ಯೋಜನಾ ಕಾರ್ಯನೀತಿ

ಇಲ್ಲಿ ಕಾರ್ಯನೀತಿಯಾಗಿ ಉಲ್ಲೇಖಿಸಬೇಕಾಗಿರುವ ಮುಖ್ಯಕಾರ್ಯಗಳು ಮತ್ತು ಘಟನೆಗಳ ಪರಿಭಾಷೆಯಲ್ಲಿ ಈ ಇಡೀ ಮಿಷನನ್ನು ಅನೇಕ ಭಾಗಗಳಾಗಿ ಮಾಡಬಹುದು:
  » ಭಾರತದ ಎಲ್ಲಾ ಅನುಸೂಚಿತ ಭಾಷೆಗಳಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಪದಗಳನ್ನು ಹೊಸದಾಗಿ ಸೃಷ್ಟಿಸುವುದರಲ್ಲಿ CSTTಗೆ ಸಹಾಯ ಮತ್ತು ಸಲಹೆಗಳನ್ನು ಒದಗಿಸುವುದು. ಈ ಗುರಿಯ ಸಾಧನೆಗಾಗಿ, ಕಮಿಷನ್ ಫಾರ್ ಸೈಂಟಿಫಿಕ್ ಆಂಡ್ ಟೆಕ್ನಿಕಲ್ ಟರ್ಮಿನಾಲಜಿ (CSTT) ಯು ಅನೇಕ ಕ್ರಮಗಳನ್ನು ಕೈಗೊಳ್ಳುವುದು. ಹಿಂದಿ ಮತ್ತು ಆಧುನಿಕ ಭಾರತೀಯ ಭಾಷೆಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳನ್ನು ಹೊಸದಾಗಿ ಸೃಷ್ಟಿಸಿ ಅವುಗಳನ್ನು ವಿವರಿಸುವುದು CSTTಯ ಮುಖ್ಯಕಾರ್ಯವಾಗಿದೆ ಮತ್ತು ಈ ಕ್ಷೇತ್ರದಲ್ಲಿ ಇದು (CSTT ಯು) ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವುದು. NTMನ ಅನುವಾದಗಳಿಗೆ ಇವರ ಕಾರ್ಯಗಳು ಪರಿಕರಗಳನ್ನು ಒದಗಿಸುವುವು. ಮತ್ತೊಂದೆಡೆ, NTM ಕೂಡ ಜ್ಞಾನಾಧಾರಿತ ಪಠ್ಯಗಳ ಶೀಘ್ರ ಅನುವಾದವನ್ನು ಸಾಧ್ಯವಾಗಿಸುವುದಕ್ಕಾಗಿ 22 ಅನುಸೂಚಿತ ಭಾಷೆಗಳಲ್ಲಿ ಪದಕೋಶದ ಸೃಷ್ಟಿಸುವಿಕೆಯಲ್ಲಿ CSTTಯ ಯತ್ನಗಳನ್ನು ಬಲಪಡಿಸುವುದು. ಈ ಪದಕೋಶಗಳು 22 ಭಾಷೆಗಳಲ್ಲಿಯೂ ಕೂಡ ಆನ್ಲೈನ್ನಲ್ಲಿ ಲಭ್ಯವಿರುವಂತೆ ಮಾಡಲು ಗಣಕಯಂತ್ರ ಪರಿಕರಗಳನ್ನು ಬೆಳೆಸುವುದಕ್ಕಾಗಿ NTM C-DAC ಮತ್ತು CIIL ನ ಜೊತೆ ಸೇರಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
  » ಎಲೆಕ್ಟ್ರಾನಿಕ್ ನಿಘಂಟುಗಳು/ತಿಸೌರಸ್ಗಳನ್ನು ತಾನು ಸ್ವಂತವಾಗಿ ಅಥವಾ ಕೆಲಸಗಳನ್ನು ಹೊರಗುತ್ತಿಗೆ ನೀಡುವುದರ ಮುಖಾಂತರ ರಚಿಸುವುದು.
