|
ಕಾನೂನಿನ ಚೌಕಟ್ಟು
ರಾಷ್ಟ್ರೀಯ ಅನುವಾದ ಮಿಷನ್ (NTM) ಸರ್ಕಾರದ ಕಾರ್ಯ ನಿರ್ವಹಣಾ ಆದೇಶದ ಮೇಲೆ ರಚಿಸಲಿದ್ದು, ಇದರ ಸಮನ್ವಯ
ಸಂಸ್ಥೆಯು ಭಾರತೀಯ ಭಾಷಾ ಸಂಸ್ಥಾನವಾಗಿದ್ದು ಇದರ ಪ್ರಧಾನ ಕಛೇರಿ ಮೈಸೂರಿನಲ್ಲಿದ್ದು ಅದರ ಸಂಯೋಜನಾ
ಕಛೇರಿ ದೆಹಲಿಯಲ್ಲಿದೆ. ಇದು ನಿಯಮಿತ ಕಾರ್ಯಗಳ ಕುರಿತು ತನ್ನದೆ ಆದ ಸಹಜವಾದ ಅನುಕೂಲಗಳನ್ನು ಹೊಂದಿರುತ್ತದೆ.
ಆದಾಗ್ಯೂ, ಪ್ರಸಕ್ತ ಯೋಜನಾ ಅವಧಿಯ ನಂತರ ಪರಿವೀಕ್ಷಣೆಗೆ ತೆರೆದಿದ್ದು - ಕಾರ್ಯಕ್ರಮವು ನೆಲೆ ನಿಂತ
ಮೇಲೆ ನಂತರ ಅದು CIIL ಇಂದ ಬೇರ್ಪಟ್ಟು ಸಂಘಗಳ ನೊಂದಣಿ ಕಾಯಿದೆ (1860 ಕೇಂದ್ರೀಯ ಕಾಯಿದೆ) ಅಡಿಯಲ್ಲಿ
ಸ್ವಾಯತ್ತ ಸಂಸ್ಥೆಯಾಗಿ ಸಂಸ್ಥಾಪನಗೊಂಡ ನಂತರ ಪರಿಶೀಲನೆಗೆ ತೆರೆದಿದೆ.
|
NTMಅನ್ನು ಕನಿಷ್ಟ ಮೂಲಭೂತ ಸೌಕರ್ಯಗಳೊಂದಿಗೆ ಸಣ್ಣ ಹಾಗೂ ವಿಸ್ತರಿಸಬಹುದಾದ ನಿರ್ವಹಣಾ ರೂಪುರೇಶಗಳೊಂದಿಗೆ
ಯೋಜಿಸಲಾಗಿದೆ. NTMನ ಆಡಳಿತಾತ್ಮಕ ವಿನ್ಯಾಸವು ಈ ಕೆಳಕಂಡ ಮೂರು ಆರಂಭಿಕ ಪದರಗಳನ್ನು ಹೊಂದಿರುತ್ತದೆ.
|
|
»
|
ಸಲಹ ಸಮಿತಿ1 - ಗೌರವಾನ್ವಿತ ಮಾನವ ಸಂಪನ್ಮೂಲ ಸಚಿವರ ನೇತ್ರತ್ವದೊಂದಿಗೆ ಒಳಗೊಂಡ ಸಚಿವರು.
|
|
»
|
ಆಡಳಿತ ಮಂಡಳಿ 2 (GB) ಮಾನವ ಸಂಪನ್ಮೂಲ ಇಲಾಖೆಯು ನಾಮ ನಿರ್ದೇಶಿತ ಹಿರಿಯ ಸಂಶೋಧಕರ ನೇತೃತ್ವದಲ್ಲಿ
ಸಾಧಿಸಿರುವ ಯೋಜನೆಗಳ ಪ್ರಗತಿಯನ್ನು ಕಾಲ ಕಾಲಕ್ಕೆ ನಿರೂಪಣೆ ಮಾಡಲು ಸಮಾವೇಶಗೊಳ್ಳುವುದು.
