ಪ್ರಸಕ್ತ ಚಟುವಟಿಕೆಗಳು

ಮುಂಚೂಣಿ ಯೋಜನೆ: ‘ಅನುಕೃತಿ’
ಯೋಜನೆ ಆಯೋಗವು ಭಾರತೀಯ ಭಾಷಾ ಸಂಸ್ಥಾನಕ್ಕೆ ಅನುಕೃತಿ ಎನ್ನುವ ಶೀರ್ಷಿಕೆಯಲ್ಲಿ ಈಗಾಗಲೇ ಅನುವಾದ ಕ್ಷೇತ್ರದ ಮಹತ್ತರ ಯೋಜನೆಯೊಂದನ್ನು ಮಂಜೂರು ಮಾಡಿದೆ. ಭಾಷಾನುವಾದದ ಈ ವೆಬ್-ಸೈಟ್ “ಅನುಕೃತಿ” ಭಾರತ ಅನುವಾದವು, ಭಾರತದ ಎಲ್ಲ ಭಾಷೆಗಳ ಅನುವಾದ ಮಾಹಿತಿಯನ್ನು ಒದಗಿಸುವ ಕ್ಷೇತ್ರವಾಗಿರುವಂತೆ (site) ರೂಪಿಸಲಾಗಿದೆ. ಈ ವೆಬ್-ಸೈಟ್ಅನ್ನು ರೂಪಿಸಲು ಬಹಳ ಮುಖ್ಯವಾಗಿ ಭಾರತೀಯ ಭಾಷೆಗಳ ಅಭಿವೃದ್ದಿಗಾಗಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (MHRD), ಸಾಹಿತ್ಯ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ಪುಸ್ತಕ ಪ್ರಾಧಿಕಾರವನ್ನು ತೊಡಗಿಸಿಕೊಳ್ಳಲಾಗಿದೆ.

10ನೇ ಯೋಜನಾವಧಿಯಲ್ಲಿ ಈ ಯೋಜನೆಗಾಗಿ ರೂ. 59.64 ಲಕ್ಷಗಳನ್ನು ತೊಡಗಿಸಲಾಯಿತು. ಅನುಕೃತಿ ಯೋಜನೆಯಡಿಯಲ್ಲಿ ಆಲೋಚಿಸಿದಂತೆ ಕೆಳಕಂಡವುಗಳನ್ನು ಸಾಧಿಸಲಾಗಿದೆ.

  » ಅನುವಾದ ಪ್ರೋತ್ಸಾಹಕ್ಕೆ ಮಾಹಿತಿಜಾಲ (website) www.anukriti.net ಅನ್ನು ಆರಂಭಿಸಲಾಗಿದೆ ಹಾಗೂ ಇಲ್ಲಿಯವರೆಗೂ ನಿರಂತರವಾಗಿ ದಾಖಲೀಕರಣ ಹಾಗು ಇತ್ತೀಚಿಗಿನ ಮಾಹಿತಿಯೊಂದಿಗೆ ದಾಖಲೀಕರಿಸಲಾಗಿದೆ.
  » ಆನ್ ಲೈನ್ ಅನುವಾದ ಪತ್ರಿಕೆ - Translation Todayಯನ್ನು ಮೂರು ವರ್ಷಗಳಿಂದ ಹೊರತರಲಾಗಿದೆ.
  » ಅನುವಾದಕರ ರಾಷ್ಟ್ರೀಯ ವಹಿ ಮತ್ತು ಅನುವಾದ ಮಾಹಿತಿ ಜಾಲವನ್ನು ನಿರಂತರವಾಗಿ ಉನ್ನತೀಕರಿಸಲಾಗಿದೆ/ ನವೀಕರಿಸಲಾಗಿದೆ.
  » ಆಂಗ್ಲ-ಕನ್ನಡ ಭಾಷೆಯ ಯಂತ್ರಾಧಾರಿತ ಅನುವಾದ ಸೌಕರ್ಯದ ಬಗ್ಗೆ ಕೆಲವು ಆರಂಭಿಕ ಸಿದ್ದತೆಗಳನ್ನು ಮಾಡಲಾಗಿದೆ.
  » ಪ್ರಮುಖ ಪ್ರಕಾಶಕರಿಂದ ಪಡೆದ ಅನುವಾದ ಪ್ರಕಟಣೆಗಳ ವಿಷಯ ಸೂಚಿಯನ್ನು ಮಾಹಿತಿಜಾಲದಲ್ಲಿ (website) ಅಳವಡಿಸಲಾಗುತ್ತಿದೆ.
  » ದೇಶ ವಿದೇಶಗಳ ವಿವಿಧ ಅನುವಾದ ಕೋರ್ಸುಗಳ/ಅಧ್ಯಯನ ವಿವರಗಳು ಮಾಹಿತಿಜಾಲದಲ್ಲಿ ಲಭ್ಯವಿದೆ.
  » ವಿವಿಧ ವೃತ್ತಿಪರ ಅನುವಾದದ ಸಂಸ್ಥೆಗಳ ಸಂಬಂಧಗಳನ್ನು ಬೆಳೆಸಲಾಗಿದೆ.
  » ವಿವಿಧ ಅನುವಾದ ತಂತ್ರಾಂಶಗಳನ್ನು ಖರೀದಿಸುವ ಮೂಲಕ online ಅನುವಾದಕ್ಕೆ ಪ್ರೋತ್ಸಾಹಿಸಲು ಅಗತ್ಯವಾದ online ಕೊಂಡೆಗಳನ್ನು (link) ಸೂಚಿಸಲಾಗಿದೆ.
  » ಅನುವಾದ ಅಧ್ಯಯನಕ್ಕೆ ಸಂಬಂಧಿಸಿದ ಪದಕೋಶ ಮತ್ತು ಶಬ್ದಕೋಶ ಕಾರ್ಯವು ಮುಕ್ತಾಯ ಹಂತದಲ್ಲಿದೆ.

ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋದನೆ ಮತ್ತು ತರಬೇತಿ ಪರಿಷತ್ತು (NCERT) ಮಾಡಿರುವ ಕೆಲಸ ಕಾರ್ಯಗಳು
NCERTಯು 12ನೇ ತರಗತಿಯವರೆಗಿನ ಎಲ್ಲಾ ಪಠ್ಯಪುಸ್ತಕಗಳನ್ನು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದಿಸಿದೆ. VIIIನೇ ಅನುಚ್ಛೇದದಲ್ಲಿ ನಮೂದಿಸಿರುವ 22 ಭಾಷೆಗಳಿಗೆ ರಾಷ್ಟ್ರೀಯ / ಪಠ್ಯ ಚೌಕಟ್ಟನ್ನು ಮೊದಲ ಬಾರಿಗೆ ಅನುವಾದಿಸಿದೆ. ರಾಷ್ಟ್ರೀಯ ಅನುವಾದ ಮಿಷನ್ ಈ ಎಲ್ಲವನ್ನು ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಿಸಲು ಅಗತ್ಯ ನೆರವು ಒದಗಿಸಬಹುದು.

ಭಾರತದಲ್ಲಿ ಅನುವಾದಗಳ ಪ್ರಕಟಣೆಗಳು
1954ರಲ್ಲಿ ಸ್ಥಾಪಿತವಾದ ಸಾಹಿತ್ಯ ಅಕಾಡೆಮಿ ಮತ್ತು 1957ರಲ್ಲಿ ಸ್ಥಾಪಿತ ರಾಷ್ಟ್ರೀಯ ಪುಸ್ತಕ ಸಂಸ್ಥೆಗಳು ತಮ್ಮ ಘನ ಉದ್ದೇಶದ ಈಡೇರಿಕೆಗಾಗಿ ಭಾರತೀಯ ಭಾಷೆ, ಪ್ರಾಂತ್ಯ ಮತ್ತು ಸಮುದಾಯಗಳ ನಡುವೆ ಸೇತುವೆಯಂತೆ ಅನುವಾದಗಳ ಪ್ರಕಟಣೆಯನ್ನು ಕೈಗೊಂಡವು.

ಸಾಹಿತ್ಯ ಅಕಾಡೆಮಿಯ ಪ್ರಾಂತೀಯ ಭಾಷೆಗಳ ಮತ್ತು ಆಂಗ್ಲಭಾಷೆ ಅನುವಾದಗಳನ್ನು ಇತರೆ ಪ್ರಾಂತೀಯ ಭಾಷೆಗಳಿಗೂ ಮತ್ತು ಇತರೆ ಭಾಷೆಗಳಿಂದ ಆಂಗ್ಲ ಭಾಷೆಗೂ ಆರಂಭದಿಂದಲೂ ಅನುವಾದಗಳ ಪ್ರಕಟಣೆಯಲ್ಲಿ ತೊಡಗಿದೆ. ಇಲ್ಲಿಯವರೆಗೂ 24 ಭಾಷೆಗಳ 7000 ಶೀರ್ಷಿಕೆಗಳನ್ನು ಹೊರ ತಂದಿದೆ. ಅಕಾಡೆಮಿಯು ಮಾನ್ಯತೆ ನೀಡಿದ ಭಾಷೆಗಳ ಮೂಲ ಅನುವಾದಗಳನ್ನು ಮಾಡಲಾಗಿದೆ; ಆದರೆ ವಿಶೇಷ ಗಿರಿಜನ ಸಾಹಿತ್ಯ ಯೋಜನೆ ಅಡಿಯಲ್ಲಿ ಮೊದಲು ಬರೋಡಾದಲ್ಲೂ ಈಗ ಶಿಲಾಂಗ್ನಲ್ಲೂ ಗಿರಿಜನ ಭಾಷೆಗಳ ಅನುವಾದಗಳನ್ನು ಮತ್ತು ಗಡ್ವಾಲಿ, ಭಿಲಿ, ಕುಯಿ, ಗ್ಯಾರೋ, ಗ್ಯಾಮಿಟ್, ಮಿಜೋ, ಲೆಪ್ಚ, ಪಹಾರಿ, ಮುಂಡಾರಿ, ಗೊಂಡಿ ಇತ್ಯಾದಿ ಲಿಪಿಗಳ ಅನುವಾದಗಳನ್ನು ಆರಂಭಿಸಿದೆ. ಅಂತರ ಭಾಷಾನುವಾದ ಕ್ಷೇತ್ರವೇ ಇದರ ಮುಖ್ಯ ಕೊಡುಗೆಯಾಗಿದೆ.

ರಾಷ್ಟ್ರೀಯ ಪುಸ್ತಕ ಸಂಸ್ಥೆಯು ‘ಆದಾನ್-ಪ್ರದಾನ್’ ಮಾಲಿಕೆಯಲ್ಲಿ VIIIನೇ ಅನುಚ್ಛೇದದ ವಿವಿಧ ಭಾಷೆಗಳ ಸಮಕಾಲೀನ ಶಾಸ್ತ್ರೀಯ ವಿಷಯಗಳನ್ನು ಆಯ್ದು ಅವುಗಳನ್ನು ಆಂಗ್ಲ ಭಾಷೆ ಮತ್ತು ಇತರೆ ಭಾರತೀಯ ಭಾಷೆಗಳಿಗೆ ಅನುವಾದಿಸುತ್ತದೆ. ಆದಾಗ್ಯೂ ಈ ಸಂಸ್ಥೆಯ ಚಟುವಟಿಕೆಗಳು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಂಡಿಲ್ಲ. ನಾಗರೀಕ ಹಕ್ಕುಗಳು, ಆರೋಗ್ಯ, ಪರಿಸರ, ಕಲೆ, ಶಿಲ್ಪಕಲೆ, ರಾಜ್ಯಶಾಸ್ತ್ರ, ಇತಿಹಾಸ ಇತ್ಯಾದಿ ಜ್ಞಾನಾಧಾರಿತ ಪುಸ್ತಕಗಳನ್ನು ಪ್ರಕಟಿಸುವುದಲ್ಲದೆ ವಿವಿಧ ಜೀವನ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳ ಆತ್ಮ ಚರಿತ್ರೆ ಮಾಲಿಕೆಗಳನ್ನು ಕೂಡ ಪ್ರಕಟಿಸುತ್ತದೆ.