  » ನಮ್ಮ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕಲಿಸಲಾಗುವ ಎಲ್ಲಾ ಪ್ರಮುಖ ಶಾಸ್ತ್ರಗಳ ಜ್ಞಾನಾಧಾರಿತ ಪಠ್ಯಗಳ ಅನುವಾದಗಳನ್ನು ಪ್ರಕಟಿಸುವುದು. ಇದು ಹನ್ನೊಂದನೆಯ ಯೋಜನೆಯ ಅವಧಿಯಲ್ಲಿ 65 ರಿಂದ 70 ಮತ್ತು ಇನ್ನೂ ಹಲವು ಶಾಸ್ತ್ರಗಳ 1760 ಜ್ಞಾನಾಧಾರಿತ ಪಠ್ಯಗಳು (ಪ್ರಾರಂಭಿಕವಾಗಿ, 42 ಶಾಸ್ತ್ರಗಳಿಗೆ ಪ್ರಾಶಸ್ತ್ಯವನ್ನು ನೀಡುತ್ತಾ) ಮತ್ತು ಸುಮಾರು 200 ಪಠ್ಯಪುಸ್ತಕಗಳನ್ನು ಒಳಗೊಳ್ಳುತ್ತದೆ (ಇಲ್ಲಿ ಉಲ್ಲೇಖಿಸಬಹುದಾದ ಒಂದು ಅಂಶವೆಂದರೆ 12ನೇ ತರಗತಿಯವರೆಗಿನ ಪಠ್ಯಪುಸ್ತಕಗಳು 2 ಅನುಸೂಚಿತ ಭಾಷೆಗಳಾದ ಹಿಂದಿ ಮತ್ತು ಉರ್ದುವಿನಲ್ಲಿ ಮಾತ್ರ NCERTಯಿಂದ ಅನುವಾದಿಸಲ್ಪಡುತ್ತಿವೆ). ಕಾರ್ಯವು ಸರಿಯಾದ ಗತಿಯಲ್ಲಿ ಪ್ರಾರಂಭವಾದೊಡನೆ, ಒಟ್ಟು ಅನುವಾದಗಳು ಮತ್ತು ಪ್ರಕಟಣೆಗಳ ಗುರಿಗಳನ್ನು ಮುಂದಿನ ಯೋಜನೆಗಳ ಅವಧಿಯಲ್ಲಿ ಏರಿಸಲಾಗುವುದು ಮತ್ತು ಒಂದು ಆಶಾವಾದಿ ಅಂದಾಜಿನ ಪ್ರಕಾರ, ಕ್ರಮೇಣವಾಗಿ ಇದು ಪ್ರತೀ ಯೋಜನೆಯ ಅವಧಿಯಲ್ಲಿ 8,800 ಪುಸ್ತಕಗಳಷ್ಟು ಏರಬಹುದು.
  » ಅನುವಾದದ ಬಗೆಗಿನ ನಿಯತಕಾಲಿಕಗಳು ಅಥವ ಅನುವಾದಕ್ಕೆ ಸಂಬಂಧಿಸಿದ ಪಠ್ಯಗಳು ಮತ್ತು ವಿಶ್ಲೇಷಣೆಗಳನ್ನು ಭಾರತೀಯ ಭಾಷೆಗಳಲ್ಲಿ ಪ್ರಕಟಿಸುವ ಕಾರ್ಯಕ್ಕೆ ಸಬ್ಸಿಡಿಗಳು
  » ಲೇಖಕರು/ಅನುವಾದಕರಿಗೆ ಅವರ IPR/ಕೃತಿ ಸ್ವಾಮ್ಯ ಶುಲ್ಕಕ್ಕಾಗಿ ಅನುದಾನಗಳು
  » ಅನುವಾದ ತರಬೇತಿ ಮತ್ತು ವಿವಿಧ ಹಂತಗಳಲ್ಲಿ ಅಧಿಕೃತ ಮನ್ನಣೆಗಾಗಿ ಅನುದಾನಗಳು
  » ಅನುವಾದಕ್ಕೆ ಸಂಬಂಧಿಸಿದ ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸ್ಸಿಂಗ್ ಅಥವ NLP ಸಂಶೋಧನೆಗಾಗಿ ಅನುದಾನಗಳು
  » ಕೆಲವು ನಿರ್ದಿಷ್ಟ ಯೋಜನೆಗಳಿಗಾಗಿ ಪದವಿ/ಡಿಪ್ಲೊಮಾ ಕೋರ್ಸ್ಗಳನ್ನು ನಡೆಸುತ್ತಿರುವ ವಿಶ್ವವಿದ್ಯಾನಿಲಯ ವಿಭಾಗಗಳಿಗೆ ಅನುದಾನಗಳು. ಉದಾಹರಣೆಗೆ, ಭಾಷಾಜೋಡಿಗಳ ನಡುವೆ ಅನುವಾದ ಕೈಪಿಡಿಗಳ ತಯಾರಿಕೆ.