|
|
»
|
ಸಾಮಾನ್ಯ ಸಮಿತಿ3 (GC) 101 ಸದಸ್ಯರನ್ನೊಳಗೊಂಡಿದ್ದು ಸಾಂಸ್ತಿಕ ಹಾಗೂ ವ್ಯಕ್ತಿಗತವಾಗಿ ಆಯ್ಕೆಗೊಂಡ
ಸದಸ್ಯರಾಗಿದ್ದು NTMನ ಭಾಗವಾಗಿರುತ್ತಾರೆ.
|
ಆದಾಗ್ಯೂ ಸಲಹೆ ಮತ್ತು ನಿರೂಪಣೆ ಮಾಡುವ ಪ್ರಾತಿನಿದ್ಯ ಹೊಂದಿರುವ ಯೋಜನಾ ಸಲಹಾ ಮಂಡಳಿ (NTM PAC)ಯು
25 ಸದಸ್ಯರನ್ನು ಒಳಗೊಂಡಿರಬೇಕೆಂದು ಇದೀಗ ತೀರ್ಮಾನಿಸಲಾಗಿದೆ. NTM PACಯ ಮುಖ್ಯಸ್ಥರಾಗಿ ಹಾಗೂ CIILನ
ಅಕಾಡೆಮಿ ಕಾರ್ಯದರ್ಶಿಗಳು NTM PACಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಬೇಕು. ಈ ಸಮಿತಿಗೆ
ಹೆಚ್ಚುವರಿಯಾಗಿ ಮೂವರು ಅಧಿಕೃತ ಸದಸ್ಯ ಕಾರ್ಯದರ್ಶಿ - ಜಂಟಿ ಕಾರ್ಯದರ್ಶಿಗಳು (ಭಾಷೆ)ಯವರಿಂದ ನಾಮ
ನಿರ್ದೇಶಿತ ಅಥವಾ ನಿರ್ದೇಶಕರು (ಭಾಷೆಗಳು), ಉನ್ನತ ಶಿಕ್ಷಣ ಇಲಾಖೆ, ಭಾರತ ಸರ್ಕಾರದ ಮಾನವ ಸಂಪನ್ಮೂಲ
ಇಲಾಖೆಯ ಜಂಟಿ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರರಿಂದ ನಾಮ ನಿರ್ದೇಶಿತ ಸದಸ್ಯರು ಅಥವಾ IFD
(ಮಾನವ ಸಂಪನ್ಮೂಲ ಅಭಿವೃದ್ಧಿ) ಹಾಗೂ ವೈಜ್ಞಾನಿಕ ಮತ್ತು ತಾಂತ್ರಿಕ ಪದಕೋಶಗಳ ಆಯೋಗದ ಅಧ್ಯಕ್ಷರು
(CSTT) ನವದೆಹಲಿ.
