|
ತಂತ್ರಜ್ಞಾನ ವಿಷಯಗಳು
ಭಾರತೀಯ ಭಾಷೆಗಳನ್ನು ಒಳಗೊಂಡ ವಿದ್ಯುನ್ಮಾನ ಅನುವಾದ ಸಾಧನಗಳ ಅಭಿವೃದ್ಧಿಯು ಇನ್ನೂ ಶೈಶಾವಸ್ಥೆಯಲ್ಲಿದೆ.
ಈ ಸಾಧನಗಳಲ್ಲಿ ಮುಖ್ಯವಾಗಿ ಪದ ಪರಿಷ್ಕರಣೆ, ನಿಘಂಟುಗಳು, ನಿರ್ವಹಣಾ ಸಾಧನಗಳು, ಪದ ಕೋಶಗಳು, ಆನ್
ಲೈನ್ ನಿಘಂಟುಗಳು, ಆನ್ ಲೈನ್ ಚಿತ್ರಗಳು ಮತ್ತು ತೆಸಾರಸ್‌ಗಳು, ವಾಕ್ಯ ಸೂಚಿಗಳು, ಅನುವಾದ ಸ್ಮರಣಾ
ತಂತ್ರಾಂಶಗಳು, ವಿ-ಅನುವಾದಗಳು (ಯಂತ್ರ ಅನುವಾದ ತಂತ್ರಾಂಶಗಳು), ಅನುವಾದ ಬೋಧನಾ ತಂತ್ರಾಂಶಗಳು,
ತಾಂತ್ರಿಕ ಪದಕೋಶಗಳು, ಪದ ಪರೀಕ್ಷಕಗಳು, ವ್ಯಾಕರಣ ಪರೀಕ್ಷಕಗಳು, ವಿದ್ಯುನ್ಮಾನ ನಿಘಂಟುಗಳು, ಆನ್ಲೈನ್
ಸಾಧನಗಳು, ಸಂಸ್ಕೃತಿಕ ಪದಕೋಶಗಳು ಮತ್ತು ಇನ್ನೂ ಹಲವಾರು ಸೌಲಭ್ಯಗಳಿವೆ. ಇವೆಲ್ಲವೂ ಯಂತ್ರ ಅನುವಾದವನ್ನು
ಹೊರತು ಪಡಿಸಿ ಅನುವಾದಕರಿಗೆ ನೆರವು ನೀಡುತ್ತವೆಯಾದರೂ ನೈಜ ಅನುವಾದವನ್ನು ಮಾಡಲಾರವು.
NTM ಯಂತ್ರ ಅನುವಾದದಲ್ಲಿ ಆಗಿರುವ ತಾಂತ್ರಿಕ ಪ್ರಗತಿಗೆ ಮಾನವ ತಾಂತ್ರಿಕ ಸಂಪನ್ಮೂಲದ ಅಭಿವೃದ್ಧಿ
ಹಾಗೂ ತರಬೇತಿಯ ಮೂಲಕ ಕೆಲವು ಚಟುವಟಿಕೆಗಳಿಗೆ ನೆರವು ನೀಡಿ ಪ್ರೇರೇಪಿಸಬಲ್ಲುದು ಹಾಗೂ ಕೆಲವಕ್ಕೆ
ಸಹಭಾಗಿತ್ವ ನೀಡಿ ಬೆಂಬಲಿಸುತ್ತದೆ. NTM-DAC ಜೊತೆಗೂಡಿ ಭಾರತೀಯ ಭಾಷೆಗಳ ಅಭಿವೃದ್ಧಿ ಮತ್ತು ತಂತ್ರಜ್ಞಾನಗಳ
ಈ ಕೆಳಕಂಡ ಕ್ಷೇತ್ರಗಳಲ್ಲಿ ಸಹಯೋಗ ನೀಡುತ್ತದೆ:
|
a.
|
ಡಿಜಿಟಲ್ ತೆಸಾರಸ್ ನಂತಹ ಸಾಧನಗಳು, ದ್ವಿಭಾಷಾ ನಿಘಂಟುಗಳು, ಅನುವಾದ ಸ್ಮರಣಾ ತಂತ್ರಾಂಶ ಇತ್ಯಾದಿಗಳನ್ನು
ತ್ವರಿತ ಅನ್ವಯ ಹಾಗೂ ದಕ್ಷ ಮತ್ತು ಪರಿಣಾಮಕಾರಿ ಅನುವಾದಕ್ಕೆ ಪೂರಕವಾದ ಅಗತ್ಯ ಮೂಲಭೂತ ಸೌಕರ್ಯಗಳ
ನಿರ್ಮಾಣ;
|
b.