ಕೊನೆಯದಾಗಿ, ಮೇಲೆ ಹೇಳಿದವೆಲ್ಲವೂ ಪ್ರಸ್ತಾಪಿತ NTM ನಡಿಯಲ್ಲಿ ಪರಿಪಾಲಿಸಲು ಸಾಧ್ಯವಿದೆ. ಆದರೆ, ಮಿಷನ್ ಇದಕ್ಕಾಗಿ ಕೆಳಗೆ ಹೇಳಿದ ಕೆಲವು ನಿರೀಕ್ಷಿತ ಫಲಗಳಂತಹ ಮೂಲಭೂತ ಗುರಿಗಳ ಕಡೆಗೆ ಸದಾ ದೃಷ್ಟಿಯನ್ನು ಹರಿಸಿರಬೇಕು:
  » ವಿವಿಧ ಕ್ಷೇತ್ರಗಳಲ್ಲಿ ನಾನಾ ಬಗೆಯ ನಿಪುಣತೆಗಳು ಮತ್ತು ಅರ್ಹತೆಗಳನ್ನು ಹೊಂದಿರುವ ಅನುವಾದಕರ ದತ್ತ ಭಂಡಾರವನ್ನು ಸೃಷ್ಟಿಸುವುದು. ಈ ಭಂಡಾರವು ಆನ್ಲೈನ್ನಲ್ಲಿ ಲಭ್ಯವಿರುವುದು ಮತ್ತು ಕೆಲವು ನಿರ್ದಿಷ್ಟ ಅವಶ್ಯಕತೆಗಳಿಗಾಗಿ, NTM ಅನ್ನು ಸಂಪರ್ಕಿಸುವುದರ ಮುಖಾಂತರ ಕೂಡ ಪಡೆಯಬಹುದು.
  » ಈಗಾಗಲೇ ಇರುವ ವಿವಿಧ ಪಠ್ಯಗಳ ಅನುವಾದಗಳ ದತ್ತ ಭಂಡಾರ ಮತ್ತು ಟಿಪ್ಪಣಿ ಸೂಚಿಗಳನ್ನು ಸೃಷ್ಟಿಸುವುದು. ಇವುಗಳು ತಮ್ಮ ಕ್ಷೇತ್ರಗಳಿಗನುಗುಣವಾಗಿ ವರ್ಗೀಕರಿಸಲ್ಪಟ್ಟಿರಬೇಕು ಮತ್ತು ಶೈಕ್ಷಣಿಕ ಸಂಸ್ಥೆಗಳು, ಗ್ರಂಥಾಲಯ ಜಾಲಗಳು ಇತ್ಯಾದಿಗಳಿಗೆ ಹೊಸ ಪಟ್ಟಿಯನ್ನು ಆಗಿಂದಾಗ್ಗೆ ಕಳುಹಿಸುತ್ತಿರಬೇಕು
  » ಅನುವಾದಕರಿಗೆ ಅಲ್ಪಾವದಿ ತರಬೇತಿ ನೀಡುವುದು.
  » ಒಳ್ಳೆಯ ಗುಣಮಟ್ಟದ ಅನುವಾದ ವಿಷಯ ಸಾಮಗ್ರಿಗಳನ್ನು ಪ್ರೋತ್ಸಾಹಿಸುವುದು ಮತ್ತು ಪ್ರಸರಿಸುವುದು
  » ಯಾಂತ್ರಿಕ ಅನುವಾದಕ್ಕೆ ಪ್ರೋತ್ಸಾಹ ನೀಡುವುದು