|
ಈ ಐದು ಸದಸ್ಯರಲ್ಲದೆ ಉಳಿದ 20 ಸದಸ್ಯರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸರತಿಯ ಮೇರೆಗೆ
ನಾಮ ನಿರ್ದೇಶನದ ಮುಖಾಂತರ ಆಯ್ಕೆ ಮಾಡಲಾಗುವುದು. a. ಅನುವಾದವನ್ನು ಬೋಧಿಸುವ ವಿವಿಧ ವಿಶ್ವವಿದ್ಯಾನಿಲಯಗಳಿಂದ
ಇಬ್ಬರು ಪ್ರತಿನಿಧಿಗಳು. b. ಭಾಷೆಗಳು ಮತ್ತು ಅನುವಾದವನ್ನು ನಿರ್ವಹಿಸುವ ಸಂಸ್ಥೆಗಳು ಮತ್ತು ಅಕಾಡೆಮಿಗಳನ್ನು
ಪ್ರತಿನಿಧಿಸುವ ರಾಜ್ಯಗಳಿಂದ ಸರತಿಯ ಮೇಲೆ ಇಬ್ಬರು ಪ್ರತಿನಿಧಿಗಳು. c. ಭಾಷಾ ವಿಶ್ವವಿದ್ಯಾಲಯದ ಉಪ
ಕುಲಪತಿಗಳಲ್ಲಿ ಒಬ್ಬರು. d. ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಪರವಾಗಿ 3 ಸದಸ್ಯರು e. ಸಾಹಿತ್ಯ
ಅಕಾಡೆಮಿಯ ಕಾರ್ಯದರ್ಶಿ f. ರಾಷ್ಟ್ರೀಯ ಪುಸ್ತಕ ವಿಶ್ವಸ್ತ ಸಂಸ್ಥೆಯ ನಿರ್ದೆಶಕರು (NBT) g. ಅನುವಾದ
ಸಾಧನಗಳು ಮತ್ತು ತಂತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರುವ ಕೈಗಾರಿಕಾ
ಸಂಸ್ಥೆಗಳು / NIT/IIT ಗಳ ಇಬ್ಬರು ಪ್ರತಿನಿಧಿಗಳು. h. ಆಂಗ್ಲ ಮತ್ತು ವಿವಿಧ ಭಾರತೀಯ ಭಾಷೆಯ 5
ಅನುವಾದ ಪರಿಣಿತರು. i. ಅನ್ಯ ವಿಷಯಗಳಿಂದ ಇಬ್ಬರು ಪ್ರತಿನಿಧಿಗಳು. j. ಅನುವಾದ ಚಟುವಟಿಕೆಗಳಲ್ಲಿ
ಆಸಕ್ತಿ ಇರುವ ಖಾಸಗಿ ವ್ಯಕ್ತಿಗಳು ಅಥವಾ ಉದ್ಯೊಗ ಸಂಸ್ಥೆಗಳು / ಖಾಸಗಿ ಸಂಸ್ಥೆಗಳ ಪರವಾಗಿ ಒಬ್ಬ
ಸದಸ್ಯ.
|
ಈ ಮೇಲಿನವಲ್ಲದೆ ರಾಷ್ಟ್ರೀಯ ಅನುವಾದ ಮಿಷನ್ನಲ್ಲಿ ಹಲವಾರು ಸಲಹಾ ಉಪಸಮಿತಿಗಳು ಅಥವಾ ಆಯಾ ಕ್ಷೇತ್ರದ
ಪರಿಣಿತರು ಮತ್ತು ವ್ಯಕ್ತಿಗತ ಸಲಹಾಗಾರರನ್ನೊಳಗೊಂಡಂತೆ (ಅಂದರೆ ವೈಜ್ಞಾನಿಕ ಅನುವಾದ, ತಾಂತ್ರಿಕ
ಅನುವಾದ, ದಿಢೀರ್ ಅನುವಾದ/ಅರ್ಥೈಸುವಿಕೆ ಅಥವಾ ಯಂತ್ರಾನುವಾದ ಇತ್ಯಾದಿ) ಕಾರ್ಯಕಾರಿ ಗುಂಪುಗಳನ್ನು
ಒಳಗೊಂಡಿರುತ್ತದೆ.
|
1. ಮಾನವ ಸಂಪನ್ಮೂಲ ಸಚಿವಾಲಯ ಅನುಮೋದಿತ 25 ಸದಸ್ಯರನ್ನು NTMನ ಸಲಹ ಸಮಿತಿಯಲ್ಲಿ ಇರಬೇಕೆಂಬ ಉದ್ದೇಶವಾಗಿದ್ದು,
NTMನ ತಿರ್ಮಾನ ಕೈಗೊಳ್ಳುವ ಉನ್ನತ ಸಮಿತಿಯಾಗಿರುತ್ತದೆ.