80ರ ದಶಕದಲ್ಲಿ ಭಾರತದ ಮುಕ್ತ ಆರ್ಥಿಕತೆಯಿಂದಾಗಿ ಅಂತರಾಷ್ಟ್ರೀಯ ಪ್ರಕಟಣಾ ಸಂಸ್ಥೆಗಳು ಕೂಡ ಭಾರತದಲ್ಲಿ ಪ್ರಕಟಣೆ ಕಾರ್ಯ ಕೈಗೊಳ್ಳಲು ಆಕರ್ಷಿಸಿತ್ತಾದರೂ ಭಾರತದಲ್ಲಿ ವಿದ್ಯಾ ಕ್ಷೇತ್ರದ ಪ್ರಕಟಣೆಯಲ್ಲಿ ಆಂಗ್ಲ ಭಾಷೆಯ ಪ್ರಕಟಣೆಯೇ ಶೇ. 80 ರಷ್ಟು ಇದೆ. ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ವೃತ್ತಿಪರತೆ, ಸಂಪಾದಕೀಯ ಗುಣಮಟ್ಟ ಉನ್ನತಗೊಳ್ಳುತ್ತಿದ್ದು ಮಾರುಕಟ್ಟೆಗಳತ್ತ ಹೆಚ್ಚು ಕೇಂದ್ರೀಕರಿಸಲಾಗುತ್ತಿದೆ. ಪ್ರಕಾಶಕರಾದ ಪಿಯರ್ಸನ್ ಎಜುಕೇಷನ್, ರಾಂಡಂಹೌಸ್, ಸೇಜ್, ಮ್ಯಾಗ್ರೂಹಿಲ್ ಇತ್ಯಾದಿ, ವಿಶಾಲಾರ್ಥದಲ್ಲಿ ಶೈಕ್ಷಣಿಕ ಕ್ಷೇತ್ರದ ಕಡೆ ಕೇಂದ್ರೀಕರಿಸಿದ್ದರೆ, ಓರಿಯಂಟ್ ಲಾಂಗ್ಮನ್ (ದಿಶಾ ಮಾಲಿಕೆ), ಮ್ಯಾಕ್ ಮಿಲನ್ (ಆಧುನಿಕ ಆಂಗ್ಲ ಭಾಷಾ ಅನುವಾದ ಕಾದಂಬರಿ ಮಾಲಿಕೆಗಳು), ಪೆಂಗ್ವಿನ್ ಇಂಡಿಯಾ, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ರೂಪ ಮತ್ತು ಕಂ, ಹಾರ್ಪರ್ ಕೊಲಿನ್ಸ್ ಇತ್ಯಾದಿ ಪ್ರಕಾಶಕ ಸಂಸ್ಥೆಗಳು ಅನುವಾದಕ್ಕೆ ಹೆಚ್ಚು ಮಹತ್ವ ನೀಡಿವೆ. ಕಥೆಗಳ ಅನುವಾದಕ್ಕಾಗಿಯೇ ಮೀಸಲಾದ ಹಲವಾರು ಪ್ರಕಾಶಕ ಸಂಸ್ಥೆಗಳು ಹೊರಹೊಮ್ಮಿರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಸಣ್ಣ ಪ್ರಕಾಶಕ ಸಂಸ್ಥೆಗಳಾದ ಸ್ತ್ರೀ ಜುಬಾನ್, ರೊಲಿ, ವುಮನ್ ಅನ್ ಲಿಮಿಟೆಡ್ ಇತ್ಯಾದಿ ಕೂಡ ಅನುವಾದಗಳ ಕಡೆ ಆಸಕ್ತಿ ತೋರುತ್ತಿದೆ.

ಆಂಗ್ಲ ಭಾಷೆಗೆ ಸಾಹಿತ್ಯ ಅನುವಾದ ಚಿತ್ರಣವು ಉಜ್ವಲವಾಗಿದ್ದಂತೆ ಕಂಡರೂ ಈ ಕೆಳಕಂಡವುಗಳಲ್ಲಿ ಅಷ್ಟೇನು ಹರ್ಷದಾಯಕವಾಗಿಲ್ಲ. 1. ಇತರೆ ವಿಶಯಗಳ ಪುಸ್ತಕಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವುದು 2. ಆಂಗ್ಲ ಮತ್ತು ಇತರೆ ಭಾರತೀಯ ಭಾಷೆಗಳಿಂದ ಇತರೆ ಭಾರತೀಯ ಭಾಷೆಗಳಿಗೆ ಅನುವಾದ 3. ಭಾರತೀಯ ಭಾಷೆಗಳ ನಡುವಿನ ಅನುವಾದನು ಅಸಮಾನವಾಗಿದ್ದು, ಉದಾಹರಣೆಗೆ ಮಲಯಾಳಂ ಭಾಷೆಯಲ್ಲಿ 260 ಬಂಗಾಳಿ ಭಾಷೆಯ ಪುಸ್ತಕಗಳು ಲಭ್ಯವಿದ್ದರೆ, ಬಂಗಾಲಿ ಭಾಷೆಗೆ ಕೇವಲ 12 ಮಲಯಾಳಂ ಪುಸ್ತಕಗಳು ಅನುವಾದಿಸಲ್ಪಟ್ಟಿದೆ. ಈ ಅಸಮಾನತೆಗೆ ಇರಬಹುದಾದ ಒಂದು ಕಾರಣವೇನೆಂದರೆ ಭಾಷೆಗಳು ತೆರೆದುಕೊಳ್ಳುವ ಅಥವಾ ಬಚ್ಚಿಟ್ಟುಕೊಳ್ಳುವ ಪ್ರವೃತ್ತಿಯಲ್ಲದೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಕರ ಕೊರತೆ ಮುಖ್ಯವಾಗಿದೆ. ಆಂಗ್ಲ ಭಾಷೆಯಿಂದ ನವ್ಯ ಭಾರತೀಯ ಭಾಷೆಗಳಿಗೆ ಮತ್ತು ಹಿಂದಿ ಭಾಷೆಗೆ ಅನುವಾದಿಸುವ ಅನುವಾದ ಪರಿಣಿತರು ಇರುವರಾದರೂ, ಕೆಲವು ಭಾಷೆಗಳ ಉದಾ: ತಮಿಳು ಮತ್ತು ಮರಾಠಿ, ಮಲಯಾಳಂ ಮತ್ತು ಗುಜರಾತಿ ಅನುವಾದಕರು ಇಲ್ಲವೆಂದೇ ಹೇಳಬಹುದು.