ನೆರವನ್ನು ವಿಸ್ತರಿಸಲು ಯೋಗ್ಯವಾದಂತಹ ನಿಯತಕಾಲಿಕಗಳ ಪಟ್ಟಿಯನ್ನು ವಿಶದೀಕರಿಸುವ ನಿಟ್ಟಿನಲ್ಲಿ, ತಾತ್ಕಾಲಿಕ ಹೆಸರುಗಳ ಪಟ್ಟಿಯೊಂದನ್ನು ಇಲ್ಲಿ ನಾವು ಕೊಡಬಹುದು. ಯೋಜನೆಯು ಅನುಮೋದನೆಯನ್ನು ಪಡೆದ ನಂತರ ಈ ಪಟ್ಟಿಯು ಮತ್ತಷ್ಟು ಚರ್ಚೆಗೆ ಒಳಗಾಗುವುದು.
 
ಅನುವಾದದಲ್ಲಿ ನಿಯತಕಾಲಿಕಗಳು:
(ಪ್ರಸ್ತಾವಿತ NTM ನಡಿಯಲ್ಲಿ ಬೆಂಬಲಿಸಲು ಅರ್ಹವಾದವುಗಳು)

ಅಸ್ಸಾಮಿ
1. ಗರಿಯಾಸಿ (ಸಂಪಾದಕ ಹರೇಕೃಷ್ಣ ದೇಕ)
2. ಪ್ರಾಂತಿಕ್ (ಸಂಪಾದಕ ಪಿ.ಜಿ. ಬರುಹ)
3. ಅನುರಾಧ ಪರಂಪಾರ್ (ಸಂಪಾದಕ ಪಿ. ಥಾಕೂರ್)

ಬಾಂಗ್ಲಾ/ಬೆಂಗಾಲಿ
4. ಅನುಬದ್ ಪತ್ರಿಕ
5. ಭಾಷಾನಗರ್
6. ಭಾಷಾಬಂಧನ್
7. ಎಬಂಗ್ ಮುಷೈರ (ಜ್ಞಾನಾಧಾರಿತ ಪಠ್ಯಗಳಲ್ಲಿನ ಅಂಶಗಳನ್ನು ಪುನರುಚ್ಚರಿಸುವ ಪ್ರಬಂಧಗಳನ್ನು ಒಳಗೊಂಡಿರುತ್ತದೆ)
8. ಬಿಗ್ಯಾಪನ್ ಪರ್ವ (ಕಲೆ ಮತ್ತು ವಿಮರ್ಶಾತ್ಮಕ ಬರವಣಿಗೆಯ ಅನುವಾದ)
9. ಅಂತರ್ಜಾತಿಕ್ ಅಂಗಿಕ್ (ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮೂಲಗಳ ಅನುವಾದಗಳ ಬಗೆಗೆ ಗಮನವನ್ನು ಹರಿಸುತ್ತದೆ )
10. ಪರ್ಬಂತರ್ (ಮುಖ್ಯವಾಗಿ ಪ್ರಾದೇಶಿಕ ಅನುವಾದಗಳು ಪಠ್ಯಗಳು ಅಥವಾ ಲೇಖಕರ ಬಗೆಗೆ ಗಮನವನ್ನು ಹರಿಸುತ್ತದೆ)