2. ಆರಂಭದಲ್ಲಿ ಆಡಳಿತ ಮಂಡಳಿಯ (GB) ಸದಸ್ಯರನ್ನು ಅನುವಾದವನ್ನು ಬೋಧಿಸುವ ವಿವಿಧ ವಿದ್ಯಾನಿಲಯಗಳ
ಇಲಾಖೆಗಳಿಂದ, ಬೃಹತ್ ಪ್ರಮಾಣದಲ್ಲಿ ಅನುವಾದಗಳನ್ನು ಕೈಗೊಂಡಿರುವ ವಿವಿಧ ರಾಜ್ಯಗಳ ಸಂಸ್ಥೆಗಳಿಂದ,
IIT ಮತ್ತು NITಗಳಲ್ಲಿ ಅನುವಾದ ಸಾಧನಗಳನ್ನು ಅಭಿವೃದ್ಧಿಗೊಳಿಸಲು ತೊಡಗಿಕೊಂಡಿರುವವರು, ಕೈಗಾರಿಕೆಗಳು
ಇತ್ಯಾದಿ ಮತ್ತು ಅನುವಾದದಲ್ಲಿ ಆಸಕ್ತ ಅಧಿಕಾರಿಗಳಿಂದ ಆಯ್ಕೆ ಮಾಡಿಕೊಳ್ಳುವುದೆಂದು ಯೋಚಿಸಲಾಗಿತ್ತು.
ಆಡಳಿತ ಮಂಡಳಿಯಲ್ಲಿ ಅನುವಾದವನ್ನು ಬೋಧಿಸುವ ವಿಶ್ವವಿದ್ಯಾನಿಲಯಗಳ ಇಲಾಖೆಯಿಂದ ಇಬ್ಬರು ಸದಸ್ಯರನ್ನು
ವಿವಿಧ ರಾಜ್ಯ ಸರ್ಕಾರಗಳ ಇಬ್ಬರು ಪ್ರತಿನಿಧಿಗಳ (ಸರತಿಯಮೇಲೆ) - ಯಾವ ರಾಜ್ಯಗಳ ಸಂಸ್ಥೆ ∕ ಅಕಾಡೆಮಿಗಳು
ಭಾಷೆ ಮತ್ತು ಅನುವಾದವನ್ನು ನಿರ್ವಹಿಸುತ್ತಿದೆಯೋ, ಆ ಪ್ರತಿನಿಧಿಗಳು, ಪ್ರಕಾಶಕರು ಮತ್ತು ಪುಸ್ತಕ
ಮಾರಾಟಗಾರರ ಸಮುಚ್ಚಯಗಳನ್ನು ಕಳುಹಿಸುವ ಮೂರು ಸದಸ್ಯರು, IIT ಮತ್ತು NITಗಳಿಂದ ಇಬ್ಬರು ಅನುವಾದ
ಸಾಧನೆಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಮತ್ತು ತಾಂತ್ರಿಕ ಸಂಸ್ಧಗಳ ಇಬ್ಬರು, ಅನುವಾದ ಆಸಕ್ತರಾದ
ಅಧಿಕೃತ ಅಂದರೆ NERT, NBT ಮತ್ತು ಸಾಹಿತ್ಯ ಅಕಾಡೆಮಿಗಳನ್ನು ಪ್ರತಿನಿಧಿಸುವ ಇಬ್ಬರು ಸದಸ್ಯರನ್ನು
ಒಳಗೊಂಡಿರುತ್ತದೆ. ರಾಷ್ಟ್ರೀಯ ಜ್ಞಾನ ಆಯೋಗದ ಸಲಹೆಯಂತೆ ಸಾರ್ವಜನಿಕ - ಖಾಸಗಿ ಸಹಯೋಗದ ಮಾದರಿಯನ್ನು
ಪ್ರತಿಬಿಂಬಿಸುವಂತೆ ಈ ಮಂಡಳಿಯನ್ನು ರಚಿಸುವ ಆಲೋಚನೆಯಾಗಿದೆ. ಸದಸ್ಯರ ಅವಧಿಯು ಎರಡು ವರ್ಷಗಳದ್ದಾಗಿದ್ದು
ಅಧಿಕಾರಿ ಸದಸ್ಯರ (ಅಂದರೆ ಮಾನವ ಸಂಪನ್ಮೂಲ ಸಚಿವಾಲಯವು ನಾಮ ನಿರ್ದೆಶಿಸುವ ಜಂಟಿ ಕಾರ್ಯಾದರ್ಶಿಗಳು
(ಭಾಷೆ) ಮತ್ತು ಆರ್ಥಿಕ ಸಲಹೆಗಾರರು ಹಾಗೂ CSTTಯ ಅಧ್ಯಕ್ಷರು). ಮಾನವ ಸಂಪನ್ಮೂಲ ಸಚಿವಾಲಯವು ಎರಡು
ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯನ್ನು ಪುನರ್ರಚಿಸುವುದೆಂದು ಆಲೋಚಿಸಲಾಗಿತ್ತು.