ಅಧ್ಯಯನ ಕೋರ್ಸುಗಳು
ಕೆಲವೇ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಅನುವಾದ ಪಠ್ಯಕ್ರಮದಲ್ಲಿ ಔಪಚಾರಿಕ ಅಧ್ಯಯನಕ್ಕೆ ಅವಕಾಶವಿದೆ. ಪ್ರಸ್ತುತ ಕೆಳಕಂಡ ಪಠ್ಯಕ್ರಮಗಳಲ್ಲಿ ಲಭ್ಯವಿದೆ.
1. ಅಣ್ಣಾಮಲೈ ವಿಶ್ವವಿದ್ಯಾಲಯ:  
  (i) ಅನುವಾದ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ
  (ii) ಅನ್ವಯಿಕ ಭಾಷಾವಿಜ್ಞಾನ ಮತ್ತು ಅನುವಾದದಲ್ಲಿ ಸ್ನಾತಕ ಪದವಿ (ಎಂ.ಎ)
  (iii) ಅನುವಾದ ಅಧ್ಯಯನದಲ್ಲಿ ಸ್ನಾತಕ ಪದವಿ (ಎಂ.ಎ)
  (iv) ಭಾಷಾಧ್ಯಯನದಲ್ಲಿ ಸ್ನಾತಕೋತ್ತರ ಸಂಶೋಧನೆ (ಅನುವಾದ ಒಳಗೊಂಡಿದೆ)
  (v) ಅನುವಾದ ಅಧ್ಯಯನದಲ್ಲಿ ಸ್ನಾತಕ (ಎಂ.ಫಿಲ್)
2. ಅಗ್ರವಿಶ್ವವಿದ್ಯಾಲಯ: ಕೆ.ಎಂ. ಇನ್ಸ್ಟಿಟ್ಯೂಟ್: ಅನುವಾದ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್
3. ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ: ಅನುವಾದದಲ್ಲಿ ಸ್ನಾತಕ ಸಂಶೋಧನೆ (ಎಂ.ಫಿಲ್)
4. ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ: ಅನುವಾದ ಪಠ್ಯಕ್ರಮದಲ್ಲಿ/ವಿಷಯದಲ್ಲಿ ಪ್ರಮಾಣಪತ್ರ (ಸರ್ಟಿಫಿಕೇಟ್)
5. ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯ: ಅನುವಾದದಲ್ಲಿ ಸರ್ಟಿಫಿಕೇಟ್ ಕೋರ್ಸ್
6. ಪುಣೆ ವಿಶ್ವವಿದ್ಯಾಲಯ: ಅನುವಾದ ವಿಷಯದಲ್ಲಿ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್
7. ಹೈದರಾಬಾದ್ ವಿಶ್ವವಿದ್ಯಾಲಯ (ದೂರ ಶಿಕ್ಷಣ ಕೇಂದ್ರ) ಅನುವಾದ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಟಿಎಸ್)
8. ಹೈದರಾಬಾದ್ ವಿಶ್ವವಿದ್ಯಾಲಯ: (ಹಿಂದಿ ವಿಭಾಗ):
  (i) ಅನುವಾದದಲ್ಲಿ ಡಿಪ್ಲೊಮಾ
  (ii) ವೃತ್ತಿಪರ ಅನುವಾದದಲ್ಲಿ ಮುಂದುವರೆದ ಡಿಪ್ಲೊಮಾ
  (iii) ಅನುವಾದ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ
9. ಹೈದರಾಬಾದ್ ವಿಶ್ವವಿದ್ಯಾಲಯ (ಸಿ ಎ ಎಲ್ ಟಿ ಎಸ್): ಅನುವಾದ ಅಧ್ಯಯನದಲ್ಲಿ ಎಂ. ಫಿಲ್ ಮತ್ತು ಪಿ ಹೆಚ್ ಡಿ.
10. ಸೀಫೆಲ್ (CIEFL) (ಈಗ ಟೆಫ್ಲು (TEFLU) ಹೈದರಾಬಾದ್ (ಅನುವಾದ ಅಧ್ಯಯನ ಕೇಂದ್ರ) ಸಿಟಿಎಸ್ (CTS) ಅನುವಾದ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ
11. ಕೇರಳ ವಿಶ್ವವಿದ್ಯಾಲಯ: ಅನುವಾದದಲ್ಲಿ ಸ್ನಾತಕ ಪದವಿ
12. ಮದುರೈ ಕಾಮರಾಜ್ ವಿಶ್ವವಿದ್ಯಾಲಯ: ಅನುವಾದದಲ್ಲಿ ಸ್ನಾತಕ ಪದವಿ
13. ತಮಿಳು ವಿಶ್ವವಿದ್ಯಾಲಯ, ತಂಜಾವೂರು ಅನುವಾದದಲ್ಲಿ ಡಿಪ್ಲೊಮಾ
14. ವಿಶ್ವ-ಭಾರತಿ: ಹಿಂದಿ (ಎಂಎ) ವ್ಯಾವಹಾರಿಕ (ಅನುವಾದ) ಸ್ನಾತಕೋತ್ತರ ಪದವಿ
ಇದಲ್ಲದೆ ಹಲವಾರು ವಿಶ್ವವಿದ್ಯಾಲಯಗಳಲ್ಲಿ (ಉದಾ: ಕೊಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯ, ದಕ್ಷಿಣ ಗುಜರಾತ್ - ಸೂರತ್ನ ವೀರ ನರ್ಮದಾ ವಿಶ್ವವಿದ್ಯಾಲಯ) ತುಲನಾತ್ಮಕ ಸಾಹಿತ್ಯ ವಿಭಾಗಗಳು ಅನುವಾದ ಅಧ್ಯಯನ ಪಠ್ಯಕ್ರಮಗಳನ್ನು/ವಿಷಯಗಳನ್ನು ಬೋಧಿಸುತ್ತಿವೆ. ಕೆಲವು ಖಾಸಗಿ ಸಂಸ್ಥೆಗಳಾದ, ಅನುವಾದ ಅಧ್ಯಯನ ಸಂಸ್ಥೆ ಬೆಂಗಳೂರು ಇಲ್ಲಿ ಅನುವಾದದಲ್ಲಿ ಡಿಪ್ಲೊಮಾ ಅವಕಾಶವಿದೆ. ಇಂತಹ ಹಲವು ಪಠ್ಯಕ್ರಮಗಳ/ವಿಷಯಗಳ ಅಧ್ಯಯನ ಮಾಡಲು ಅವಕಾಶಗಳು ಈಗ ಹೆಚ್ಚಾಗಿದೆ.

