|
ಉದ್ದೇಶಿತ ಫಲಾನುಭವಿಗಳು
ಭಾರತೀಯ ಅನುವಾದ ಮಿಷನ್ನ ಉದ್ದೇಶಿತ ಫಲಾನುಭವಿಗಳ ಸಾಲೇ ಇದ್ದರೂ ಸಹ, ತಮ್ಮ ಸ್ಥಳ ಮತ್ತು ಹಿನ್ನಲೆಯ
- ಪ್ರಾಕೃತಿಕ (ಮುಖ್ಯವಾಗಿ ಗ್ರಾಮೀಣ ಮತ್ತು ಉಪನಗರ ಪ್ರಾಂತ್ಯಗಳು) ಹಾಗೂ ಸಾಮಾಜಿಕ (ಮುಖ್ಯವಾಗಿ
ಪ್ರತಿಕೂಲ ಜಾತಿ ಅಥವಾ ವರ್ಗಕ್ಕೆ ಸೇರಿದ) - ಕಾರಣಗಳಿಂದ ಬಹುಪಾಲು ಆಂಗ್ಲ ಭಾಷೆಯಲ್ಲಿ ಮಾತ್ರ ಲಭ್ಯವಿರುವ
ತಾಂತ್ರಿಕ ಮತ್ತು ವೈಜ್ಞಾನಿಕ ಜ್ಞಾನವನ್ನು ಪಡೆಯಲು ಆಸಕ್ತರಾಗಿರುವ ಸಮಾಜದ ಅಂಚಿನಲ್ಲಿರುವ ವರ್ಗದ
ವಿದ್ಯಾರ್ಥಿಗಳು ಪ್ರಪ್ರಥಮ ಆದ್ಯತೆಯನ್ನು ಪಡೆಯುವರು. ವಿವಿಧ ಶಾಸ್ತ್ರಗಳ ಅನುವಾದಿತ ಪುಸ್ತಕಗಳು,
ಜ್ಞಾನವನ್ನು ಗಳಿಸಲು ಯತ್ನಿಸುತ್ತಿರುವ ಸಮಾಜದ ಅಂಚಿನಲ್ಲಿರುವ ಈ ವರ್ಗಗಳನ್ನು ತಲುಪಿದಾಗ ಮಾತ್ರವೇ
NTMನ ನೈಜ ಉದ್ದೇಶವನ್ನು ಈಡೇರಿಸಿದಂತಾಗುತ್ತದೆ.
ಹಾಗಿದ್ದರೂ, ಈ ವರ್ಗವನ್ನು ತಲುಪುವ ಪ್ರಕ್ರಿಯೆಯಲ್ಲಿ, ನಂತರದ ಪ್ರಯೋಜನಗಳು ಇನ್ನು ಅನೇಕ ವರ್ಗಗಳಿಗೆ
ಕೂಡ ದೊರಕುತ್ತದೆ. ಉದಾಹರಣೆಗೆ:
|
1.
|
ಸಾಹಿತ್ಯಕ ಮತ್ತು ಜ್ಞಾನಾಧಾರಿತ ಪಠ್ಯಗಳನ್ನು ತಮ್ಮದೇ ಭಾಷೆಗಳಲ್ಲಿ ಓದಲು ತವಕವಾಗಿರುವ ಸಾರ್ವಜನಿಕರು.
|
2.
|
ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಗಳಿಸಿ ಅವರ ಕೆಲಸಕ್ಕಾಗಿ ಒಳ್ಳೆಯ ಸಂಭಾವನೆಯನ್ನು ಪಡೆಯುವ
ಅನುವಾದಕರು.
|
3.
|
ಭಾಷೆಗಳಲ್ಲಿ ಹೊಸ ಮತ್ತು ಆಸಕ್ತಿಯನ್ನುಂಟು ಮಾಡುವ ಪುಸ್ತಕಗಳನ್ನು ನಿರೀಕ್ಷಿಸುತ್ತಿರುವ ಪ್ರಕಾಶಕರು
|
4.
|
ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸತತವಾಗಿ ಬೋಧಿಸುತ್ತಿರುವ ಶಿಕ್ಷಕ ವರ್ಗ.
