಿ ತಾತ್ಕಾಲಿಕ ವಿವರ ಈ ರೀತಿ ಇದೆ

ಕ್ರ ಸಂಖ್ಯೆ ಶೀರ್ಷಿಕೆ
1. ಮಾನವ ಸಂಪನ್ಮೂಲಗಳು( ಒಟ್ಟು 65)
ಯೋಜನಾ ನಿರ್ದೇಶಕರು-1 @ ರೂ 40,000+
ಉಪ ನಿರ್ದೇಶಕರು/ಪ್ರಾದ್ಯಾಪಕರು (4)ವಿಜ್ಞಾನ, ತಂತ್ರಜ್ಞಾನ ಮಾನವೀಯ ಶಾಸ್ತ್ರ,ಸಮಾಜ ಶಾಸ್ತ್ರ ಕ್ಕೆ ಒಬ್ಬರಂತೆ ತಲಾ@ ರೂ 35,000-38,000
ಸಂಶೋದನಾ ಅಧಿಕಾರಿಗಳು/ರೀಡರ್ಸ್ (12) ಉತ್ತರ ಭಾರತ, ದಕ್ಷಿಣ ಭಾರತ, ಪೂರ್ವ ಭಾರತ ಮತ್ತು ಪಶ್ಚಿಮ ಭಾರತ @29,000-32,000
ಕಿರಿಯ ಸಂಶೋಧನಾ ಅಧಿಕಾರಿಗಳು/ಹಿರಿಯ ಬೋಧಕರು ಮತ್ತು ಬೋಧಕರುಗಳು (12) ನಾಲ್ಕು ವಲಯಗಳಿಗೆ ಹಾಗೂ ಪೂರ್ವ ಈಶಾನ್ಯ ಪ್ರಾಂತ್ಯಕ್ಕೆ @ ರೂ20,000-26,000
ಸಂಶೋಧನಾ ಸಹಾಯಕರು (5) @ ರೂ15,500-18,00
ಹಿರಿಯ ಸಂಪಾದಕರು/ ವೆಬ್-ಸಂಪಾದಕರು, ಸಮನ್ವಯಕ್ಕಾಗಿ (5) ಪ್ರತಿ ವಲಯಕ್ಕೆ @24,000-26,
ಉಪ ಸಂಪಾದಕರು- ಮುದ್ರಣ ಮತ್ತು ವೆಬ್ (5) @ 20,000-22,000
ಆಡಳಿತಾಧಿಕಾರಿಗಳು (ಲೆಕ್ಕಪತ್ರ) 1 @ ರೂ 22,000
ಕಛೇರಿ ಅಧೀಕ್ಷಕರು (2)
ಹಿರಿಯ ಯೋಜನಾ ತಾಂತ್ರಿಕರು (4) @ ರೂ 24,000-26,000
ಕಿರಿಯ ಯೋಜನಾ ತಾಂತ್ರಿಕರು (10) @ ರೂ 20,000
ಡೇಟಾ ಎಂಟ್ರಿ ಆಪರೇಟರ್ಸ್ (2) ಆಂಗ್ಲ ಭಾಷೆ ಮತ್ತು ಇತರೆ ಭಾರತೀಯ ಭಾಷೆಗಳು
ಅಂ ಕಛೇರಿ ಸಿಬ್ಬಂದಿ-ಲೆಕ್ಕ ಪತ್ರ (2)