ಭಾರತೀಯ ಭಾಷೆಗಳ ಭಾಷಾ ಶಾಸ್ತ್ರೀಯ ದತ್ತಕಗಳ ಒಕ್ಕೂಟ (LDC-IL)
ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಭಾಷಾ ಶಾಸ್ತ್ರೀಯ ನಿಧಿ ಮತ್ತು ಭಾಷೆಯ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಸಹಾಯವಾಗಲು LDC-IL ಒಕ್ಕೂಟವನ್ನು ರಚಿಸಲಾಗಿದೆ. ಭಾಷಾ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾಷಾ ದತ್ತಕಾಂಶ ಸಂಗ್ರಹಗಳು ಪ್ರಮುಖ ಅಂಶಗಳಾಗುತ್ತವೆ. ಹಿಂದಿ ಮತ್ತು ಅನ್ಯ ಭಾಷೆಗಳಲ್ಲಿ ಯಂತ್ರಗಳು ಓದಬಲ್ಲ ಭಾಷೆಗೆ ಸಂಬಂಧಿಸಿದ ವಿಷಯಗಳನ್ನು LDC-IL ಗಮನಹರಿಸುತ್ತಿದೆ. ಭಾಷಾದತ್ತಕಾಂಶಗಳ ಅನೋಟೇಶನ್ ಪ್ರಮಾಣಗಳ ಪರಿಷ್ಕರಣೆ, ಸಂಗ್ರಹ ಇತ್ಯಾದಿಗಳು ಭಾಷಾಶಾಸ್ತ್ರ, ಸಂಖ್ಯಾಶಾಸ್ತ್ರ, ಇಂಜಿನಿಯರಿಂಗ್ ಇತ್ಯಾದಿ ಹಲವಾರು ಕ್ಷೇತ್ರಗಳನ್ನು ಆಧರಿಸಿದೆ. LDC-IL ಒಕ್ಕೂಟದ ಜೊತೆಗೆ ಕೆಳಕಂಡವು ಕೂಡ
  » ಎಲ್ಲಾ ಭಾರತೀಯ ಭಾಷೆಗಳನ್ನು ಪಠ್ಯ ಭಾಷಣ ಮತ್ತು ನಿಘಂಟು ಸಂಗ್ರಹದ ಭಾಷಾಶಾಸ್ತ್ರದ ಸಂಪನ್ಮೂಲ ಪ್ರಾತಿನಿದ್ಯ ಸ್ಥಾಪನೆ.
  » ವಿವಿಧ ಸಂಸ್ಥೆಗಳು ಈ ರೀತಿಯ ದತ್ತಕಾಂಶಗಳ್ನು ರಚಿಸಲು ಪ್ರೇರಣೆ ನೀಡುವುದು
  » ವಿವಿಧ ಸಂಶೋಧನೆ ಮತ್ತು ಭಾಷಾಭಿವೃದ್ಧಿಗೆ ಸಂಬಂಧಿಸಿದಂತೆ ಭಾಷಾಶಾಸ್ತ್ರದ ನಿಧಿ ಸಂಗ್ರಹ ಮತ್ತು ದತ್ತಕಾಂಶಗಳ ಗುಣಮಟ್ಟ ನಿರ್ಧರಿಸುವಿಕೆ.
  » ದತ್ತಾಂಶಗಳ ಸಂಗ್ರಹ ಮತ್ತು ನಿರ್ವಹಣೆಗೆ ಅಗತ್ಯವಾದ ಬೆಂಬಲ ಮತ್ತು ಸಾಧನೆಗಳ ಅಭಿವೃದ್ಧಿ
  » ತಾಂತ್ರಿಕ ಮತ್ತು ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಯಗಾರ, ವಿಚಾರ-ಸಂಕಿರಣಗಳು ಇತ್ಯಾದಿಗಳ ಮೂಲಕ ಪ್ರೇರಣೆ
  » LDC-ILಗೆ ಸಂಬಂಧಿಸಿದ ಸಂಪನ್ಮೂಲಗಳ ಬಳಕೆಗೆ ಹೆಬ್ಬಾಗಿಲಂತೆ LDC-IL ಸಂಪರ್ಕ ಜಾಲ ರಚಿಸಿ ನಿರ್ವಹಿಸುವುದು
  » ಜನಸಮೂಹ ಬಳಸಲು ಸೂಕ್ತವಾದ ಭಾಷಾ ತಂತ್ರಜ್ಞಾನವನ್ನು ರೂಪಿಸುವುದು ಮತ್ತು ಸಹಕಾರ
  » ಜನಸಮೂಹ, ಶೈಕ್ಷಣಿಕ ಸಂಸ್ಥೆಗಳು ಮತ್ತು ವ್ಯಕ್ತಿಗತ ಸಂಶೋಧಕರ ನಡುವೆ ಅಗತ್ಯವಾದ ಬಾಂಧವ್ಯ/ಕೊಂಡಿಗಳ ಒದಗಿಸುವಿಕೆ
 
ಈ ಯಂತ್ರೀಕೃತ ಅನುವಾದದ ಎಲ್ಲ ಚಟುವಟಿಕೆಗಳು ರಾಷ್ಟ್ರೀಯ ಅನುವಾದ ಮಿಷನ್ನಿಗೆ ಪ್ರತ್ಯಕ್ಷವಾಗಿ ಪ್ರಯೋಜನವಾಗುತ್ತದೆ.