|
5.
|
ಅನೌಪಚಾರಿಕ ಶಿಕ್ಷಣದಲ್ಲಿ ತೊಡಗಿರುವ ಸ್ವಯಂಸೇವಕರು
|
6.
|
ಸಾರ್ವಜನಿಕ ಆರೋಗ್ಯ, ನಾಗರೀಕ ಹಕ್ಕುಗಳು, ಪರಿಸರ, ವಿಜ್ಞಾನದ ಜನಪ್ರಿಯತೆ ಇತ್ಯಾದಿ ಕ್ಷೇತ್ರಗಳಲ್ಲಿ
ಕಾರ್ಯನಿರತವಾಗಿರುವ ಸ್ವಯಂಸೇವಾ ಸಂಸ್ಥೆಗಳು.
|
7.
|
ವಾಖ್ಯಾನಕಾರರನ್ನು ನಿರೀಕ್ಷಿಸುತ್ತಿರುವ ಸಂಸ್ಥೆಗಳು
|
8.
|
ಭಾಷಾಂತರದ ಅವಶ್ಯಕತೆಯಿರುವ ಪ್ರವಾಸಿಗರು ಮತ್ತು ವಿದೇಶೀ ಪರಿಣತರು
|
9.
|
ಸಿನಿಮಾಗಳಿಗೆ ಉಪಶೀರ್ಷಿಕೆಗಳನ್ನು ಹೊಂದಲು ತವಕಿಸುತ್ತಿರುವ ಚಲನಚಿತ್ರೋದ್ಯಮಿಗಳು, ನಿರ್ಮಾಪಕರು
ಮತ್ತು ಪ್ರಚಾರಕರು.
|
10.
|
ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಇಚ್ಛಿಸುತ್ತಿರುವ ರೇಡಿಯೋ ಮತ್ತು
ದೂರದರ್ಶನ ಕಾರ್ಯಕ್ರಮ ನಿರ್ಮಾಪಕರು.
|
11.
|
ಅನುವಾದ ತರಬೇತುದಾರರು.
|
12.
|
ವಿಶ್ವವಿದ್ಯಾನಿಲಯಗಳು ಮತ್ತು ಇತರೆ ಭಾಷಾಂತರ ಸಂಸ್ಥೆಗಳಲ್ಲಿನ ಅನುವಾದ ವಿಭಾಗಗಳು.
|
13.
|
ಅನುವಾದಕ್ಕೆ ಸಂಬಂಧಿಸಿದ ಅನೇಕ ಕ್ಷೇತ್ರಗಳಲ್ಲಿರುವ ಸಂಶೋಧಕರು.
|
14.
|
ಅನುವಾದ ತಂತ್ರಾಂಶವನ್ನು ಅಭಿವೃದ್ಧಿಪಡಿಸುವವರು
|
15.
|
ತೌಲನಿಕ ಸಾಹಿತ್ಯ ಪರಿಣತರು.