> 11 ನೇ ಯೋಜನೆಯ ಅಂದಾಜು ಆಯವ್ಯಯ: ರೂ 4,26,53.012
 
ಕಾರ್ಯ ಸ್ಥಾನ
EFC ತೀರ್ಮಾನದಂತೆ ಮಿಷನ್ ಎಲ್ಲ ಕೆಲಸ ಕಾರ್ಯಗಳು ಒಂದೇ ಸೂರಿನಡಿಯಲ್ಲಿ ಎಲ್ಲ ಘಟಕಗಳು ಕಾರ್ಯನಿರ್ವಹಹಿಸುವ ಹಾಗೂ ಖಾಯಂ ಕಟ್ಟಡದ ನಿರ್ಮಾಣವಿಲ್ಲದೆ ಆರಂಭಿಸಬೇಕೆಂಬುದು ಆಶಯವಾಗಿದೆ. ಅದರಂತೆ ಮೈಸೂರಿನ ಸಿಐಐಎಲ್ ಆವರಣದಲ್ಲಿ ಅಗತ್ಯವಾದ ಪರಿಣಿತಿ, ಎಲ್ಲ ಉಪಕರಣಗಳು ಮತ್ತು ಸಹಯೋಗ ಇರುವ ಪ್ರಯುಕ್ತ ಇದೇ ಕಟ್ಟಡದಲ್ಲಿಯೇ ಆರಂಭಿಸುವ ತೀರ್ಮಾನವಾಗಿದೆ. ಆರಂಭಿಕ ಉದ್ದೇಶಗಳಿಗೆ ಮೈಸೂರಿನಲ್ಲಯೇ ಒಂದು ಕಛೇರಿಯನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ಆದಾಗ್ಯೂ, NTMಗೆ ಸಂಬಂಧಿಸಿದ ಇಲಾಖೆಗಳು, ಸಂಘ ಸಂಸ್ಥೆಗಳು, ಉದ್ಯಮ ಗೃಹಗಳು, ತಂತ್ರಾಂಶ ಸಂಸ್ಥೆಗಳು, ಪರಿಣಿತರು, ಪ್ರಕಾಶಕರು, ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು, ಭಾರತೀಯ ಹಾಗೂ ವಿದೇಶೀ ಭಾಷಾ ಪರಿಣಿತರೊಡನೆ ನಿರಂತರ ಸಂಪರ್ಕವಿರಿಸಿಕೊಳ್ಳಬೇಕಾಗಿದ್ದು ಹಲವಾರು ಸಮಿತಿಗಳಲ್ಲಿ ಹೆಚ್ಚಿನ ಸಲಹೆಗಾರರನ್ನು ಸಮಿತಿಗಳಿಗೆ ಸೇರಿಸಿಕೊಳ್ಳುವ ಅಗತ್ಯವಿರುವುದರಿಂದ, ಅತಿ ಹೆಚ್ಚಿನ ಪ್ರಕಾಶಕ ಸಂಸ್ಥೆಗಳು, ಪರಿಣಿತರು, ತಂತ್ರಜಾನ ಸಂಸ್ಥೆಗಳು ಅಲ್ಲದೇ ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳು ಇರುವ ಪ್ರಯುಕ್ತ ಸಮನ್ವಯದ ಜವಾಬ್ದಾರಿಯನ್ನು NTMನ ದೆಹಲಿಯ ಕಛೇರಿಯು ನಿರ್ವಹಿಸುವುದು. ಸದ್ಯಕ್ಕೆ ಈ ಸಮನ್ವಯ ಕಛೇರಿಯು ದೆಹಲಿಯ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುವುದು.

ಅವಧಿ
ಸಾಹಿತ್ಯದ ಹಲವು ಭಾಷೆಗಳ ನಡುವೆ ಅನುವಾದದ ಹಾಗೂ ಜ್ಞಾನ-ಪಠ್ಯದ ಅಗತ್ಯ ಎಲ್ಲಿವರೆಗೆ ಅಗತ್ಯವೆನಿಸುವುದೋ ಅಲ್ಲಿಯವರೆಗೆ NTM ಚಟುವಟಿಕೆಗಳು ಮುಂದುವರೆಯುವವು. ಹೊಸ ಜ್ಞಾನದ ಉದಯ ನಿರಂತರವಾಗಿ ವಿಸ್ತಾರಗೊಳ್ಳುವ ಮತ್ತು ಪಠ್ಯಗಳು ನಿರಂತರವಾಗಿ ಸೃಷ್ಟಿಯಾಗುತ್ತಲೇ ಇರುವ ಕಾರಣ ಸದ್ಯದಲ್ಲಿ NTM ಚಟುವಟಿಕೆ ಸ್ಥಗಿತಗೊಳ್ಳುವ ಸೂಚನೆಗಳು ಸನಿಹದಲ್ಲಿ ಕಂಡು ಬರುವುದಿಲ್ಲ.