ಬೋಡೋ
11. ಬೋಡೋ ಸಾಹಿತ್ಯ ಸಭಾ ಪತ್ರಿಕ

ಆಂಗ್ಲ
12. ಇಂಡಿಯನ್ ಲಿಟರೇಚರ್ (ಸಾಹಿತ್ಯ ಅಕಾಡೆಮಿ)
13. ಟ್ರಾನ್ಲೇಷನ್ ಟುಡೇ (ಅನುವಾದ ಅಧ್ಯಯನದ ಬಗೆಗೆ C I I L ನ ನಿಯತಕಾಲಿಕ)
14. ಯಾತ್ರಾ (ಅಸ್ಸೋಮಿಯಾದಿಂದ ಅನುವಾದ)
15. ಅನಿಕೇತನ (ಕನ್ನಡದಿಂದ)
16. ಮಲಯಾಲಂ ಲಿಟೆರರಿ ಸರ್ವೆ (ಮಲಯಾಳದಿಂದ)
17. ಉರ್ದು ಅಲೈವ್ (ಉರ್ದುವಿನಿಂದ)
18. ಕೋಬಿತ ರಿವ್ಯೂ (ದ್ವಿಭಾಷೀಯ, ಬೆಂಗಾಳಿ - ಆಂಗ್ಲ)
19. ಇಂಟರ್ನ್ಯಾಷನಲ್ ಜರ್ನಲ್ ಇನ್ ಟ್ರಾನ್ಸ್ಲೇಷನ್ (ಬಹ್ರಿ ಪ್ರಕಾಶನ)

ಗುಜರಾತಿ
20. ವಿ (ಅನೇಕ ಅನುವಾದಗಳನ್ನು ಒಳಗೊಂಡಿರುತ್ತದೆ)
21. ಗದ್ಯಪರ್ವ

ಹಿಂದಿ
22. ತಾನವ್ (ಬೇರೆ ಬೇರೆ ಭಾಷೆಗಳಿಂದ, ಭಾರತೀಯ ಮತ್ತು ವಿದೇಶಿ)
23. ಅನುವಾದ್ (ಬೇರೆ ಭಾಷೆಗಳಿಂದ ಭಾಷಾಂತರ ಮತ್ತು ಅನುವಾದದ ಬಗೆಗಿನ ಪ್ರಬಂಧಗಳು)
24. ಪಹಲ್ (ಪ್ರತ್ಯೇಕವಾಗಿ ಅನುವಾದಕ್ಕೆ ಮಾತ್ರ ಮೀಸಲಾಗಿರದೆ ಈ ವಿಷಯದ ಬಗೆಗೆ ಹೆಚ್ಚು ಗಮನ ಹರಿಸುತ್ತದೆ)
25. ಸಮಕಾಲೀನ್ ಭಾರತೀಯ ಸಾಹಿತ್ಯ (ಸಾಹಿತ್ಯ ಅಕಾಡೆಮಿ)
26. ವಾಗರ್ಥ್
27. ನಯಾ ಗ್ಯಾನೋದಯ್
28. ಭಾರತೀಯ ಅನುವಾದ್ ಪರಿಷದ್ ಪತ್ರಿಕ

ಕನ್ನಡ
29. ಅನಿಕೇತನ (ಬೇರೆ ಭಾರತೀಯ ಭಾಷೆಗಳಿಂದ, ಇದು ಆಂಗ್ಲಭಾಷೆಯ ಅನಿಕೇತನದ ಮುಂದುವರಿದ ಭಾಗವಾಗಿದೆ)
30. ದೇಶ-ಕಾಲ (ಅನೇಕ ಅನುವಾದಗಳು)
31. ಸಂಕ್ರಮಣ (ಅನೇಕ ಅನುವಾದಗಳು)
32. ಸಂವಾದ (ಅನುವಾದಗಳನ್ನು ಒಳ್ಳೆಯ ಪ್ರಮಾಣದಲ್ಲಿ ಪ್ರಕಟಿಸುತ್ತದೆ)
33. ಸಂಕಲನ (ಅನುವಾದಗಳನ್ನು ಕೂಡ ಪ್ರಕಟಿಸುತ್ತದೆ)