|
ಶ್ರೇಷ್ಠ ಅನುವಾದ ಉದ್ಯಮವನ್ನು ಸ್ಥಾಪಿಸುವ ಮೊದಲ ಹೆಜ್ಜೆಯಾಗಿ ಅನುಕೃತಿ ವೆಬ್ಸೈಟ್ನಲ್ಲಿ ಆರಂಭಿಸಿದ
‘ರಾಷ್ಟ್ರೀಯ ಅನುವಾದಕರ ನೊಂದಣಿ’ಯನ್ನು ಮತ್ತು ಸಾಹಿತ್ಯ ಅಕಾಡೆಮಿಯು ಮೊದಲೇ ಪ್ರಕಟಿಸಿದ ಅನುವಾದಕರ
ಪಟ್ಟಿಯನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಪ್ರಸ್ತಾಪಿಸಲಾಗಿದೆ. ಇದರ ಜೊತೆಗೆ, ಎಲ್ಲಾ ಅನುವಾದಕರ
ಸಂಘಗಳು (ಇಂತಹ ಅನೇಕ ಸಂಘಗಳು ಭಾರತದಲ್ಲೀಗ ಇವೆ) ಮತ್ತು ಖಾಸಗೀ ಪ್ರಕಾಶನಗಳಲ್ಲಿರುವ ಅನುವಾದಕರ ಸಮುದಾಯವನ್ನು
ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಈ ಸಂಪೂರ್ಣ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಬೇಕು
ಮತ್ತು ಸರ್ಕಾರಿ ಮತ್ತು ಇತರ ಸಂಸ್ಥೆಗಳಿಗೆ ಕೆಲವು ಪಠ್ಯಗಳ ಅನುವಾದಗಳು ಅತೀ ಶೀಘ್ರವಾಗಿ ಬೇಕಾಗಿದ್ದಾಗ
ಅವುಗಳಿಗೆ ಸೇವೆಯನ್ನು ಒದಗಿಸಬೇಕು. ಇವುಗಳಲ್ಲದೆ, ಅನುವಾದ ಮೇಳವನ್ನು (ಅನುವಾದ ಉತ್ಸವಗಳು ಮತ್ತು
ಇತರೆ ಸಂಬಂಧಿತ ಸೂಕ್ಷ್ಮಗ್ರಾಹೀಕರಿಸುವ ಚಟುವಟಿಕೆಗಳನ್ನು ಚಿಕ್ಕ ಪಟ್ಟಣಗಳಲ್ಲಿಯೂ ಸಹ) ಏರ್ಪಡಿಸುವುದು
ಮತ್ತು ಸಮರ್ಥ ಮಾನವಶಕ್ತಿಯ ಉತ್ಪಾದನೆ ಮತ್ತು ಗುರುತಿಸುವಿಕೆಗಾಗಿ ವೃತ್ತಿನಿರತ ಅನುವಾದಕರಿಗೆ ತರಬೇತಿ
ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವುದು. ಈ ವಿಚಾರಧಾರೆಯು ಒಂದು ಬೃಹತ್ ಅನುವಾದ ಉದ್ದಿಮೆಯಲ್ಲಿ
ಪರಿಣಮಿಸುತ್ತದೆಂದು ನಾವು ಆಶಿಸುತ್ತೇವೆ.
ಸಾಮಾನ್ಯ ಜನರಿಗೆ ಗರಿಷ್ಠ ಪ್ರಯೋಜನವನ್ನು ತರುವುದರ ಸಲುವಾಗಿ ಮತ್ತು ನಮ್ಮ ಬೋಧಕ ಮತ್ತು ಸಂಶೋಧಕ
ಸಂಸ್ಥೆಗಳ ಬೇಡಿಕೆಯನ್ನು ಪೂರೈಸುವ ಸಲುವಾಗಿಯೂ ಸಹ ಜ್ಞಾನಾಧಾರಿತ ಪಠ್ಯಗಳ ಅವಶ್ಯಕತೆ ಇರುವುದರಿಂದಾಗಿ
ಮುದ್ರಿತ ಅನುವಾದಗಳು ಮಿತಬೆಲೆಯುಳ್ಳದ್ದಾಗಿರುತ್ತದೆ. ಈ ಎಲ್ಲಾ ಪಠ್ಯಗಳೂ ಸಹ ಇ-ಪುಸ್ತಕಗಳಾಗಿ CIILನ