3. ಸಾಮಾನ್ಯ ಸಭೆಯು 101 ಸದಸ್ಯರನ್ನು ಹೊಂದಿರಬಹುದೆಂದು ಸಲಹೆಯಾಗಿತ್ತು. 3 ಸ್ತರಗಳ ವಿನ್ಯಾಸದಲ್ಲಿ
ಆಡಳಿತ ಮಂಡಳಿಯ (GB) ಸಾಮಾನ್ಯ ಸಭೆಯಿಂದ ಸಲಹೆಗಳು ಹರಿದು ಬರುವಂತೆ ರಚಿಸುವ ಆಲೋಚನೆಯಾಗಿತ್ತು. ಸಂಘದ
ಸಾಮಾನ್ಯ ಸಭೆಯ (GC) ಸದಸ್ಯತ್ವವು ಅನುವಾದ ಕೈಗಾರಿಕೆಯ ವಿವಿಧ ಅನುವಾದ ಸಂಸ್ಥೆಗಳು ವೃತ್ತಿಗಳ ಲೇಖಕರು,
ವಿವಿಧ ಭಾಷಾ ಜೋಡಿಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ಪುಸ್ತಕ ವಿಶ್ವಸ್ಥ ಸಂಸ್ಥೆಯ ನಿರ್ದೆಶಕರು
/ ಕಾರ್ಯರ್ಶಿಗಳು, ಸಾಹಿತ್ಯ ಅಕಾಡೆಮಿ ICSSR ICPR ಇತ್ಯಾದಿ, ಅನುವಾದ ವಿಷಯಗಳ ಬೋಧನೆಯನ್ನು ಅಳವಡಿಸಿರುವ
ವಿವಿಧ ವಿಶ್ವವಿದ್ಯಾನಿಲಯಗಳ ಪ್ರಲೇಖ ಅಕಾಡಮಿಗಳು, ಅಥವ ಅನುವಾದ ಅಧ್ಯಯನದಲ್ಲಿ MA/M.Phil/ಸ್ನಾತಕೋತ್ತರ
ಡಿಪ್ಲೊಮ, ಇತ್ಯಾದಿ, ಹಾಗು ಅನುವಾದ ಜ್ಞಾನಕ್ಷೇತ್ರದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ (ಉದಾ - ಕಾನೂನು,
ವೈದೈಕೀಯ, ಭೌತಶಾಸ್ತ್ರ, ಜೀವವಿಜ್ಞಾನ, ಸಮಾಜಜ್ಞಾನ, ಸಾಹಿತ್ಯ - ಕಲೆ ಇತ್ಯಾದಿ); ಮಾಹಿತಿ ಮತ್ತು
ಪ್ರಚಾರ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ವಿದೇಶಾಂಗ ವ್ಯವಹಾರ ಇತ್ಯಾದಿಗಳೂ NTMನ ಸಾಮಾನ್ಯ
ಸಭೆಯ ಸದಸ್ಯರಾಗಬಹುದು.
|
|
|