ಕಶ್ಮೀರಿ
34. ಶೀರಾಜಾ - ಕಶ್ಮೀರಿ (ಸಾಂಸ್ಕೃತಿಕ ಇಲಾಖೆ, ಕಾಶ್ಮೀರ ಸರ್ಕಾರ)
35. ಆಲವ್ (ಮಾಹಿತಿ ತಂತ್ರಜ್ಞಾನ ಇಲಾಖೆ, ಕಾಶ್ಮೀರ ಸರ್ಕಾರ)

ಕೊಂಕಣಿ
36. ಜಾಗ್ (ಮಾಸಿಕ, ಅನುವಾದಗಳ ದಾಖಲೆಯ ಜೊತೆಗೆ)

ಮಲಯಾಳ
37. ಕೇರಳ ಕವಿತ (ಅನೇಕ ಅನುವಾದಗಳು, ಮುಖ್ಯವಾಗಿ ಸಾಹಿತ್ಯಿಕ ಕೃತಿಗಳು)
38. ಮಾತೃಭೂಮಿ (ಅನುವಾದ ವಿಶೇಷ ಸಂಚಿಕೆಗಳು)
39. ಕಲಾ-ಕೌಮುದಿ
40. ಮಾಧ್ಯಮಮ್

ಮರಾಠಿ
41. ಕಲ್ಯಾನೆ ಭಾಷಾಂತರ್
42. ಭಾಷಾ ಅನಿ ಜೀವನ್
43. ಪ್ರತಿಷ್ಠಾನ್ (ಅನೇಕ ಅನುವಾದಗಳು)
44. ಪಂಚ್ಧಾರಾ (ಮರಾಠಿ ಮೂಲಗಳ ಜೊತೆಗೆ ಹಿಂದಿ, ಉರ್ದು, ತೆಲುಗು ಮತ್ತು ಕನ್ನಡದಿಂದ ಅನುವಾದಗಳು)
45. ಸಾಕ್ಷತ್ (ಅನುವಾದದ ಬಗೆಗೆ ವಿಶೇಷ ಸಂಚಿಕೆಗಳನ್ನು ಹೊರತರುತ್ತದೆ)

ಮೈಥಿಲಿ
46. ಮೈಥಿಲಿ ಅಕಾಡೆಮಿ ಪತ್ರಿಕಾ (ಜ್ಞಾನಾಧಾರಿತ ಪಠ್ಯಗಳನ್ನು ಒಳಗೊಂಡಿರುತ್ತದೆ)
47. ಘರ್-ಬಾಹರ್(ಅನುವಾದಗಳನ್ನು ಒಳಗೊಂಡಿರುತ್ತದೆ)

ಒರಿಯಾ
48. ಸಪ್ತಭಿಕ್ಷ

ಪಂಜಾಬಿ
49. ಸಮ್ದರ್ಶಿ (ಪಂಜಾಬಿ ಅಕಾಡೆಮಿ, ದೆಹಲಿ, ಕೆಲವೊಮ್ಮೆ ಅನುವಾದಗಳನ್ನು ಪ್ರಕಟಿಸುತ್ತದೆ)
50. ಅಖ್ಖರ್ (ಅಮೃತ್ಸರ್, ಮುಖ್ಯವಾಗಿ ಸೃಜನಶೀಲ ಮತ್ತು ವಿಮರ್ಶಾತ್ಮಕ ಅನುವಾದಗಳನ್ನು ಪ್ರಕಟಿಸುತ್ತದೆ)

ಸಂತಾಲಿ
51. ಸರ್ - ಸಗುನ್
52. ಲೋಹಂತಿ ಪತ್ರಿಕ

ತಮಿಳು
53. ದಿಸೈಕಲ್ ಎಟ್ಟುಮ್ (ಭಾರತೀಯ ಭಾಷೆಗಳಿಂದ)

ತೆಲುಗು
54. ವಿಪುಲ ( ಹೆಚ್ಚಾಗಿ ಎಲ್ಲಾ ಭಾಷೆಗಳಿಂದ ಅನುವಾದಗಳು)
55. ತೆಲುಗು ವೈಜ್ಞಾನಿಕ ಪತ್ರಿಕ (ತೆಲುಗು ಅಕಾಡೆಮಿ)