ಕಂಪ್ಯೂಟರ್ ಜಾಲದ ಸರ್ವರ್ನ ಮುಖಾಂತರ NTMನಿಂದ ಆರಂಭಿಸಿ ನಿರ್ವಹಿಸಲ್ಪಡುವ ವ್ಯಾಪಕ ಗಣಕಜಾಲದ ವೆಬ್ಸೈಟೊಂದರಲ್ಲಿ
ಉಚಿತವಾಗಿ ಲಭ್ಯವಿರುವಂತೆ ಮಾಡಲಾಗುವುದು. ಈ ಇಂಟರ್ನೆಟ್ ಆಧಾರಿತ ಪುಸ್ತಕಗಳ ಬಳಕೆದಾರರ ದಾಖಲೆಗಾಗಿ
ಒಂದು ನೊಂದಣಿ ಪುಸ್ತಕವನ್ನು ಮಾತ್ರ ಇರಿಸಲಾಗುತ್ತದೆ. ಇದು ಅವರ ಪ್ರತಿಕ್ರಿಯೆಯನ್ನು ಪಡೆಯಲೂ ಸಹ
ನೆರವಾಗುತ್ತದೆ. ಕೊನೆಯದಾಗಿ, ಅಭಿವೃದ್ಧಿಪಡಿಸಿದ ಅನುವಾದ ಪರಿಕರಗಳಾದ ನಿಘಂಟುಗಳು, ತಿಸೌರಸ್ಗಳು,
ಪದ-ಹುಡುಕುವಿಕೆ, ಕನ್ಕಾರ್ಡನ್ಗಳು ಅಥವಾ ಅನುಕ್ರಮಣಿಕೆಗಳು, ಶಬ್ದ ನಿಷ್ಪತ್ತಿ ನಿಘಂಟುಗಳು, ದೃಶ್ಯ
ಮತ್ತು ಶ್ರವಣ ನಿಘಂಟುಗಳು ಇತ್ಯಾದಿಗಳು ಲಭ್ಯವಾಗುವಂತೆ ಮಾಡಿ ಅವುಗಳನ್ನು ತೆರೆದ ಮೂಲ ಪ್ಯಾಕೇಜ್ಗಳಾಗಿ
ನವೀನಗೊಳಿಸಲಾಗುವುದು.
NTM, ವಿವಿಧ ಭಾಷಾಜೋಡಿಗಳ ನಡುವೆ ಡಿಜಿಟಲ್ ನಿಘಂಟುಗಳು ಮತ್ತು ಯಂತ್ರ-ಬೆಂಬಲಿತ ಅನುವಾದ ತಂತ್ರಾಂಶಗಳನ್ನು
ಸೃಷ್ಟಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಆದರೆ ಐಐಟಿಗಳು ಮತ್ತು ವಿಶ್ವವಿದ್ಯಾನಿಲಯಗಳು,
ಐಐಐಟಿಗಳು, TIFR ಮತ್ತು IISC ಒಟ್ಟುಗೂಡಿ ಹಾಗು ಅನೇಕ ತಂತ್ರಾಂಶ ದೈತ್ಯಗಳು ಯಾಂತ್ರಿಕ ಅನುವಾದ
(MT)ವೆಂಬ ಕ್ಲಿಷ್ಟಕರ ಸಮಸ್ಯೆಯ ಬಗೆಗೆ ಕಳೆದ ಎರಡು ದಶಕಗಳಿಂದ ಕಾರ್ಯವನ್ನು ನಡೆಸುತ್ತಿದ್ದರೂ ಸಹ
ಇವುಗಳ ಫಲಿತಾಂಶಗಳು ಲೋಪದೋಷವಿಲ್ಲದ ಪರಿಕರಗಳನ್ನು ಸೃಷ್ಟಿಸಲು ವಿಫಲವಾಗಿವೆ. ಆದ್ದರಿಂದ ಈ ಕ್ಷೇತ್ರಕ್ಕೆ
NTM ಎಚ್ಚರಿಕೆಯಿಂದ ಒತ್ತುಕೊಡುವುದು. ಈ ಶಿಫಾರಸ್ಸುಗಳ ಕೆಲವು ಭಾಗಗಳನ್ನು (ಉದಾಹರಣೆಗೆ, ಡಿಜಿಟಲ್
ನಿಘಂಟುಗಳು, ಪದ-ಹುಡುಕುವಿಕೆ, ತಿಸೌರಸ್ಗಳು ಇತ್ಯಾದಿ), ಇತರೆ ಕೆಲವು (ಉದಾಹರಣೆಗೆ ಯಾಂತ್ರಿಕ ಪರಿಕರಗಳು)
ಭಾಗಗಳಿಗಿಂತ ಮೊದಲೇ ಕಾರ್ಯರೂಪಕ್ಕೆ ತರಲಾಗುತ್ತದೆ.
|
|
|
|