C-DAC ಮತ್ತು TDILಗಳು ಮಾಡಿರುವ ಕಾರ್ಯ
ಯಂತ್ರಾನುವಾದ ಪದ್ದತಿಗಳ ದಕ್ಷತೆ ಬಗ್ಗೆ ಸಂದೇಹಿಸುವವರು ವಿಶ್ವದಾದ್ಯಂತ ಬಳಕೆಯಲ್ಲಿರುವ ಯಂತ್ರಾನುವಾದ ಪದ್ದತಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ಆಶ್ಚರ್ಯ ಚಕಿತರಾಗಬಹುದು. Systran (ಅಲ್ಟಾ ವಿಸ್ಟಾನಲ್ಲಿ ಬಳಸುವ ಹುಡುಕು ಯಂತ್ರ) ಪ್ರಖ್ಯಾತ ಉದಾಹರಣೆಗಳ ಜೊತೆ - METEO (1977ರಿಂದ ಕೆನಡಿಯನ್ ಮೆಟಿಯೋರೊಲಾಜಿಕಲ್ ಕೇಂದ್ರ ಹವಾಮಾನ ವಿಶೇಷಗಳ ಸುಮಾರು 45000 ಪದಗಳನ್ನು ಅನುವಾದಿಸುತ್ತದೆ.) ಭಾರತದಲ್ಲಿ ಸಿ-ಡಾಕ್ ಸಂಸ್ಥೆಯ ಎನ್ ಎಲ್ ಪಿ (ಪ್ರಾಕೃತಿಕ ಭಾಷಾ ಪರಿಷ್ಕರಣೆ) ಬಗ್ಗೆ ಕಾರ್ಯಾರಂಭ ಮಾಡಿದಾಗಿನಿಂದ ಯಂತ್ರಾನುವಾದ (MT) ಕ್ರಾಂತಿಕಾರಿಕ ಹೆಜ್ಜೆ ಎನಿಸುವ ಜೊತೆಗೆ ಹಿಂದಿ, ಸಂಸ್ಕೃತ, ಗುಜರಾತಿ, ಆಂಗ್ಲ ಮತ್ತು ಜರ್ಮನ್ ಭಾಷೆಯಲ್ಲಿ Tag-based Parser ಮೂಲಕ ಪಾರ್ಸ್ ಅಭಿವೃದ್ಧಿ ಮಾಡಿದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ ಸಂಸ್ಥೆಯು (ಕಂಪನಿ) ಇದನ್ನು ವಾಸ್ತವವಾಗಿ ಅನುಷ್ಠಾನಗೊಳಿಸಲು ಮತ್ತು ಇತರೆ ಹಲವು ಸಂಸ್ಥೆಗಳು ಬಳಸಲು ಸಲಹೆ ನೀಡಿತ್ತು. ಯಂತ್ರಾನುವಾದದ ಸಾಮರ್ಥ್ಯ ಅರಿವಿದ್ದ ಭಾರತ ಸರ್ಕಾರದ ಅಧಿಕೃತ ಭಾಷಾ ಇಲಾಖೆ (DOL) ಇಂತಹ ಯೋಜನೆಗಳಿಗೆ ಸಕ್ರಿಯವಾಗಿ ಆರ್ಥಿಕ ಅನುವಾದ ಒದಗಿಸಲು ಆರಂಭಿಸಿದೆ. ಕೇಂದ್ರದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಕೆಳಕಂಡ ಕ್ಷೇತ್ರಗಳಲ್ಲಿ ನಿರ್ದಿಷ್ಟ ಕ್ಷೇತ್ರದ ಅನುವಾದ ಪದ್ಧತಿಗಳನ್ನು ಗುರುತಿಸಿದೆ.

  » ಸರ್ಕಾರದ ಆಡಳಿತಾತ್ಮಕ ಪದ್ದತಿಗಳು ಮತ್ತು ನಮೂನೆಗಳು
  » ಲೋಕಸಭೆ ಪ್ರಶ್ನೋತ್ತರಗಳು, ಔಷಧೀಯ ಮಾಹಿತಿ
  » ಕಾನೂನು ಪದಗಳು ಮತ್ತು ತೀರ್ಪುಗಳು

ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ತಂತ್ರಜ್ಞಾನ (TDIL) ಯೋಜನೆಯನ್ನು ಸಚಿವಾಲಯವು 1990-91ರಲ್ಲಿ ಆರಂಭಿಸಿ ಭಾರತೀಯ ಭಾಷೆಗಳಲ್ಲಿ ಯಂತ್ರಾನುವಾದವನ್ನೊಳಗೊಂಡಂತೆ ಮಾಹಿತಿ ಪರಿಷ್ಕರಣೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುವಾದ ನೆರವು ನೀಡಿದೆ. ಆದಾಗ್ಯೂ 22 ವಿವಿಧ ಅಧಿಕೃತ ಆಡಳಿತ ಭಾಷೆಗಳಿರುವಾಗ ಅನುವಾದವು ಕಠಿಣ ಸವಾಲನ್ನು ಒಡ್ಡುತ್ತದೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳು ಸಂದಿಗ್ದವಾದ ಭಾಷಾಜೋಡಿಗಳಾಗಿದೆ ಮತ್ತು ಸರ್ಕಾರಿ ಕಛೇರಿಗಳ ಬಹುತೇಕ ಪತ್ರವ್ಯವಹಾರದ ಸ್ಥಾನದಲ್ಲಿದ್ದು, ಯಂತ್ರಾನುವಾದಕ್ಕೆ ಪ್ರಧಾನ ಆದ್ಯತೆಯ ಭಾಷಾ ಜೋಡಿಗಳಾಗಿವೆ.

ಅಂತೆಯೇ ಎರಡು ನಿರ್ದಿಷ್ಟವಾದ ಸಂಶೋಧನಾ ಕ್ಷೇತ್ರಗಳನ್ನು ಗುರುತಿಸಲಾಗಿದೆ: ಭಾರತೀಯ ಭಾಷೆಗಳ ನಡುವಿನ ಯಂತ್ರಾನುವಾದ ಪದ್ದತಿ ಮತ್ತು ಇಂಗ್ಲೀಷ್ ನಿಂದ ಹಿಂದಿಗೆ ಯಂತ್ರಾನುವಾದ ಪದ್ಧತಿ. ಪ್ರಸಕ್ತ ದೇಶದಲ್ಲಿ 3 ಸಂಸ್ಥೆಗಳು C-DAC - ಪುಣೆ, NCST ಅಂದರೆ ಇತ್ತೀಚಿಗಿನ C-DAC - ಮುಂಬೈ, IIT - ಹೈದರಾಬಾದ್ ಮತ್ತು IIT - ಕಾನ್ಪುರ ಇಂತಹ ಪರಿಣಾಮಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿ ಅಳವಡಿಸುವಲ್ಲಿ ನೇತೃತ್ವ ವಹಿಸುತ್ತಿವೆ.