|
ವಿ-ನಿಘಂಟು, ಪದ ಜಾಲ, ಭಾಷಾ ವಿಶ್ಲೇಷಣೆ ಮತ್ತು ಸಂಶ್ಲೇಷಣಾ ಸಾಧನಗಳು, ವಿಷಯಗಳ ಅನುಕ್ರಮಣಿಕೆ (ಕಾನಕಾರ್ಡನ್ಸರ್ಸ್),
ಆವರ್ತನ ವಿಶ್ಲೇಷಕರು ಇತ್ಯಾದಿ ಭಾಷಾ ಶಬ್ದ ಸಂಪನ್ಮೂಲಗಳನ್ನು ಬಹು ಸಂಸ್ಥೆಗಳ ದೀರ್ಘಾವಧಿ ಸಹಯೋಗದೊಂದಿಗೆ
ಸೃಷ್ಟಿಸುವುದು ಮತ್ತು ನಿರ್ವಹಿಸುವುದು; ಇಂತಹ ಕಡೆ NTM ನಿರಂತರ ಸಭೆ-ಸಮಾಲೋಚನೆ - ಆನ್ಲೈನ್ ಚರ್ಚೆಗಳು
ಇತ್ಯಾದಿಗಳಿಗೆ ಗುಂಪುಕಾರ್ಯಕ್ಕಾಗಿ ಸಾಮಾನ್ಯ ವೇದಿಕೆಯನ್ನು NTM ಒದಗಿಸಬಲ್ಲುದು.
|
c.
|
ಮೂಲ ಪಠ್ಯ ಹಾಗೂ ಡಿಜಿಟಲ್ ಅನುವಾದಗಳ ನಮೂನೆಗಳ ಕೃತಿ ಸ್ವಾಮ್ಯ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವುದು.
NTM ನಿರ್ಧಿಷ್ಟ ಗುಣಮಟ್ಟದ XML ಟ್ಯಾಗ್ ಮತ್ತು ಡಿಟಿಓಗಳ ಡಿಜಿಟಲ್ ಸಂಪತ್ತುಗಳ ನಿರ್ವಹಣೆಯನ್ನು
ಖಾತ್ರಿಪಡಿಸಬಹುದು.
|
d.
|
ಎಲ್‌ಡಿಸಿ-ಐಎಲ್ ಯೋಜನೆ ಅಡಿಯಲ್ಲಿ ರಚಿತಗೊಳ್ಳುವ ಅನೊಟೇಶನ್ ಮತ್ತು ಅಲೈನ್ಮೆಂಟ್‌ಗಳ ಸಮಾನಾಂತರ ವಿಶೇಷ
ರಚನೆಗಳನ್ನು ಅತ್ಯುನ್ನತ ಗುಣಮಟ್ಟದಲ್ಲಿ ಉತ್ಪಾದಿಸುವುದು ಮತ್ತು ನಿರ್ವಹಿಸುವುದು. ಇಂತಹ ಸಂಪತ್ತುಗಳನ್ನು
ಯಾಂತ್ರಿಕ ಕಲಿಕೆಗೆ ಒಳಪಡಿಸಿ ಯಂತ್ರ ಅನುವಾದ ಪದ್ದತಿ ಪಡೆಯಬಹುದು.
|
e.
|
ವಿಶ್ವ ಸಂಸ್ಥೆಯು 15 ರಾಷ್ಟ್ರಗಳ ಸಹಯೋಗದೊಂದಿಗೆ 1996ರಲ್ಲಿ ಸ್ಥಾಪಿಸಿದ ‘ವಿಶ್ವ ಭಾಷಾ ಜಾಲ’ UNL
ಆಧಾರಿತ ಅಂತರ-ಭಾಷಾ ನಡುವಿನ ಪದ್ದತಿಯನ್ನು ಪ್ರೋತ್ಸಾಹಿಸುವುದು. ಐಐಟಿ ಮುಂಬಯಿ ಈಗಾಗಲೆ ಆಂಗ್ಲ ಭಾಷೆ
ಮತ್ತು ಇತರೆ ಭಾರತೀಯ ಭಾಷೆಗಳ ಯಂತ್ರ ಅನುವಾದದ ಸಾಧನ ತಂತ್ರಜ್ಞಾನಗಳನ್ನು ರೂಪಿಸಿದ್ದು ಅದನ್ನು ಸಾರ್ವತ್ರೀಕರಿಸಬಹುದಾಗಿದೆ.
|
|
|
|