ವಿದ್ಯುನ್ಮಾನ ಇಲಾಖೆಯ ಜ್ಞಾನಾಧಾರಿತ - ಗಣಕಯಂತ್ರ ಪದ್ದತಿ ಯೋಜನೆ ಅಡಿಯಲ್ಲಿ ಇಂಗ್ಲೀಷ್, ಹಿಂದಿ, ಗುದರಾತಿಯನ್ನು ಹೇಳುವ “VYAKARTA”ವನ್ನು C-DAC ಅಭಿವೃದ್ಧಿ ಪಡಿಸಿದೆ. ಇದೇ ವಿಧಾನವನ್ನನುಸರಿಸಿ “MANTRA”/ “ಮಂತ್ರ” (ಕಛೇರಿಯ ಅಧಿಕೃತ ಭಾಷೆಗಳ ಪದಗಳನ್ನು ಇಂಗ್ಲೀಷ್ನಿಂದ ಹಿಂದಿಗೆ ಅನುವಾದಿಸುವ ಯಂತ್ರ) ರೂಪಿಸಿದೆ. ಆಡಳಿತ ನೆರವಿಗಾಗಿ ‘ಇಂಗ್ಲೀಷ್ನಿಂದ ಹಿಂದಿಗೆ ಕಂಪ್ಯೂಟರ್ ನೆರವಿನ ಅನುವಾದ ಪದ್ಧತಿ’ ಯೋಜನೆಗಾಗಿ ಅನುದಾನ ಒದಗಿಸಿರುವ ಅಧಿಕೃತ ಕಛೇರಿ ಭಾಷಾ ಇಲಾಖೆಗೂ ಕೂಡ ಇದರ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಸಿಬ್ಬಂದಿ ಆಡಳಿತಕ್ಕಾಗಿ ಕಂಪ್ಯೂಟರ್ ನೆರವಿನ ಅನುವಾದ ಪದ್ದತಿಯನ್ನು ರೂಪಿಸಿ ಅಭಿವೃದ್ಧಿಪಡಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಪದ್ದತಿಯು ಈಗ ನಿಗದಿತ ಗುಣದ ವಾಕ್ಯ ಪರಿಷ್ಕರಣೆ (word processing) ಮತ್ತು DTP ಪ್ಯಾಕೇಜುಗಳ ಅಂಶಗಳನ್ನು ಬಳಸಿ ಕಾಗದ ಪತ್ರಗಳು, ಸುತ್ತೋಲೆಗಳು ಮತ್ತು ನೇಮಕಾತಿ ಪತ್ರ, ವರ್ಗಾವಣೆ ಪತ್ರಗಳನ್ನು ಅನುವಾದಿಸುವ ಸಾಮರ್ಥ್ಯ ಹೊಂದಿದೆ. ಇಂಗ್ಲೀಷ್ನಿಂದ ಹಿಂದಿಗೆ ಅನುವಾದಿಸುವ ಈ ಮೇಲೆ ಹೇಳಿದ ನಿರ್ದಿಷ್ಟ ಕ್ಷೇತ್ರ ಯಶಸ್ವಿಯಾಗಿ ಪೂರ್ಣಗೊಂಡ ಮೇಲೆ, ಈ ತಂತ್ರಗಳನ್ನು ಬಹುಭಾಷಾ ಅನುವಾದಕ್ಕೆ ಅಭಿವೃದ್ಧಿಪಡಿಸಿ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವಂತೆ C-DAC ಗಮನಹರಿಸುತ್ತಿದೆ. ಈ ಸಾಮರ್ಥ್ಯದಿಂದಾಗಿ ಯಾವುದೇ ಭಾಷಾ ಜೋಡಿಗಳ ಅನುವಾದ ಸಾಧ್ಯವಾಗುತ್ತದೆ.

ಯಂತ್ರಚಾಲಿತ ಅನುವಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮತ್ತೊಂದು ಸಂಸ್ಥೆ ಎಂದರೆ ಮುಂಬೈಯಲ್ಲಿ ನೆಲಸಿರುವ NCSTಯಾಗಿದ್ದು ಅದನ್ನು C-DAC ಮುಂಬೈ ಎಂದು ಪುನಃರ್ನಾಮಕರಣ ಮಾಡಲಾಗಿದೆ. ಭಾರತದಲ್ಲಿ ಯಂತ್ರಚಾಲಿತ ಅನುವಾದ ಆರಂಭಿಸಿದ ಮೊದಲ ಸಂಸ್ಥೆ NCST 80ರ ದಶಕದಲ್ಲಿ PTIನ ನಿರ್ದಿಷ್ಟ ಸುದ್ಧಿಸಾರಗಳನ್ನು ಸಾರಾಂಶಗಳ ಆಧಾರದ ಮೇಲೆ ‘ತೆರೆಯ ಮಾತು’ (Screen talk)ಗಳನ್ನಾಗಿಸುವ ಮಾದರಿಗಳನ್ನು ನಾವು ರಚಿಸಿದೆವು. ನಂತರ ಆಂಗ್ಲಭಾಷೆಯಿಂದ ಮೊದಲು ಹಿಂದಿಗೂ, ನಂತರ ಇತರೆ ಭಾರತೀಯ ಭಾಷೆಗಳಿಗೂ ಸಾಮಾನ್ಯ ಉದ್ದೇಶಗಳಿಗಾಗಿ ಅನುವಾದಿಸುವ ಮಾ-ಟ್ರಾ (MaTra) ಎಂಬ ನೂತನ ತಂತ್ರಾಂಶವನ್ನು ರೂಪಿಸಲಾಗಿದೆ. ಮಾ-ಟ್ರಾವನ್ನು ಎರಡು ವಿಧಗಳಲ್ಲಿ ಬಳಸಬಹುದು. ಸ್ವಯಂಚಾಲಿತ ವಿಧಾನದಲ್ಲಿ, ಪದ್ದತಿಯು ಅತ್ಯುತ್ತಮ ಅನುವಾದಕ್ಕೆ ಅವಕಾಶ ಕಲ್ಪಿಸುವುದಲ್ಲದೆ ಬಳಕೆದಾರರು ನಂತರ ಸಂಪಾದಿಸಬಹುದು. ಕೈಚಾಲಿತ ಪದ್ದತಿಯಲ್ಲಿ ಬಳಕೆದಾರರು ಸಹಜ ಜ್ಞಾನವನ್ನಾಧರಿಸಿದ GUI ಬಳಸಿ ಸರಿಯಾದ ಅನುವಾದ ಮಾಡಲು ಮಾರ್ಗದರ್ಶನ ಮಾಡಬಹುದು.

IIT ಮುಂಬೈ ಮತ್ತು IIT ಕಾನ್ಪುರ್ ಸಂಸ್ಥೆಗಳು ‘ಅನುಸಾರಕ’, ‘ಆಂಗ್ಲಭಾರತಿ’, ‘ಅನುಭಾರತಿ’ಯಂತಹ ಯೋಜನೆಗಳ ಮೂಲಕ ಕೆಳಸ್ತರದಲ್ಲಿ ಬಳಕೆಯೋಗ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ಪ್ರಸ್ತುತ IIT ಮುಂಬೈ ಈ ಸಮಸ್ಯೆಗೊಂದು ನವೀನ ಮಾದರಿಯ ‘ವಿಶ್ವಭಾಷಾಜಾಲ’ (UNL) ಮೂಲಕ ಪರಿಹಾರ ರೂಪಿಸುತ್ತಿದೆ. ಯಂತ್ರಚಾಲಿತ ಅನುವಾದದಲ್ಲಿ ‘ಆಂಗ್ಲಭಾರತಿ’ಯೊಂದು ಕ್ರಾಂತಿಕಾರಕ ಪದ್ದತಿ ಎಂದು ಕರೆಯಲಾಗುತ್ತಿದೆ. ಇದು ಸಾರ್ವಜನಿಕ ಆರೋಗ್ಯ ಆಂದೋಲನದ ನಿರ್ದಿಷ್ಟ ಕ್ಷೇತ್ರದಲ್ಲಿ ಆಂಗ್ಲಭಾಷೆಯಿಂದ ಹಿಂದಿಗೆ ಯಂತ್ರಚಾಲಿತ ಅನುವಾದ ಪದ್ದತಿಯಾಗಿದೆ

ಪ್ರಸಕ್ತ ಎಲ್ಲ ಯೋಜನೆಗಳು ತಮ್ಮೆಲ್ಲ ಯತ್ನಗಳನ್ನು ಇಂಗ್ಲೀಷ್ನಿಂದ ಹಿಂದಿಗೆ ಯಂತ್ರಾನುವಾದ ಮಾಡುವ ಕಡೆ ಕೇಂದ್ರೀಕರಿಸಿದ್ದು ಈ ಸೌಲಭ್ಯವನ್ನು ಅನ್ಯ ಭಾಷೆಗಳಿಗೆ ವಿಸ್ತರಿಸುವುದು ಒಂದು ಸವಾಲಾಗಿದೆ. IIT ಕಾನ್ಪುರ್ ಆರಂಭಿಸಿದ ‘ಅನುಸಾರಕ’ವನ್ನು ನಂತರ IIIT ಹೈದರಾಬಾದ್ ಮತ್ತು CALTS (ಕಾಲ್ಟ್ಸ್) ಹೈದರಾಬಾದ್ ವಿಶ್ವವಿದ್ಯಾಲಯಗಳು ಒಟ್ಟಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಿಸಬಲ್ಲ ಹೊಸ ಆವಿಷ್ಕಾರವನ್ನು ಹುಟ್ಟು ಹಾಕುವ ಗುರಿಯನ್ನು ಹೊಂದಿ ಆರಂಭಿಸಿದವು. ಅನುಸಾರಕ ತಂತ್ರಾಂಶವು ಒಂದು ಭಾಷೆಯ ಪಠ್ಯವನ್ನು ಮತ್ತೊಂದು ಭಾಷೆಗೆ ಅನುವಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು ನೀಡುವ ಅನುವಾದವು ಓದುಗನಿಗೆ ಅರ್ಥವಾಗುವುದಾದರೂ ವ್ಯಾಕರಣಾತ್ಮವಾಗಿರುವುದಿಲ್ಲ. ಉದಾ: ಬಂಗಾಳಿ-ಹಿಂದಿ ಅನುಸಾರಕವು ಬಂಗಾಳಿ ಪಠ್ಯವನ್ನು ಹಿಂದಿ ಭಾಷೆಗೆ ಅನುವಾದಿಸಿ ನೀಡುವ ಪಠ್ಯವನ್ನು ಓದುವ ಅರ್ಥಮಾಡಿಕೊಳ್ಳುವನಾದರೂ ಅದು ವ್ಯಾಕರಣ ದೃಷ್ಟಿಯಿಂದ ಯಥಾವತ್ತಾಗಿರುವುದಿಲ್ಲ. ಅದರಂತೆ, ಒಂದು ಭಾಷೆಯ ಜ್ಞಾನವಿಲ್ಲದವರೂ ಕೂಡ ವೆಬ್ಸೈಟ್ - ಅನುಸಾರಕ ಮೂಲಕ ಪಠ್ಯವನ್ನು ಓದಬಲ್ಲರು. ಕನ್ನಡ, ತೆಲುಗು, ಬಂಗಾಳಿ, ಮರಾಠಿ ಮತ್ತು ಪಂಜಾಬಿ ಭಾಷೆಗಳಿಗೂ ಅನುಸಾರಕ ಲಭ್ಯವಿದೆ. IIIT ಹೈದರಾಬಾದ್ ಇದೀಗ ಅನುವಾದ ಬೆಂಬಲಕ್ಕಾಗಿ ಮತ್ತೊಂದು ಪದ್ದತಿ “SHAKTI”ಯನ್ನು ಹೊರತಂದಿದೆ.

ಸಂಶೋಧಕರು ಮತ್ತು ವಿಶ್ವವಿದ್ಯಾನಿಲಯಗಳು/IITಗಳು ಮತ್ತು ತಂತ್ರಾಂಶ ಕೈಗಾರಿಕೆಗಳು ಬಹಳಷ್ಟು ಕ್ಷೇತ್ರದ ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕಾಗಿದ್ದು ಇದಕ್ಕೆ ರಾಷ್ಟ್ರೀಯ ಅನುವಾದ ಮಿಷನ್ ಬೆಂಬಲ ಅಗತ್ಯವಿದೆ.